ಪೌರ ಕಾರ್ಮಿಕರಾಗಲು ಹೊರಟಿದ್ದಾರೆ ದೇಶದ ಎಂಜಿನಿಯರ್ಸ್‌ಗಳು..!

ದೇಶದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕೆಲಸದ ಅಭದ್ರತೆ ಈಗ ಎಲ್ಲಾ ಕಡೆ ಕಾಡ್ತಾ ಇದೆ. ಇದೇ ವೇಳೆ ಈಗ ಹೊಸದೊಂದು ಸುದ್ದಿ ಹೊರ ಬಿದ್ದಿದ್ದು ಈಗ ಎಲ್ಲಾರಲ್ಲೂ ಅಚ್ಚರಿ ಆಗುವಂತೆ ಮಾಡಿದೆ. ಹೌದು ಇತ್ತೀಚಿನ ದಿನಗಳಲ್ಲಿ ಎಂಜಿನಿಯರ್ಸ್‌ಗಳು ಮತ್ತು ಪದವೀಧರರು ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಹಾಕುವ ಸಂಖ್ಯೆ ಹೆಚ್ಚಾಗಿದೆ ಅನ್ನೋ ಮಾಹಿತಿ ಈಗ ಹೊರ ಬಿದ್ದಿದೆ.


ಕೊಯಮತ್ತೂರಿನಲ್ಲಿ ಇತ್ತಿಚೆಗೆ ಸ್ಥಳೀಯ ನಗರ ಪಾಲಿಕೆಯ ೫೪೯ ಪೌರಕಾರ್ಮಿಕ ಖಾಲಿ ಹುದ್ದೇಗಳಿಗೆ ಅರ್ಜಿಯನ್ನು ಕರೆಯಲಾಗಿತ್ತು, ಗ್ರೇಡ್‌-1 ಪೌರ ಕಾರ್ಮಿಕರ ಖಾಲಿ ಹುದ್ದೆಗೆ ಅರ್ಜಿ ಕರೆಯಲಾಗಿತ್ತು, ಇನ್ನು ಹುದ್ದೆಗೆ ಬಂದಿದ್ದ ಅರ್ಜಿಗಳ ಸಂಖ್ಯೆ ಬರೋಬ್ಬರಿ 7000, ಆದ್ರೆ ಇಲ್ಲಿ ಅಚ್ಚರಿಯ ವಿಷಯವೇನೆಂದ್ರೆ ಈ ಅರ್ಜಿಸಲ್ಲಿದ ಅರ್ಜಿದಾರರಲ್ಲಿ ಶೇ70ರಷ್ಟು ಮಂದಿ ಕನಿಷ್ಠ ವಿದ್ಯಾಹರ್ತೆ ಎಸ್‌ಎಸ್‌ಎಲ್‌ಸಿ ಮುಗಿಸಿದವರಾಗಿದ್ದಾರೆ. ಇನ್ನು ಉಳಿದ ಶೇ30 ಮಂದಿ ಉದ್ಯೋಗಾಕಾಂಕ್ಷಿಗಳಲ್ಲಿ ಎಂಜಿಯರಿಂಗ್‌, ಡಿಪ್ಲೊಮೊ ಮತ್ತಿತರ ಪದವಿ ಪಡೆದ ಪ್ರತಿಭಾವಂತರು ಸೇರಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಈ ಪೌರ ಕಾರ್ಮಿಕ ಹುದ್ದಗೆ 15,700 ರೂ ಮಾಸಿಕ ಸಂಬಳ ನಿಗದಿ ಪಡಿಸಲಾಗಿದ್ದು. ಇದು ಉತ್ತಮ ಮೊತ್ತದ ಸಂಬಳವಾಗಿದ್ದು ಪದವೀಧರರನ್ನು ಆಕರ್ಷಿಸಿದೆ. ಅಷ್ಟೇ ಅಲ್ಲದೇ ಸರ್ಕಾರಿ ನೌಕರಿ ಎಂಬ ಭದ್ರತೆಯ ಭಾವನೆಯಿಂದ ಅರ್ಜಿ ಸಲ್ಲಿಸಿದ ಪದವೀಧರಲ್ಲಿ ಕೆಲವರು ಈಗಾಗಲೇ ಖಾಸಗಿ ಕಂಪನಿಗಳಲ್ಲಿ ದೊಡ್ಡ ಮೊತ್ತದಲ್ಲಿ ಸಂಬಳ ಪಡೆಯುತ್ತಿದ್ದಾರೆ. ಆದರೂ ಉದ್ಯೋಗ ಭದ್ರತೆ ದೃಷ್ಟಿಯಿಂದಾಗಿ ಅರ್ಜಿ ಸಲ್ಲಿಸಿದ್ದಾರೆ ಅನ್ನೋ ಮಾತನ್ನು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top