ಸಲಗನಿಗಾಗಿ ಮಲೆಮಾದೇಶ್ವರ ಬೆಟ್ಟ ಹತ್ತಿದ ದುನಿಯಾ ವಿಜಿ.!

ದುನಿಯಾ ವಿಜಿ ನಿರ್ದೇಶನದ ಸಲಗ ಚಿತ್ರ ಇನ್ನೆನೂ‌ ರಿಲೀಸ್ ಗೆ ರೆಡಿಯಾಗಿದ್ದು, ಚಿತ್ರದ ಸಕ್ಸಸ್ ಗಾಗಿ ಅಭಿಮಾನಿಗಳು ಮತ್ತು ಚಿತ್ರತಂಡ ದೇವರ ಮೊರೆ ಹೋಗಿದ್ದಾರೆ. ಇನ್ನು ದುನಿಯಾ ವಿಜಿ ದಂಪತಿ ಸಮೇತರಾಗಿ ಮಲೆಮಾದೇಶ್ವರ ಬೆಟ್ಟಕ್ಕೆ ಹೋಗಿದ್ದು ಈ ಮೂಲಕ ಸಲಗ‌ ಚಿತ್ರಕ್ಕೆ ಆಶೀರ್ವಾದ ಪಡೆದುಕೊಂಡಿದ್ದಾರೆ.

ಇನ್ನು ದುನಿಯಾ ವಿಜಿ ಸಂಗೀತ‌‌ ನಿರ್ದೇಶಕ ನವೀನ್‌ ಸಜ್ಜು ಕೂಡ ಸಾಥ್ ನೀಡಿದ್ದು, ಮಾದೇಶ್ವರ ಬೆಟ್ಟದಲ್ಲಿ ಆನೆಗೆ ಹಣ್ಣು ಹಂಪಲು ಕೊಟ್ಟು ಆಶೀರ್ವಾದ ಪಡೆದುಕೊಂಡರು, ಇನ್ನು ಸಲಗ ಚಿತ್ರವನ್ನು ಇದೇ ತಿಂಗಳ ಕೊನೆಯಲ್ಲಿ ತೆರೆಮೇಲೆ ತರೋ ಪ್ಲಾನ್ ಮಾಡಿಕೊಳ್ತಾ ಇದೆ ಚಿತ್ರತಂಡ…

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top