ರಾಜ್ಯದ ಸಿಎಂ ನಾನೇ ಆಗ್ತೀನಿ ಅಂತ ರಾಜ್ಯಪಾಲರಿಗೆ ಪತ್ರ ಬರೆದ ರೈತ..!

ರಾಜಕೀಯ ಪಕ್ಷಗಳು ತಮ್ಮ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡೋವರೆಗೂ ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ರಾಜ್ಯಪಾಲರಿಗೆ ಪತ್ರ ಬರೆದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.. ಕಳೆದ ತಿಂಗಳು ಮಹಾರಾಷ್ಟ್ರ ವಿಧಾನಸಭಾ ಎಲೆಕ್ಷನ್ ನಡೆದಿದ್ದು, ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ಬಹುಮತ ಪಡೆದಿದ್ದರು ಸಿಎಂ ಗಾದಿಗಾಗಿ ಚಟಾಪಟಿ ನಡೀತಾನೇ ಇದೆ.. ಹಾಗಾಗಿ ರೋಸಿ ಹೋಗಿರೋ ರೈತರೊಬ್ಬರು ಸಿಎಂ ಯಾರು ಆಗಬೇಕು ಅಂತ ನಿರ್ಧಾರ ಮಾಡುವವರೆಗೂ ನಾನೇ ಸಿಎಂ ಆಗಿರ್ತೀನಿ ಅಂತ ರಾಜ್ಯಲಾಲರಿಗೆ ಪತ್ರಬರೆದಿದ್ದಾರೆ. ಇನ್ನು ಪತ್ರ ಬರೆದಿರೋ ರೈತ ಬೀಡ್ ಜಿಲ್ಲೆಯ ಕೇಜ್ ತಾಲೂಕಿನ ವಡಮೌಳಿ ಗ್ರಾಮದ ಶ್ರೀಕಂಠ ವಿಷ್ಣು ಗಡಲೆ ಎಂಬ ರೈತ ಪತ್ರ ಬರೆದು ಅದನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಇದನ್ನು ರಾಜ್ಯಪಾಲರಿಗೆ ನೀಡಿ ಎಂದು ಪತ್ರ ಜಿಲ್ಲಾಧಿಕಾರಿಗಳಿ ಕೊಟ್ಟಿದ್ದಾರೆ.


ಇನ್ನು ರೈತ ಪತ್ರದಲ್ಲಿ
ರಾಜ್ಯದಲ್ಲಿ ಎಲೆಕ್ಷನ್ ಮುಗಿದು ಬಿಜೆಪಿ ಶಿವಸೇನೆ ಬಹುಮತ ಬಂದಿದ್ದು ಇಬ್ಬರು ಸಿಎಂ ಗಾದಿಗಾಗಿ ಚಟಾಪಟಿ ನಡೆಸುತ್ತಿದ್ದಾರೆ. ಮಳೆಯಿಂದಾಗಿ ಭಾರಿ ಅನಾಹುತಗಳಾಗಿವೆ, ರೈತರು ಸಂಕಷ್ಟದಲ್ಲಿದ್ದಾರೆ. ಆದ್ರೆ ಎರಡು ಪಕ್ಷಗಳು ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಆದ್ದರಿಂದ ನೀವೂ ನನಗೆ ಮುಖ್ಯಮಂತ್ರಿ ಹುದ್ದೆ ಕೊಡಬೇಕು ಎಂದು ಪತ್ರದಲ್ಲಿ ಬರೆದು, ನಾನು ರೈತರ ಸಮಸ್ಯೆಗಳನ್ನು ಬಗೆ ಹರಿಸುತ್ತೇನೆ, ರಾಜ್ಯದ ಸಮಸ್ಯೆಗಳ‌ನ್ನು ಬಗೆಹರಿಸುತ್ತೇನೆ,ಈ ಪತ್ರವನ್ನು ಪರಿಗಣನೆಗೆ ತೆಗೆದುಕೊಂಡು ನನ್ನನ್ನು ಸಿಎಂ ಮಾಡಬೇಕು.

ಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ನಾನು ಇದರ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top