ಸರ್ಕಾರದಿಂದ ಮದುವೆಗೆ 10ಗ್ರಾಂ ಚಿನ್ನ ಷರತ್ತುಗಳು ಅನ್ವಯ..!

ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ವಧುವಿಗೆ 10 ಗ್ರಾಂ ಚಿನ್ನ ನೀಡುವ ಯೋಜನೆಯನ್ನು ಸರ್ಕಾರ ಮುಂದಿನ ವರ್ಷದಿಂದ ಕಾರ್ಯರೂಪಕ್ಕೆ ತರಲು ಯೋಚನೆ ನಡೆಸಿದೆ,

ಆದ್ರೆ ಈ ಯೋಜನೆ ಕಾರ್ಯರೂಪಕ್ಕೆ ಬರ್ತಾ ಇರೋದು ನಮ್ಮ ರಾಜ್ಯದಲ್ಲಿ ಅಲ್ಲ ಬದಲಿಗೆ ಅಸ್ಸಾಂ ರಾಜ್ಯದಲ್ಲಿ. ಹೌದು ವಿವಾಹ ನೋಂದಣಿಗೆ ಉತ್ತೇಜನ ಮತ್ತು ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ‘ಅರುಂಧತಿ ಚಿನ್ನದ ಯೋಜನೆ’ ಮುಂದಿನ ವರ್ಷ ಜಾರಿಗೆ ತರಲು ಅಸ್ಸಾಂ ಸರ್ಕಾರ ಯೋಚಿಸಿದ್ದು ಇದಕ್ಕೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಿದೆ. ವಧು ಮತ್ತು ವಧುವಿನ ತಂದೆ ವಾರ್ಷಿಕ 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು, ಜೊತೆಗೆ ವಧು ಮತ್ತು ವರನಿಗೆ 18 ಮತ್ತು 21ವರ್ಷ ಮೀರಿರ ಬೇಕು, ಜೊತೆಗೆ ಮದುವೆ ನೋಂದಣಿ ಸಮಯದಲ್ಲಿ ಚಿನ್ನ ಖರೀದಿಯ ರಶೀದಿಯನ್ನು ಸಹ ನೀಡಬೇಕು.

1954ರ ವಿಶೇಷ ವಿವಾಹ(ಅಸ್ಸಾಂ) ಕಾಯ್ದೆಯಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮದುವೆಯನ್ನು ಔಪಚಾರಿಕವಾಗಿ ನೊಂದಾಯಿಸಿಕೊಂಡ ನಂತರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಮದುವೆ ಸಮಯದಲ್ಲೇ ಚಿನ್ನ ಕೊಳ್ಳಲು ಹಣ ನೀಡಲಾಗುವುದು ಎಂದು ಶರ್ಮಾ ತಿಳಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top