ದ್ರೋಣ ಟ್ರೈಲರ್ ಪವರ್ ಫುಲ್ ಲಾಂಚ್..!! ಮಾರ್ಚ್ 6ಕ್ಕೆ ಸಿನಿಮಾ ರಿಲೀಸ್ ..!!!

ದ್ರೋಣ ಟ್ರೈಲರ್ ಪವರ್ ಫುಲ್ ಲಾಂಚ್..!! ಮಾರ್ಚ್ 6ಕ್ಕೆ ಸಿನಿಮಾ ರಿಲೀಸ್ ..!!!
ನಿರೀಕ್ಷೆಯಂತೆ ದ್ರೋಣ ಚಿತ್ರದ ಟ್ರೈಲರ್ ಗ್ರ್ಯಾಂಡ್ ಆಗಿ ಲಾಂಚ್ ಆಗಿದೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದ ಟ್ರೈಲರ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ದ್ರೋಣ ಟ್ರೈಲರ್ ಟೈಟಲ್ಲಿಗೆ ತಕ್ಕಂತೆ ಸಖತ್ ಪವರ್ ಫುಲ್ಲಾಗಿದೆ. ಮಾಸ್ ಕ್ಲಾಸ್ ಎರಡೂ ವರ್ಗವನ್ನ ಸೆಳೆಯುವಂತಹ ಅಂಶಗಳು ಹೈಲೈಟ್ ಆಗಿವೆ. ಫ್ಯಾಮಿಲಿ ಸಮೇತ ಕೂತು ನೋಡುವಂತಹ ಸಿನಿಮಾ ಅನ್ನೋದನ್ನ ಸಾರಿ ಹೇಳ್ತಿದೆ. ಯಾಕೆಂದ್ರೆ ಈ ಸಿನಿಮಾದ ಕಥಾಹಂದರ ಹಾಗಿದೆ.

ಇದೇ ಕಾರಣಕ್ಕೆ ದ್ರೋಣ.. ದಿ ಮಾಸ್ಟರ್ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸ್ಪೆಷಲ್ ಸಿನಿಮಾ. ಸ್ಯಾಂಡಲ್ ವುಡ್ ಅಂಗಳದಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ದಿ ಮಾಸ್ಟರ್ ಅನ್ನೋ ಟ್ಯಾಗ್ ಲೈನ್ ನೊಂದಿಗೆ ಬರ್ತಿರೋ ದ್ರೋಣ. ಪ್ರಸುಸ್ತ ಸಮಾಜದಲ್ಲಿ, ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಮೇಲಿರೋ ಕೀಳಿರಿಮೆ, ಮತ್ತು ಅಲ್ಲಾಗುತ್ತಿರುವ ಅನ್ಯಾಯ ಧೋರಣೆ ವಿರುದ್ಧ ಹೋರಾಡೋ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ವೆರೈಟಿ ಪಾತ್ರಗಳನ್ನ ಮಾಡೋದ್ರಲ್ಲಿ ನಿಪುಣರಾಗಿರೋ ಶಿವಣ್ಣ, ಈ ಸಿನಿಮಾದ ಮೂಲಕ ಮತ್ತೊಮ್ಮೆ ವಿಶಿಷ್ಠಪಾತ್ರದಲ್ಲಿ ಅಭಿಮಾನಿ ದೇವ್ರುಗಳ ಮುಂದೆ ಬರ್ತಿದ್ದಾರೆ.
ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದು, ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹೀರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ . ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ. ದ್ರೋಣ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ನಿರ್ದೇಶನವಿದ್ದು, ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವಪ್ಪ ಹಲಗಟ್ಟಿ, ಎಸ್.ಬಿ.ಹೆಚ್ , ಸಂಗಮೇಶ್ ಬಿ, ಶೇಷು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ.

ರಾಮ್ ಕ್ರಿಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣವಿರೋ ಈ ಚಿತ್ರದ
ಈಗಾಗ್ಲೇ ಟೀಸರ್ ಮತ್ತು ಹಾಡುಗಳಿಂದ ಗಮನ ಸೆಳೆದಿರೋ ದ್ರೋಣ , ಇದೀಗ ಟ್ರೈಲರ್ ನಿಂದ ನಿರೀಕ್ಷೆಯನ್ನ ಹೆಚ್ಚಿಸಿದ್ದು, ಹೊಸ ಭರವಸೆಯನ್ನ ಹುಟ್ಟಿಸಿದೆ. ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿದೆ. ಅಂದ್ಹಾಗೆ ಟ್ರೈಲರ್ ನಿಂದ ಭರ್ಜರಿಯಾಗಿ ಸೌಂಡ್ ಮಾಡ್ತಿರೋ ದ್ರೋಣ ಚಿತ್ರ ಮಾರ್ಚ್ 6ನೇ ತಾರೀಖು ರಾಜ್ಯದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top