ನಮ್ಮ ಮೊಬೈಲ್‍ನಿಂದ ಮಾಹಿತಿ ಪಡೆದು ಟ್ರಾಫಿಕ್ ಇದೆ ಅಂತ ಗೂಗಲ್ ಮ್ಯಾಪ್ ತೋರಿಸುತ್ತಾ..?

ಇತ್ತೀಚೆಗೆ ಎಲ್ಲಿಗೆ ಹೋಗಬೇಕೆಂದರೂ ವಿಳಾಸ ಹುಡುಕಲು ದಾರಿ ನೋಡಲು ಗೂಗಲ್ ಮ್ಯಾಪ್‍ನ್ನು ಉಪಯೋಗಿಸುತ್ತೇವೆ. ನಾವು ಗೂಗಲ್ ಮ್ಯಾಪ್‍ಗೆ ಎಷ್ಟೊಂದು ಅಡಿಕ್ಟ್ ಆಗಿದ್ದೇವೆ ಅಂದರೆ ಡೆಲಿವರಿ ಬಾಯ್ಸ್, ಓಲಾ, ಊಬರ್, ಜನ ಸಾಮಾನ್ಯರಿಗೆ ಇದು ಅತ್ಯಂತ ಇಂಪಾರ್ಟೆಂಟ್ ಅಪ್ಲಿಕೇಶನ್, ಬೆಂಗಳೂರಲ್ಲಿ ಸಾಯಂಕಾಲ ಹಾಗೂ ಬೆಳಗ್ಗೆ ಆಫೀಸಿಗೆ ಹೋಗುವವರು ಮೊದಲು ಗೂಗಲ್ ಮ್ಯಾಪ್ ನೋಡ್ಕೊಂಡು ಯಾವ ರೋಡ್‍ನಲ್ಲಿ ಹೆಚ್ಚು ಟ್ರಾಫಿಕ್(ರೆಡ್ ಕಲರ್) ಇದೆಯೋ ಅದನ್ನು ಆದಷ್ಟು ಬಿಟ್ಟು ಬೇರೆ ರಸ್ತೆಯನ್ನು ಉಪಯೋಗಿಸುವುದು ಸಾಮಾನ್ಯ.

ನಾವೆಲ್ಲರೂ ಗೂಗಲ್ ಮ್ಯಾಪ್ ಈ ಟ್ರಾಫಿಕ್ ಡೀಟೇಲ್ಸ್ ನ್ನು ಆ ರಸ್ತೆಯಲ್ಲಿ ನಿಜವಾಗಿಯೂ ಇರುವ ಕಾರು, ಬೈಕ್, ಬಸ್, ಲಾರಿ ಯತೇಚ್ಛವಾಗಿ ಟ್ರಾಫಿಕ್ ಆಗಿರುವುದನ್ನು ಸೆಟಲೈಟ್ ಮೂಲಕ ತಿಳಿದು ನಮಗೆ ಮಾಹಿತಿಯನ್ನು ಕೊಡುತ್ತೆ ಅಂತ ತಿಳಿದುಕೊಂಡಿದ್ವಿ ಆದರೆ ಈ ಟ್ರಾಫಿಕ್ ಮಾಹಿತಿ ನಮ್ಮದೇ ಮೊಬೈಲ್ ಲೊಕೇಶನ್‍ನಿಂದ ತಿಳಿದು ಆ ರಸ್ತೆಯಲ್ಲಿ ಹೆಚ್ಚು ಮೊಬೈಲ್ಸ್ ಮಾಹಿತಿ ಪಡೆದು ಅದು ಸ್ಲೋ ಮೂವಿಂಗ್ ಇದ್ದರೆ ಅದರ ಆಧಾರದ ಮೇಲೆ ಆ ರಸ್ತೆಯಲ್ಲಿ ಟ್ರಾಫಿಕ್ ಇದೆಯೋ ಇಲ್ಲವೋ ಅಂತ ತಿಳಿಸುತ್ತೆ ಅದು ಹೇಗೆ ಅಂತ ಈ ವಿಡಿಯೋ ನೋಡಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top