EMI ಮರುಪಾವತಿ ಸುಪ್ರೀಂಕೋರ್ಟ್‌ನಿಂದ ಬಿಗ್‌ ರಿಲೀಫ್‌..

ಸಾಲಗಾರರರಿಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ, ಈ ವರ್ಷದ ಆಗಸ್ಟ್‌ 31ರ ವರೆಗೆ ವಸೂಲಾಗದ ಸಾಲ ಎಂದು ಘೋಷಿಸಿಲ್ಲದ ಸಾಲೆ ಖಾತೆಗಳನ್ನು ಮುಂದಿನ ಆದೇಶದವರೆಗೆ ಎಸ್‌ಪಿಎ ಆಗಿ ಘೋಷಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ನಿರ್ಧೇಶನ ನೀಡಿದೆ. ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟದಿಂದ ಸಾಲ ಮರುಪಾವತಿಯನ್ನು ೬ ತಿಂಗಳ ಕಾಲ ಮುಂದೂಡಲಾಗಿತ್ತು. ಈ ಅವಧಿಯಲ್ಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠ ನಡೆಸಿದ್ದು , ಆಗಸ್ಟ್‌ ೩೧ರವರೆಗೆ ಎನ್‌ಪಿಎ ಆಗಿಲ್ಲದ ಖಾತೆಗಳನ್ನು ಮುಂದಿನ ಆದೇಶದವರೆಗೆ ಎನ್‌ಪಿಎ ಆಗಿ ಘೋಷಿಸಬಾರದು ಎಂದು ನಿರ್ದೇಶನ ನೀಡಿದೆ.
ಇದಿರಂದಗಾಗಿ ಸಾಲಪಡೆದು ಇಎಂಐ ಪಾವತಿಸಲಾಗದ ಸಾಲಗಾರರಿಗೆ ಕೊಂಚ ರಿಲೀಫ್‌ ಸಿಕ್ಕಿದೆ. ಇನ್ನು ಇಎಂಐ ಮುಂದೂಡಿಕೆ ಅವಧಿಯಲ್ಲಿ ಬ್ಯಾಂಕುಗಳು ಬಡ್ಡಿ ವಿಧಿಸಿರುವುದನ್ನು ಪ್ರಶ್ನಿಸಿ ಅರ್ಜಿಸಲ್ಲಿಸಿದ್ದು ವಿಚಾರಣೆ ಸೆ.೧೦ಕ್ಕೆ ನಡೆಯಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top