
ನಟ ಡ್ಯಾನೀಶ್ ಸೇಠ್ಗೆ ಪುನೀತ್ ರಾಜ್ಕುಮಾರ್ ಬೇವರ್ಸಿ ಕುಡುಕ ಅಂತ ಹೇಳಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗೆಂದ ಮಾತ್ರಕ್ಕೆ ಅಪ್ಪು ನಿಜವಾಗಿಯು ಡ್ಯಾನೀಶ್ ಸೇಠ್ಗೆ ಹಾಗೇ ಬೈದಿದ್ದಾರಾ ಅನ್ನೋ ಅನುಮಾನ ನಿಮಗೆಲ್ಲ ಹುಟ್ಟಿಕೊಳ್ಳಲಿದೆ, ಆದ್ರೆ ಅವರು ಬೈದಿರೋದು ನಿಜ. ಆದ್ರೆ ಅದು ಸಿಟ್ಟಿನಿಂದಲ್ಲ, ಬದಲಿ ಸಿನಿಮಾ ಪ್ರಮೋಷನ್ಗಾಗಿ. ಹೌದು ದ್ಯಾನೀಶ್ ಸೇಠ್ ಅಭಿನಯದ ಪಿಆರ್ಕೆ ಪ್ರೊಡಕ್ಷನ್ ನಿರ್ಮಾಣದ ʻಫ್ರೆಂಚ್ ಬಿರಿಯಾನಿʼ ಸಿನಿಮಾ ನಾಳೆ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದ್ದು,
ಈಗಾಗಲೇ ಚಿತ್ರದ ಪ್ರಮೋಷನ್ ಭರದಿಂದ ಸಾಗುತ್ತಿದೆ, ನಿಮಗೆಲ್ಲರಿಗೂ ಗೊತ್ತಿರುವ ಹಾಗ ದ್ಯಾನೀಶ್ ಸೇಠ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಾಮಿಡಿ ವಿಡಿಯೋಗಳನ್ನು ಹರಿಬಿಡುತ್ತಿರುತ್ತಾರೆ. ಅದರಂತೆ ಈ ಭಾರಿ ಡ್ಯಾನೀಶ್ ಫ್ರೆಂಚ್ ಬಿರಿಯಾನಿ ಸಿನಿಮಾ ಸಲುವಾಗಿ ಒಂದು ಕಾಮಿಡಿ ವಿಡಿಯೋವನ್ನು ಮಾಡಿದ್ದು, ಇದು ಎಲ್ಲರಿಗೂ ಸಖತ್ ಮಜಾ ಕೊಡ್ತಾ ಇದೆ, ಇನ್ನು ಆ ವಿಡಿಯೋದಲ್ಲಿ ಫೆಂಚ್ ಬಿರಿಯಾನಿ ವೆಜ್ಜಾ ಅಥವಾ ನಾನ್ ವೆಜ್ಜಾ ಅನ್ನೋ ಪ್ರಶ್ನೆ ಕೇಳಿರೋ ಡ್ಯಾನೀಶ್, ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುತ್ತಾರೆ.
ಈಗಾಗಲೇ ಫ್ರೆಂಚ್ ಬಿರಿಯಾನಿ ಚಿತ್ರದ ಟ್ರೈಲರ್ ಮತ್ತು ಬೆಂಗಳೂರು ಬಗೆಗಿನ ಹಾಡು ಮತ್ತು ಅಪ್ಪು ಹೇಳಿರೋ ಹಾಡು ಮೋಡಿ ಮಾಡಿದ್ದು, ಚಿತ್ರ ಬಗ್ಗೆ ಸಖತ್ ಇಂಟರೆಸ್ಟಿಂಗ್ ಹುಟ್ಟಿಸಿದೆ, ಹೀಗಿರುವಾಗಲೇ ಡ್ಯಾನೀಶ್ ಮಾಡಿರೋ ಕಾಮಿಡಿ ವಿಡಿಯೋ ಸೋಶಿಯಲ್ ವಿಡಿಯೋ ಸಖತ್ ವೈರಲ್ ಆಗಿದ್ದು, ಅದರಲ್ಲಿ ಪುನೀತ್ ರಾಜ್ಕುಮಾರ್ ಕೊನೆಯಲ್ಲಿ ಬೇವರ್ಸಿ ಕುಡುಕ ಅಂತ ಹೇಳೋ ಮಾತು ಸಖತ್ ವೈರಲ್ ಆಗಿದೆ.
ಇನ್ನು ಈ ಕಾಮಿಡಿ ವಿಡಿಯೋದಲ್ಲಿ ಡ್ಯಾನೀಶ್ ಸಿನಿಮಾ ಬಗ್ಗೆ ತರಹೇವಾರಿ ಕಾಮಿಡಿ ಮಾಡಿ ಕೊನೆಯಲ್ಲಿ ಪುನೀತ್ ರಾಜ್ಕುಮಾರ್ ನಾನು ನಿಮ್ಮ ಬಿಗ್ ಫ್ಯಾನ್ ಅಂತ ಹೇಳಿ ಕೊನೆಗೆ ಗ್ಯೂಮಿ ಒನ್ ಫ್ರೆಂಚ್ ಕಿಸ್ ಅಂದಾಗ , ಪುನೀತ್ ರಾಜ್ಕುಮಾರ್ ಬೇವರ್ಸಿ ಕುಡುಕ ಅದು ಫ್ರೆಂಚ್ ಬಿರಿಯಾನಿ ಅನ್ನೋ ಡೈಲಾಗ್ ಸಖತ್ ಟ್ರೆಂಡ್ ಆಗಿದ್ದು, ಅಪ್ಪು ಫ್ಯಾನ್ಸ್ ಫಿದಾ ಆಗಿದ್ದಾರೆ.
ಇನ್ನು ಪನ್ನಗಭರಣ ನಿರ್ದೇಶನದಲ್ಲಿ ಮೂಡಿ ಬಂದಿರೋ ಫ್ರೆಂಚ್ ಬಿರಿಯಾನಿ ಸಿನಿಮಾಗೆ ಬಿಗ್ಬಾಸ್ ಖ್ಯಾತಿಯ ವಾಸುಕಿ ವೈಭವ್ ಸಂಗೀತ ನೀಡಿದ್ದು, ರಿಲೀಸ್ಗೂ ಮೊದಲೇ ಟ್ರೆಂಡ್ ಸೃಷ್ಟಿ ಮಾಡ್ತಾ ಇದೆ.ನಾಳೆ ಅಮೇಜಾನ್ ಪ್ರೈಮ್ನಲ್ಲಿ ಈ ಸಿನಿಮಾ ರಿಲೀಸ್ ಆಗ್ತಾ ಇದ್ದು, ಇದರ ಪ್ರಮೋಷನ್ ಅರ್ಧವಾಗಿ ಮಾಡಿದ್ದ ಈ ವಿಡಿಯೋ ಕೂಡ ಈಗ ವೈರಲ್ ಆಗುವ ಮೂಲಕ ಸಿನಿಮಾಗೆ ಇನ್ನಷ್ಟು ವೈಲೇಜ್ ನೀಡ್ತಾ ಇದೆ.