ಗಂಗೂಲಿಯ ಆ ಸಂಭ್ರಮಕ್ಕೆ ಈಗ 18 ವರ್ಷ..!

ಜುಲೈ 13,2002 ಭಾರತೀಯ ಕ್ರಿಕೆಟ್‌ ಅಭಿಮಾನಿಗಳಿಗೆ ಒಂದು ಅವಿಸ್ಮರಣೀಯ ದಿನ , ಆ ಒಂದು ದಿನದ ನೆನಪು ಈಗಲೂ ಅದೆಷ್ಟೋ ಕ್ರಿಕೆಟ್‌ ಪ್ರೇಮಿಗಳು ಭಾರತ ಗೆಲುವನ್ನು ಸಾಧಿಸಿದಾಗ ಆ ದಿನವನ್ನು ನೆನಪು ಮಾಡಿಕೊಳ್ಳದೇ ಇರಲಾರರು, ಹೌದು ನಾವ್‌ ಇವತ್ತು ನಿಮಗೆ ಹೇಳೋಕೆ ಹೊರಟಿರೋದು ೨೦೦೨ ಜುಲೈ ೧೩ರಂದು ಲಾರ್ಡ್ಸ್‌ನಲ್ಲಿ ನಡೆದ ಆ ಒಂದು ಅವಿಸ್ಮರಣೀಯ ಘಟನೆಯನ್ನು, ಅಂದು ಲಾರ್ಡ್ಸ್‌ನ ಮೈದಾನದಲ್ಲಿ ಅಂದಿನ ಟೀಂ ಇಂಡಿಯಾದ ನಾಯಕ ಸೌರವ್‌ ಗಂಗೂಲಿ (ದಾದಾ) ಟೀಂ ಇಂಡಿಯಾದ ಜೆರ್ಸಿಯನ್ನು ತೆಗೆದು ಬರೀ ಮೈಯಲ್ಲಿ ಕುಣಿದು ಕುಪ್ಪಳಿಸಿದ ದಿನವದು, ನಿಮಗೆಲ್ಲರಿಗೂ ಗೊತ್ತಿರೋ ಹಾಗೇ ನ್ಯಾಟ್‌ ವೆಸ್ಟ್‌ ಸರಣಿ ಇದೊಂದು ಇಂಗ್ಲೆಂಡ್‌ನ ಪ್ರತಿಷ್ಠಿತ ಸರಣಿ ಅಂತಾನೇ ಹೇಳ ಬಹುದು, ೨೦೦೨ರಲ್ಲಿ ನಡೆದ ಈ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡ ಫೈನಲ್‌ ಪ್ರವೇಶಿಸಿತ್ತು, ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ನಾಯಕ ನಾಸೀರ್‌ ಹುಸೇನ್‌ ಶತಕದ ನೆರವಿನಿಂದ ೩೨೬ರನ್‌ಗ ಬೃಹತ್‌ ಮೊತ್ತವನ್ನು ನೀಡಿತು.

ಇದನ್ನು ಬೆನ್ನತ್ತಿದ ಭಾರತ ಭರ್ಜರಿ ಓಪನಿಂಗ್‌ ಪಡೆದುಕೊಂಡಿತು, ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ವೀರು ಮತ್ತು ಸೌರವ್‌ ತಂಡವನ್ನು ಉತ್ತಮವಾಗಿ ಕರೆದೊಯ್ಯುತ್ತಿರುವಾ ತಂಡದ ಮೊತ್ತ ೧೦೬ರನ್‌ ಇರುವಾಗ ಗಂಗೂಲಿ ವಿಕೆಟ್‌ ಒಪ್ಪಿಸಿದ್ರು, ಇದರ ಬೆನ್ನಲ್ಲೇ ಭಾರತದ ವಿಕೆಟ್‌ ಪತನವಾಗಲು ಆರಂಭವಾಯಿತು, ೧೦೬ರನ್‌ ಒಂದು ವಿಕೆಟ್‌ ಕಳೆದುಕೊಂಡಿದ್ದ ಭಾರತ ೧೪೬ರನ್‌ ಸೇರಿಸುವಷ್ಟರಲ್ಲಿ ಒಟ್ಟು ೫ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು, ಈ ವೇಳೆಗೆ ಟೀಂಗೆ ಆಸರೆಯಾಗಿದ್ದು, ಯುವಿ ಮತ್ತು ಮೊಹಮ್ಮದ್‌ ಕೈಫ್‌, ಇವರಿಬ್ಬರ ಶತಕದ ಜೊತೆಯಾಟದ ನೆರವಿನಿಂದ ಭಾರತ ಗೆಲುವಿನ ದಡದ ಬಳಿ ಬಂದು ನಿಂತಿತ್ತು, ಇನ್ನೆನೂ ಭಾರತ ಗೆದ್ದೆ ಬಿಟ್ಟಿತು ಎನ್ನುವ ವೇಳೆ ೬೯ರನ್‌ ಗಳಿಸಿದ್ದ ಯುವಿ ವಿಕೆಟ್‌ ಒಪ್ಪಿಸಿದ್ರು, ಹೀಗಿರುವಾಗ ತಮ್ಮ ತಾಳ್ಮೆಯ ಆಟದ ಮೂಲಕ ಗೆಲುವಿನ ದಡ ಸೇರಿಸಿದ್ರು ಮೊಹಮ್ಮದ್‌ ಕೈಪ್‌, ಭಾರತ ೪೯.೩ ಓವರ್‌ ಇರುವಾಗ ೩೨೬ರನ್‌ಗಳ ಗುರಿಯನ್ನು ೮ ವಿಕೆಟ್‌ ಕಳೆದುಕೊಳ್ಳುವ ಮೂಲಕ ಗೆಲುವಿನ ಕೇಕೆ ಹಾಕಿದ್ರು

