ಈರುಳ್ಳಿ ಕೆಜಿಗೆ 100 ಅಲ್ಲಾ 1000 ರೂಪಾಯಿ ಆಗಲಿ ಈ ಊರಿನವರು ತಲೆ ಕೆಡಸಿಕೊಳ್ಳಲ್ಲ!

ಹೇ ಯಾರ್ ಏನ್ ಬೇಕಾದ್ರೂ ಮಾಡ್ಲಿ..ಯಾರ್ ಏನ್ ಬೇಕಾದ್ರೂ ಹೇಳ್ಲಿ..ಐ ಡೋಂಟ್ ಕೇರ್ ಅನ್ನೋ ರೀತಿ..ಈ ಒಂದು ಊರಲ್ಲಿ ಈರುಳ್ಳಿ ಕೆಜಿಗೆ 100ರೂ ಅಲ್ಲಾ 1000 ರೂಪಾಯಿ ಆದ್ರೂ ಈ ಗ್ರಾಮಸ್ಥರು ಮಾತ್ರ ಡೋಂಟ್ ಕೇರ್ ಅಂತಾರೇ.. ಹೌದು ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೆ ಏರ್ತಾ ಇದ್ದು, ಜನರು ಈರುಳ್ಳಿ ಕೊಂಡುಕೊಳ್ಳೋದು ಹೇಗೆ, ಈರುಳ್ಳಿ ಇಲ್ಲದೆ ಅಡುಗೆ ಮಾಡೋದು ಹೇಗೆ ಅಂತ ಯೋಚಿಸೋಕೆ ಶುರುಮಾಡಿದ್ರೆ, ಈ ಒಂದು ಊರಲ್ಲಿ ಮಾತ್ರ ಈರುಳ್ಳಿ ಬೆಲೆ ಎಷ್ಟೇ ಜಾಸ್ತಿ ಆದ್ರೂ ತಲೆಕೆಡಿಸಿಕೊಳ್ಳಲ್ಲ ಅಂತಾರೇ .ಈ ಊರು ಇರೋದು ಬಿಹಾರದಲ್ಲಿ, ತ್ರಿಲೋಕಿ ಬಿಘಾ ಹಳ್ಳಿಯ ಜನರಿಗೆ ಈರುಳ್ಳಿ ಬೆಲೆ 100ರೂ ಅಲ್ಲಾ 1000 ರೂಪಾಯಿಯಾದ್ರು ತಲೆ ಕಡಿಸಿಕೊಳ್ಳಲ್ಲ, ಏಕೆಂದರೆ ಈ ಹಳ್ಳಿಯ ಜನ ಈರುಳ್ಳಿಯನ್ನೇ ಬಳಸುವುದಿಲ್ಲವಂತೆ. ಪಟನಾದಿಂದ 80ಕಿಲೋ ಮೀಟರ್ ದೂರದಲ್ಲಿರೋ ಈ ಹಳ್ಳಿಯಲ್ಲಿ 35 ಕುಟುಂಬಗಳಿದ್ದು ಸುಮಾರು 300-400ಜನ ಈ ಊರಿನಲ್ಲಿ ವಾಸಿಸುತ್ತಿದ್ದಾರೆ. ಆದ್ರೆ ಈ ಊರಿನ ಯಾವ ವ್ಯಕ್ತಿಯು ಕೂಡ ಈರುಳ್ಳಿಯನ್ನು ಸೇವನೆ ಮಾಡುವುದಿಲ್ಲ, ಇಲ್ಲಿನ‌ ಜನ ನೂರು ವರ್ಷಗಳ ಹಿಂದೆ ಈರುಳ್ಳಿ ಜೊತೆ ಬೆಳ್ಳುಳ್ಳಿ ಸೇವನೆಯನ್ನು ಬಿಟ್ಟಿದ್ದು,ಈ ಹಳ್ಳಿಯಲ್ಲಿ ವಿಷ್ಣು ದೇವಾಲಯ ಆದ ಮೇಲೆ ದೇವರಿಗಾಗಿ ಜನರು ಈರುಳ್ಳಿಯನ್ನು ತಿನ್ನುವುದನ್ನು ಬಿಟ್ಟಿದ್ದಾರಂತೆ.

ಅಂದ ಹಾಗೆ ಜಪಾನ್ ಹಾಗೂ ಕೆಲವು ದೇಶಗಳಲ್ಲೂ ಸಹ ಯಾವುದೇ ತರಕಾರಿ ಬೆಲೆ ಹೆಚ್ಚಾದರೆ ತಲೆಕೆಡಿಸಿಕೊಳ್ಳುವುದಿಲ್ಲ ಬದಲಿಗೆ ಸ್ವಲ್ಪ ದಿನ ಆ ತರಕಾರಿ ಸೇವನೆಯನ್ನ ಕಡಿಮೆ ಮಾಡುತ್ತಾರೆ ಇದರಿಂದ ಬೇಡಿಕೆ ಕಡಿಮೆಯಾಗಿ ಸ್ವಾಭಾವಿಕವಾಗಿ ಆ ತರಕಾರಿ ಬೆಲೆ ಕಡಿಮೆಯಾಗುತ್ತೆ ಅನ್ನೋದು ಅವರ ನಂಬಿಕೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top