ಕನ್ನಡದಲ್ಲೂ ಶುರುವಾಗ್ತಾ ಇದೆ ವೆಬ್ ಸೀರಿಸ್- ಮೊದಲ ವೆಬ್ ಸೀರಿಸ್‍ನ ಕಥೆ ಯಾರದು ಗೊತ್ತಾ.?

kannada web series

ವೆಬ್ ಸೀರಿಸ್ ಸದ್ಯ ಓಟಿಟಿಯಲ್ಲಿ ಅತಿ ಹೆಚ್ಚು ಸದ್ದು ಮಾಡ್ತಾ ಇರೋ ಮನೋರಂಜನೆ ಮತ್ತು ಒಂದುಷ್ಟು ವಿಷಯಗಳನ್ನು ತಿಳಿಸೋ ಕಾರ್ಯವಾಗ್ತಾ ಇದೆ.ಒಂದು ಕಡೆ ಕೋಟಿ ಗಟ್ಟಲೆ ಹಣ ಸುರಿದು ಸಿನಿಮಾ ಮಾಡುವ ಬದಲು, ಒಂದಿಷ್ಟ ಹಣ ಹಾಕಿ ವೆಬ್ ಸೀರಿಸ್ ಮಾಡಿ ಲಾಭ ಮಾಡೋ ಕಾನ್ಸೆಪ್ಟ್‍ಗೆ ಮೊರೆ ಹೋಗಿದ್ದಾರೆ. ಹಲವು ಪ್ರೊಡ್ಯೂಸರ್‍ಗಳು, ಇನ್ನು ಓಟಿಟಿಯಲ್ಲಿ ಬರೋ ವೆಬ್ ಸೀರಿಸ್‍ಗಳ ಮೇಲೆ ಒಂದು ಆಪಾದನೆಯೂ ಕೂಡ ಇದ್ದು, ವೆಬ್ ಸೀರಿಸ್‍ಗಳನ್ನು ಸೆನ್ಸಾರ್ ಮಾಡಬೇಕು ಅನ್ನೋ ಕೂಗುಗಳು ಸಹ ಕೇಳಿ ಬರ್ತಾ ಇದೆ.

ಹೀಗಿರುವಾಗ ಓಟಿಟಿಯಲ್ಲಿ ವೆಬ್ ಸೀರಿಸ್ ನೋಡಿದ ಕನ್ನಡ ಪ್ರೇಕ್ಷಕ ಕೂಡ ಯಾಕೆ ಕನ್ನಡದಲ್ಲಿ ಈ ರೀತಿಯ ವೆಬ್ ಸೀರಿಸ್‍ಗಳು ಮಾಡೋ ಪ್ರಯತ್ನ ಮಾಡೋದಿಲ್ಲ ಅನ್ನೋ ಮಾತುಗಳು ಕೇಳಿ ಬರ್ತಾ ಇವೆ. ಇನ್ನು ಹಾಗೊಂದು ಹೀಗೊಂದು ಬಂದರು ಅವು ಸದ್ದು ಕೂಡ ಮಾಡುವುದಿಲ್ಲ. ಹೀಗಿರುವಾಗ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ವೆಬ್ ಸೀರಿಸ್ ಮಾಡಲು ಮುಂದಾಗಿದ್ದು, ಅದರ ಮುಂದಾಳತ್ವವನ್ನು ವಹಿಸಿಕೊಂಡಿದ್ದಾರೆ. ಎ ಎಂ ಆರ್ ರಮೇಶ್.

ಹೌದು ಎ ಎಂ ಆರ್ ರಮೇಶ್ ಹೇಳಿ ಕೇಳಿ ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡುವ ವ್ಯಕ್ತಿ , ಹೀಗಿರುವಾಗ ರಮೇಶ್ ಈಗ ವೀರಪ್ಪನ್ ಜೀವನಾಧಾರಿತವನ್ನು ವೆಬ್‍ಸೀರಿಸ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ರಮೇಶ್ ಅಟ್ಟಹಾಸ ಚಿತ್ರದ ಮೂಲಕ ವೀರಪ್ಪನ್ ಅಟ್ಟಹಾಸವನ್ನು ತೋರಿಸಿದ್ದು, ಈಗ ಮತ್ತೆ ಅವನ ಇನ್ನೊಂದಿಷ್ಟು ವಿಷಯವನ್ನು ತಿಳಿಸಲು ಮುಂದಾಗಿದ್ದಾರೆ.

ತಾವು ಅಟ್ಟಹಾಸ ಸಿನಿಮಾ ಮಾಡುವ ವೇಳೆ ವೀರಪ್ಪನ್ ಬಗ್ಗೆ ಮಾಡಿದ್ದ ಸಂಶೋಧನೆಯ ಕೆಲವು ಭಾಗಗಳನ್ನು ಸಿನಿಮಾದಲ್ಲಿ ತೋರಿಸಲು ಸಾಧ್ಯವಾಗಿರಲಿಲ್ಲ, ಹಾಗಾಗಿ ಈಗ ಮತ್ತೆ ಆ ಪ್ರಯತ್ನಕ್ಕೆ ಎಎಂಆರ್ ರಮೇಶ್ ಕೈ ಹಾಕಿದ್ದಾರೆ. ಇನ್ನು ಇದನ್ನು ಈಗ ವೆಬ್ ಸೀರಿಸ್ ಮೂಲಕ ವೀರಪ್ಪನ್ ಕುರಿತಾದ ಇನ್ನಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ತೋರಿಸಲು ರೆಡಿಯಾಗುತ್ತಿದ್ದಾರೆ.

ಇನ್ನು ಅಟ್ಟಹಾಸ ಚಿತ್ರದಲ್ಲಿ ವೀರಪ್ಪನ್ ಪಾತ್ರವನ್ನು ನಿರ್ವಹಿಸಿದ್ದ ಕಿಶೋರ್ ವೀರಪ್ಪನ್ ವೆಬ್ ಸೀರಿಸ್‍ನಲ್ಲಿ ಕಾಣಸಿಕೊಳ್ಳುತ್ತಿದ್ದು. ಇನ್ನು ವೀರಪ್ಪನ್ ವೆಬ್‍ಸೀರಿಸ್‍ಗೆ `ಹಂಗ್ರಿ ಆಫ್ ಕಿಲ್ಲಿಂಗ್’ ಅನ್ನೋ ಟೈಟಲ್ ಕೂಡ ಇಟ್ಟಿದ್ದು, ಸದ್ಯದರಲ್ಲಿಯೇ ಫಸ್ಟ್ ಲುಕ್ ಕೂಡ ಬಿಡುಗಡೆ ಮಾಡಲಿದ್ದಾರೆ.

ಸತ್ಯಮಂಗಲ ಕಾಡಿನಲ್ಲಿ ಈ ರೋಚಕ ವೆಬ್ ಸೀರಿಸ್‍ನ ಚಿತ್ರೀಕರಣ ನಡೆಯಲಿದ್ದು, ಇದು ನಾಲ್ಕು ಭಾಷೆಯಲ್ಲಿ ತಯಾರಾಗಲಿದೆ. ಕನ್ನಡ,ತೆಲುಗು,ತಮಿಳು ಮತ್ತ ಹಿಂದಿ ಭಾಷೆಯಲ್ಲಿ ಈ ವೆಬ್‍ಸೀರಿಸ್ ರೆಡಿಯಾಗಲಿದ್ದು. ಮತ್ತೆ ನರಹಂತಕ ವೀರಪ್ಪನ್ ಸದ್ದು ಮಾಡಲಿದ್ದಾನೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top