ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಹೆಣ್ಣುಮಕ್ಕಳ ಎಣ್ಣೆ ಪಾರ್ಟಿ.!

ದೇಶದಲ್ಲಿ ಎಣ್ಣೆ ಹೊಡೆಯುವುದರಲ್ಲಿ ಮಹಿಳೆಯರ ಪ್ರಮಾಣ ಗಣನೀಯ ಏರಿಕೆ ಆಗಿದೆ‌ ಅನ್ನೋ ಸುದ್ದಿಯನ್ನ ನಿಮ್ಮ‌ ಕನ್ನಡ ನ್ಯೂಸ್ ಲೈವ್ ನಲ್ಲಿ ಕೊಟ್ಟಿದ್ವಿ‌, ಆದ್ರೆ ಈಗ‌ ಅಂತಹದ್ದೆ ಒಂದು‌ ಸುದ್ದಿ ಈಗ ವೈರಲ್ ಕೂಡ ಆಗಿದೆ.

Read : ಎಣ್ಣೆ ಹೊಡೆಯುವುದರಲ್ಲಿ ಮಹಿಳೆಯರ ಪ್ರಮಾಣ ಹೆಚ್ಚು..! ಈ ಸ್ಟೋರಿ ಓದಿ ಗೊತ್ತಾಗುತ್ತೆ..!

ಹೌದು ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿ ಹಾಡಹಗಲೇ ಹೆಣ್ಣುಮಕ್ಕಳು ಎಣ್ಣೆ ಪಾರ್ಟಿ ಮಾಡಿರೋ ಫೋಟೋಗಳು ವೈರಲ್ ಆಗಿದ್ದು, ಶಿವಮೊಗ್ಗ ನಗರ ವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದ್ರೆ ಇದು ಕೇವಲ ಫೋಟೋಗೆ ಫೋಸ್ ಕೊಡಲು ಈ ರೀತಿ ಬಿಯರ್ ಬಾಟಲ್ ಹಿಡಿದಿರಬಹುದು ಅಂತ ಕೆಲವ್ರು ಹೇಳ್ತಾ ಇದ್ರೆ, ಇನ್ನು ಕೆಲವ್ರು ಜಿಲ್ಲೆಯ ಹೃದಯ ಭಾಗವಾಗಿರೋ ಇಂತಹ‌ ಸ್ಥಳದಲ್ಲಿ ಈ ರೀತಿ ಘಟನೆ ನಡೆದಿರೋದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಗಾಂಧಿ ಪಾರ್ಕ್ ನಲ್ಲಿ ಈ ರೀತಿಯ ಘಟನೆಗಳು ನಡೆಯೋದು ಸರಿಯಲ್ಲ ಅಂತ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top