ಅಪ್ಪನ ವಿರುದ್ಧ ಸ್ಫೊಟಕ ಹೇಳಿಕೆ ಕೊಟ್ಟ ಮೋನಿಕಾ..!

ನಿನ್ನೆ ದುನಿಯಾ ವಿಜಿ ಪುತ್ರಿ ಮೋನಿಕಾ ಅಪ್ಪನ ವಿರುದ್ಧವೇ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. ಇನ್ನು ಮೋನಿಕಾ ತನ್ನ ಮೇಲೆ ಅಪ್ಪನೇ ಹಲ್ಲೇ ನಡೆಸಿದ್ದಾರೆ ಎಂದು ಆಸ್ಪತ್ರೆಗೆ ಸೇರಿದ್ದ ಮೋನಿಕಾ ಇಂದು ಡಿಸ್ಚಾರ್ಜ್ ಆದ ಬಳಿಕ ಅಪ್ಪನ ವಿರುದ್ಧವೇ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ..ಮನೆಯಲ್ಲಿ ಕೀರ್ತಿಗೌಡ ವಿಚಾರಕ್ಕೆ ಗಲಾಟೆ ಆಗಿದ್ದು. ಮನೆಗೆ ಹೋದಾಗ ಕೀರ್ತಿ ಪರವಾಗಿ ಮಾತನಾಡು ಅಂತ ಹೇಳಿದ್ರು. ಅಲ್ಲದೇ ನಿಮ್ಮ ಅಮ್ಮನ ವಿರುದ್ಧ ದೂರು ಕೊಡು ಅಂದಿದ್ರು. ಅಪ್ಪ ಮತ್ತು ಕೀರ್ತಿ ಸೇರಿ ಮೊದಲು ಗಲಾಟೆ ಶುರು ಮಾಡಿದ್ದು ಮನೆಯಲ್ಲಿ 5 ಜನ ಸೇರಿ ನನ್ನನ್ನು ಹೊಡೆದ್ರು. ಆಮೇಲೆ ನನ್ನನ್ನ ಮನೆಯಿಂದ ಹೊರಗೆ ಹಾಕಿ ಬಾಗಿಲು‌ ಹಾಕಿದ್ರು. ಆಗ ನಾನು ಕಲ್ಲು‌ ತೆಗೆದುಕೊಂಡು ಬಾಗಿಲಿಗೆ ಹೊಡೆದೆ. ಅವ್ರು ನನಗೆ ಬೈದಿದ್ದಕ್ಕೆ ನಾನು ಬೈದೆ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ ಅಂತ ಡಿಸ್ಚಾರ್ಜ್ ಆದ ಬಳಿಕ ಮೋನಿಕಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top