ಗೌರಿಬಿದನೂರಿನಲ್ಲಿ ಪವರ್ ಗ್ರಿಡ್ ನರ್ಮಾಣ ವಿರೋಧಿಸಿ ಉಪವಾಸ ಸತ್ಯಾಗ್ರಹ

gowribidanur protest against power grid

ಗೌರಿಬಿದನೂರಿನಲ್ಲಿ ಪವರ್ ಗ್ರಿಡ್ ನರ್ಮಾಣ ವಿರೋಧಿಸಿ ಕಳೆದ ಮೂರು ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದ್ರೆ ರೈತರು ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಹತ್ತಿಕ್ಕುವ ಪ್ರಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ. ಪವರ್ ಗ್ರೀಡ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಿರತ 20ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧಿಸಿದ್ದಾರೆ, ಉಪವಾಸ ಸತ್ಯಾಗ್ರಹದಿಂದ ಹಲವರು ಅಸ್ವಸ್ಥರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರೈತರನ್ನು ಬಂಧಿಸಲಾಗಿದೆಯಂತೆ. ಆದ್ರೆ ಜಿಲ್ಲಾಡಳಿತದ ಈ ಕ್ರಮಕ್ಕೆ ರೈತರು ಆಕ್ರೋಶಗೊಂಡಿದ್ದು, ಪರಿಹಾರ ಕ್ರಮ ಕೈಗೊಳ್ಳುವ ಬದಲು ಪೊಲೀಸರನ್ನು ಬಿಟ್ಟು ಬಂಧಿಸೋರು ಯಾವ ನ್ಯಾಯ ಎಂದು ಆರೋಪಿಸಿದ್ದಾರೆ. ಪ್ರತಿಭಟನಾ ನಿರತ ಸಿಪಿಐಎಂ ಹಾಗೂ ರೈತ ಸಂಘಟನೆಗಳು ಇಂದೂ ಕೂಡ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮುಂದುವರೆಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top