ಹೊಸ ದಾಖಲೆ ಬರೆದ ವಿಜಿ-ಡಾಲಿ ಸಲಗ ಆಡಿಯೋ..?

ಟಗರು ಸೃಷ್ಟಿಸಿದ ಟ್ರೆಂಡು ಇನ್ನೂ ಹಂಗೇ ಇದೆ.. ಆ ಚಿತ್ರದ ಮ್ಯೂಸಿಕ್ಕು ಹಿಡಿಸಿದ ಗುಂಗು ಇನ್ನೂ ಹಾಗೇ ಇದೆ. ಹೀಗಿರೋವಾಗ್ಲೇ ಅದೇ ಟಗರು ನಿರ್ಮಾಪಕರು ತಂತ್ರಜ್ಞರೆಲ್ಲಾರ ಜೊತೆಗೆ ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದೊಂದಿಗೆ ನಟಿಸಿರೋ ಸಿನಿಮಾ ಸಲಗ. ಡಾಲಿ ಧನಂಜಯ, ದುನಿಯಾ ವಿಜಯ್, ಸಂಜನಾ ಆನಂದ್, ಕಾಕ್ರೋಚ್ ಖ್ಯಾತಿಯ ಸುಧಿ ಸೇರಿದಂತೆ ಅಪ್ರತಿಮ ಪ್ರತಿಭಾವಂತ ತಾರಾಬಳಗ ಚಿತ್ರದಲ್ಲಿದೆ. ವೀನಸ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಡಿಯಲ್ಲಿ ಟಗರು ನಿರ್ಮಾಪಕ ಕೆ.ಪಿ,ಶ್ರೀಕಾಂತ್ ನಿರ್ಮಿಸ್ತಿರೋ ಈ ಚಿತ್ರ ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಬಂದಿದೆ. ಇದೇ 18ಕ್ಕೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋದಾಗಿ ಅನೌನ್ಸ್ಮೆಂಟ್ ಮಾಡಿರೋ ಚಿತ್ರತಂಡ, ಗ್ಯಾಪ್ ನಲ್ಲೊಂದು ಬ್ಲ್ಯಾಸ್ಟಿಂಗ್ ನ್ಯೂಸ್ ಕೊಟ್ಟಿದೆ. ಅದೇನಪ್ಪಾ ಅಂದ್ರೆ, ಸಲಗ ಚಿತ್ರದ ಆಡಿಯೋ ರೈಟ್ಸ್ ದಾಖಲೆಯ ಬೆಲೆಗೆ ಸೋಲ್ಡೌಟ್ ಆಗಿದೆ.


ಟಗರು ಟ್ರೆಂಡು ಸಲಗ ಮ್ಯೂಸಿಕ್ಕಿಗೆ ಭಾರಿ ಡಿಮ್ಯಾಂಡು
ಚರಣ್ ರಾಜ್ ಸಂಗೀತ ಸಂಯೋಜನೆಯ ಟಗರು ಚಿತ್ರ ಸೃಷ್ಟಿಸಿದ ಮ್ಯೂಸಿಕ್ ಟ್ರೆಂಡು, ಮತ್ತು ಈ ಚಿತ್ರಕ್ಕೂ ಅದೇ ಸಂಗೀತ ನಿರ್ದೇಶಕರೇ ಕೆಲಸ ಮಾಡಿರೋದ್ರಿಂದ, ಸಲಗ ಚಿತ್ರದ ಆಡಿಯೋಗೆ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಎಲ್ಲಾ ಟಾಪ್ ಆಡಿಯೋ ಕಂಪನಿಗಳ ಪೈಪೋಟಿಯ ನಡುವೆ ಫೈನಲ್ ಆಗಿ ಸಲಗ ಚಿತ್ರದ ಆಡಿಯೋ ರೈಟ್ಸ್ ಎ2 ಆಡಿಯೋ ಕಂಪನಿಗೆ ಸೋಲ್ಡೌಟ್ ಆಗಿದೆ. ಅದು ದಾಖಲೆಯ ಮೊತ್ತಕ್ಕೆ. ಮೊತ್ತ ಎಷ್ಟು ಅನ್ನೋದನ್ನ ರಿವೀಲ್ ಮಾಡದ ಚಿತ್ರತಂಡ ಇಷ್ಟರಲ್ಲೇ ಆ ಎಲ್ಲಾ ಮಾಹಿತಿಯನ್ನ ಕೊಡೋ ಭರವಸೆ ಕೊಟ್ಟಿದೆ.

A2 ಹೆಸರಲ್ಲಿ ಸಲಗದಿಂದ ಜೋಗಿ ನಿರ್ಮಾಪಕರು ವಾಪಸ್..!
ಹೌದು, ಜೋಗಿ ಸಿನಿಮಾದಿಂದ ಖ್ಯಾತಿ ಪಡೆದಿದ್ದ ಅಶ್ವಿನಿ ಆಡಿಯೋ ದ ಕೃಷ್ಣ ಪ್ರಸಾದ್ ಸಲಗ ಚಿತ್ರದ ಮೂಲಕ ಮತ್ತೆ ವಾಪಸ್ ಆಗಿದ್ದಾರೆ.ಅಶ್ವಿನಿ ಆಡಿಯೋ ಕಂಪನಿ ಹೆಸರನ್ನ ಎ2 ಆಡಿಯೋ, ಎ2 ಎಂಟ್ರಟೈನ್ಮೆಂಟ್ ಅನ್ನೋ ಹೆಸರಲ್ಲಿ ಮರುನಾಮಕರಣ ಮಾಡಿಕೊಂಡು, ಹೊಸ ಉತ್ಸಾಹದಲ್ಲಿ, ಸಲಗ ಆಡಿಯೋವನ್ನ ದಾಖಲೆಯ ಬೆಲೆಗೆ ಖರೀದಿಸೋ ಮೂಲಕ ಹೊಸ ಹುಮ್ಮಸ್ಸಿನಲ್ಲಿ ಮತ್ತೆ ಫೀಲ್ಡಿಗೆ ಇಳಿದಿದ್ದಾರೆ.. ಸಲಗ ಚಿತ್ರದ ಆಡಿಯೋ ಕೇಳಿ ಥ್ರಿಲ್ ಆಗಿರೋ ಕೃಷ್ಣ ಪ್ರಸಾದ್, ಎ2 ಆಡಿಯೋ ರೀ ಲಾಂಚ್ ಗೆ ಇದು ಪರ್ಫೆಕ್ಟ್ ಆಲ್ಬಂ ಅಂತ ತುಂಬು ಭರವಸೆಯಲ್ಲಿ ಸಲಗ ಆಡಿಯೋನ ಖರೀದಿಸಿದ್ದಾರೆ.

ಅಂದ್ಹಾಗೆ ಸದ್ಯದಲ್ಲೇ ಸಲಗ ಚಿತ್ರದ ಲಿರಿಕಲ್ ವಿಡಿಯೋಗಳನ್ನ ಒಂದೊಂದಾಗಿ ರಿಲೀಸ್ ಮಾಡೋ ಯೋಜನೆಯಲ್ಲಿರೋ ಚಿತ್ರತಂಡ, ಅದಕ್ಕೂ ಮೊದ್ಲು ಸಲಗ ಚಿತ್ರದ ಮೇಕಿಂಗ್ ವಿಡಿಯೋವನ್ನ ಇದೇ 18ನೇ ತಾರೀಖು ಎ2 ಆಡಿಯೋ ಮೂಲಕ ರಿಲೀಸ್ ಮಾಡ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top