ಆದ್ರೆ ಭಾರತ ಇನ್ನೇನು ಸೋತೆ ಬಿಟ್ಟಿತು ಅನ್ನುವಾಗ ಗೆಲುವನ್ನು ತನ್ನದಾಗಿಸಿಕೊಂಡಿತು, ಹೀಗಿರುವಾಗ ಒಂದು ಕಡೆ ಗೆಲುವಿನ ಸಂಭ್ರಮಾಚರಣೆಯನ್ನು ಕ್ರಿಕೆಟ್‌ ಅಭಿಮಾನಿಗಳು ಆಚರಿಸುತ್ತಿದ್ದರೆ, ಇತ್ತ ಲಾರ್ಡ್ಸ್‌ನ ಡ್ರೆಸಿಂಗ್‌ ರೂಮ್‌ನಲ್ಲಿ ಮ್ಯಾಚ್‌ ಮುಗಿಯುತ್ತಿದ್ದಂತೆ, ಭಾರತ ತಂಡದ ನಾಯಕ ಸೌರವ್‌ ಗಂಗೂಲಿ ತಾವು ತೊಟ್ಟಿದ ಟೀಂ ಇಂಡಿಯಾದ ಜೆರ್ಸಿಯನ್ನು ತೆಗೆದು ಬೀಸಲು ಶುರುಮಾಡಿದ್ರು, ಆ ಮೂಲಕ ತಂಡದ ಗೆಲುವನ್ನು ಸಂಭ್ರಮಾಚರಣೆ ಮಾಡಿದ್ರು, ಇನ್ನು ಈ ರೀತಿ ಗಂಗೂಲಿ ತಮ್ಮ ಸಂಭ್ರಮಾಚರಣೆ ಮಾಡಲು ಕಾರಣ ಕೂಡ ಇತ್ತು.

ಅದು ೨೦೦೨ ಫೆಬ್ರವರಿಯಲ್ಲಿ ಇಂಗ್ಲೆಂಡ್‌,ಭಾರತ ಪ್ರವಾಸವನ್ನು ಕೈಗೊಂಡಾಗ ಭಾರತ ವಿರುದ್ಧ ಪಂದ್ಯವನ್ನು ಇಂಗ್ಲೆಂಡ್‌ ಗೆದ್ದ ವೇಳೆ ಆಲ್‌ರೌಂಡರ್‌ ಆಂಡ್ರೋ ಫ್ಲಿಂಟಾಫ್‌ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಗೆದ್ದಾಗ ತಮ್ಮ ಶರ್ಟ್‌ ಬಿಚ್ಚು ಮೈದಾನ ತುಂಬಾ ಓಡಾಡುವ ಮೂಲಕ ಸಂಭ್ರಮಾಚರಣೆ ಮಾಡಿದ್ರು, ಅದೇ ಗುಂಗಿನಲ್ಲಿದ್ದ ದಾದಾ ಲಾರ್ಡ್ಸ್‌ನಲ್ಲಿ ಫೈನಲ್‌ ಪಂದ್ಯ ಗೆದ್ದಾಗ ತಮ್ಮ ಸಂಭ್ರಮಾಚರಣೆಯನ್ನು ಚೆರ್ಸಿ ಬಿಚ್ಚಿ ಆಚರಿಸಿದ್ರು, ಈ ಒಂದು ಘಟನೆಗೆ ಈಗ ೧೮ ವರ್ಷ ತುಂಬಿದ್ದು, ಪ್ರತಿಯೊಬ್ಬ ಕ್ರಿಕೆಟ್‌ ಅಭಿಮಾನಿ ಈ ಒಂದು ಘಟನೆಯನ್ನು ಪ್ರತಿ ಪಂದ್ಯ ಭಾರತ ಗೆದ್ದಾಗ ಮೆಲುಕು ಹಾಕೋದನ್ನ ಮರೆಯೋದಿಲ್ಲ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top