ದ್ರೋಣನಾಗಿ ತೆರೆಮೇಲೆ ಬರಲು ಸಜ್ಜಾದ್ರು ಡಾ. ಶಿವಣ್ಣ, ಮೇಕಿಂಗ್ ವಿಡಿಯೋ Coming Soon!

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಹೊಸ ವರ್ಷಕ್ಕೆ ದ್ರೋಣನಾಗಿ ಕನ್ನಡ ಸಿನಿಪ್ರಿಯರೆದುರಿಗೆ ಬರೋದಕ್ಕೆ ಸಜ್ಜಾಗಿದ್ದಾರೆ. ನೂರಾರೂ ಸಿನಿಮಾಗಳ ಸರದಾರ ಸೆಂಚುರಿ ಸ್ಟಾರ್ ವೆರೈಟಿ ಸಿನಿಮಾಗಳಿಗೆ ಫೇಮಸ್, ಸಿನಿಮಾದಿಂದ ಸಿನಿಮಾ ಕ್ಯಾರೆಕ್ಟರ್ ಗಳಿಂದ ಕ್ಯಾರೆಕ್ಟರ್ ಗೆ ಆಡು ಮುಟ್ಟದ ಸೊಪ್ಪಿಲ್ಲ, ಶಿವಣ್ಣ ಮಾಡದ ಪಾತ್ರವಿಲ್ಲ ಅನ್ನೋ ಹಾಗೇ, ಎಲ್ಲಾ ಬಗೆಯ ಪಾತ್ರಗಳನ್ನ ನಿಭಾಯಿಸಿದ್ದಾರೆ.

ದಿ ಮಾಸ್ಟರ್ ಅನ್ನೋ ಟ್ಯಾಗ್ ಲೈನ್ ನೊಂದಿಗೆ ಬರ್ತಿರೋ ದ್ರೋಣ. ಪ್ರಸ್ತುತ ಸಮಾಜದಲ್ಲಿ, ಶೈಕ್ಷಣಿಕ ಕ್ಷೇತ್ರದ ಅವ್ಯವಸ್ಥೆ, ಸರ್ಕಾರಿ ಶಾಲೆಗಳ ಮೇಲಿರೋ ಕೀಳರಿಮೆ, ಮತ್ತು ಅಲ್ಲಾಗುತ್ತಿರುವ ಅನ್ಯಾಯ ಧೋರಣೆ ವಿರುದ್ಧ ಹೋರಾಡೋ ಶಿಕ್ಷಕನ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ. ವೆರೈಟಿ ಪಾತ್ರಗಳನ್ನ ಮಾಡೋದ್ರಲ್ಲಿ ನಿಪುಣರಾಗಿರೋ ಶಿವಣ್ಣ, ಈ ಸಿನಿಮಾದ ಮೂಲಕ ಮತ್ತೊಮ್ಮೆ ವಿಶಿಷ್ಠ ಪಾತ್ರದಲ್ಲಿ ಅಭಿಮಾನಿ ದೇವ್ರುಗಳ ಮುಂದೆ ಬರ್ತಿದ್ದಾರೆ.


ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ತಮಿಳಿನ ಇನಿಯಾ ನಟಿಸಿದ್ದು, ಸ್ವಾತಿ ಶರ್ಮಾ, ರಂಗಾಯಣ ರಘು, ಬಾಬು ಹೀರಣ್ಣಯ್ಯ, ಶಂಕರ್ ರಾವ್, ರೇಖಾದಾಸ್, ರಾಮಸ್ವಾಮಿ ಗೌಡ, ಶ್ರೀನಿವಾಸ್ ಗೌಡ . ಆನಂದ್, ನಾರಾಯಣ ಸ್ವಾಮಿ, ರವಿಕಿಶನ್, ಜಯಶ್ರೀ, ಮಾಸ್ಟರ್ ಮಹೇಂದ್ರ ಸೇರಿದಂತೆ ದೊಡ್ಡ ತಾರಾಬಳಗವಿದೆ.

ದ್ರೋಣ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ನಿರ್ದೇಶನವಿದ್ದು, ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಮಹದೇವ.ಬಿ, ಎಸ್.ಬಿ.ಹೆಚ್ (ಸಂಗಮೇಶ್ ಬಿ) ಶೇಷು ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ. ರಾಮ್ ಕ್ರಿಶ್ ಸಂಗೀತ, ಜಗದೀಶ್ ವಾಲಿ ಛಾಯಾಗ್ರಹಣವಿರೋ ಈ ಚಿತ್ರದ ಟೀಸರ್ ಈಗಾಗ್ಲೇ ರಿಲೀಸ್ ಆಗಿದ್ದು, ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿದೆ. ಈ ನಡುವೆ ಮೊನ್ನೆಯಷ್ಟೇ ರಿಲೀಸ್ ಮಾಡಿದ್ದ ಮೊದಲ ಲಿರಿಕಲ್ ವಿಡಿಯೋ ರಾಮನ ಹಾಡು ಜನಮನ್ನಣೆಗಳಿಸಿದೆ.

ಅಂದ್ಹಾಗೆ, ದ್ರೋಣ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗಿದ್ದು ಅಫಿಯಲ್ಲಾಗಿ ಪ್ರಚಾರ ಕಾರ್ಯವನ್ನ ಶುರುಮಾಡೋದಕ್ಕೆ ಮುಂದಾಗಿದೆ. ಅದ್ರಂತೆ ಮೊದಲ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ತಯಾರಿ ನಡೆಸಿದ್ದು, ಈ ವಾರ ದ್ರೋಣ ಚಿತ್ರದ ಮೊದಲ ಮೇಕಿಂಗ್ ವಿಡಿಯೋವನ್ನ ರಿಲೀಸ್ ಮಾಡಲಿದ್ದು,

ಸದ್ಯದಲ್ಲೇ ಆಡಿಯೋ ಲಾಂಚ್ ಮತ್ತು ಟ್ರೈಲರ್ ನ ಲಾಂಚ್ ಮಾಡಿ, ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top