ಕಾರ್‌ ಹತ್ತಿ ಕಾರ್‌ಬಾರ್‌ ಮಾಡಿದ ಆನೆ..!ಎಲ್ಲಿ ಗೊತ್ತಾ..?

ನೀವೂ ಸಾಮಾನ್ಯವಾಗಿ ಬಂಡಿಪುರ..ಅಥವಾ ಬೇರೆ ಯಾವುದೇ ಕಾಡಿನಲ್ಲಿ ಸಂಚರಿಸುವಾಗ ಹಲವು ಪ್ರಾಣಿಗಳು ಅಡ್ಡ ಬರುವುದನ್ನು ನೋಡಿರ್ತಿರಿ..ಅಲ್ಲದೇ ಅನೆಗಳು ಅಡ್ಡ ಬರೋದು ಅಥವಾ ಪಕ್ಕದಲ್ಲಿ ನಿಂತು ಆಹಾರ ಸೇವನೆ ಮಾಡುತ್ತಿರೋದನ್ನು ನೋಡಿರ್ತೀರಾ..ಇನ್ನು ಆನೆಗಳು ವಾಹನ ಸವಾರರನ್ನು ಅಡ್ಡಗಟ್ಟಿ ಗಾಡಿಯನ್ನು ಜಖಂ ಮಾಡಿರೋ ವಿಡಿಯೋವನ್ನು ನೋಡಿರ್ತೀವಿ. ಆದ್ರೆ ಇಲ್ಲೊಂದು ಕಾರಿನ ಟಾಪ್‌ ಹತ್ತಿ ಕೂತ ಘಟನೆಯೊಂದು ನಡೆದಿದೆ. ಈ ಘಟನೆ ನಡೆದಿರೋದು ಮಾತ್ರ ಕರ್ನಾಟಕದಲ್ಲಿ ಅಲ್ಲ ಬದಲಿಗೆ ಬ್ಯಾಂಕಾಕ್‌ನಲ್ಲಿ.
ಥೈಲ್ಯಾಂಡ್‌ನ ಖಾವೋ ಯೈ ರಾಷ್ಟ್ರೀಯ ಉದ್ಯಾನವದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರನ್ನು ಆನೆಯೊಂದು ಅಡ್ಡಗಟ್ಟಿ , ಟಾಪ್‌ ಹತ್ತಿ ಕೂತಿದೆ, ಸದ್ಯ ಈ ದೃಶ್ಯ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡ್ಯುಯಾ ಹೆಸರಿನ ಆನೆ ಈ ಕಿತಾಪತಿ ಮಾಡಿದ್ದು.. ಮಾರ್ಗದಲ್ಲಿ ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ, ಕಾರಿನ ಟಾಪ್‌ನಲ್ಲಿ ಕುಳಿತುಕೊಳ್ಳಲು ಯತ್ನಿಸಿದೆ, ಮೊದಲು ಕಾರಿನ ಮುಂಭಾಗದಿಂದ ಹತ್ತಲು ಪ್ರಯತ್ನಿಸಿದ್ದು, ಆಗದೇ ಇದ್ದಾಗ ಹಿಂಭಾಗದಿಂದ ಹತ್ತಿ ಕೂತಿದೆ.. ಈ ವೇಳೆ ಕಾರಿನ ಟಾಪ್‌ ಜಖಂ ಆಗಿದ್ದು, ಕಾರಿನ ಹಿಂಭಾಗದ ಗಾಜು ಪುಡಿಯಾಗಿದೆ, ಅದೃಷ್ಟವಶಾತ್‌ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ಇನ್ನು ಕಾರಿನಲ್ಲಿ ಎಷ್ಟು ಜನ ಇದ್ದರು ಅನ್ನೋ ಮಾಹಿತಿಯೂ ಸಹ ಸಿಕ್ಕಿಲ್ಲ..

ಈ ವಿಷಯ ತಿಳಿದ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಈ ಆನೆ ಯಾವಾಗಲೂ ಈ ರೀತಿ ಮಾಡಿರಲಿಲ್ಲ, ಆನೆ ಅಲ್ಲಿ ಬರುವ ಜನರನ್ನು ಯಾವಾಗಲೂ ಸ್ವಾಗತಿಸುತ್ತಿದ್ದು, ಆದ್ರೆ ಯಾಕೆ ಹೀಗೆ ಮಾಡಿತು ಅನ್ನೋದು ಗೊತ್ತಾಗುತ್ತಿಲ್ಲ.. ಈ ರಸ್ತೆಯಲ್ಲಿ ಸಂಚರಿಸುವವರು ಆನೆ ಕಂಡಾಗ ಅದು ಅಡ್ಡಗಟ್ಟಲು ಪ್ರಯತ್ನಿಸಿದ್ರೆ ಮೂವತ್ತು ಮೀಟರ್‌ ದೂರ ಅಂತರವನ್ನು ಕಾಯ್ದುಕೊಳ್ಳಿ ಅಂತ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top