ಸುಮಲತಾರನ್ನು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ ಆರ್.ಆಶೋಕ್‌ಗೆ ಟಕ್ಕರ್ ಕೊಟ್ಟ ಡಾ.ಸಿದ್ದರಾಮಯ್ಯ

ಸುಮಲತಾರನ್ನು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ ಆರ್ ಆಶೋಕ್‌ಗೆ ಟಕ್ಕರ್ ಕೊಟ್ಟ ಡಾ.ಸಿದ್ದರಾಮಯ್ಯ

ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಕೂಡ ಹೆಚ್ಚಾಗಿದೆ. ಅದ್ರಲ್ಲೂ ಸಕ್ಕರೆ ನಾಡು ಮಂಡ್ಯ ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ ಅನ್ನೋ ಕುತೂಹಲ ಮೂಡ ತೊಡಗಿದೆ. ಅದ್ರಲ್ಲೂ ಮಾಜಿ ಸಚಿವ ದಿ.ಅಂಬರೀಶ್ ಪತ್ನಿ ಸುಮಲತಾ ಸ್ಪರ್ಧೆ ವಿಚಾರವಾಗಿ ದೋಸ್ತಿಯಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯ ಮಾಜಿ‌‌ ಉಪಮುಖ್ಯಮಂತ್ರಿ ಆರ್. ಅಶೋಕ್, ಸುಮಲತಾರನ್ನ ಬಿಜೆಪಿಗೆ ಆಹ್ವಾನಿಸಿದ್ದು ಪಕ್ಷದ ಮುಖಂಡರಲ್ಲೇ ಇರಿಸು ಮುರಿಸು ಉಂಟಾಗಿದೆ. ಅದ್ರಲ್ಲೂ ಕಳೆದ ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ.ಸಿದ್ದರಾಮಯ್ಯ ಅವರಂತೂ ಗರಂ ಆಗಿದ್ದಾರೆ. ಅಷ್ಟೇ ಅಲ್ಲದೇ ಸ್ವಪಕ್ಷದ ನಾಯಕನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಅಂಬರೀಷ್ ಪತ್ನಿ ಸುಮಲತಾರನ್ನು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ ಆರ್ ಆಶೋಕ್‌ಗೆ ಟಕ್ಕರ್ ಕೊಟ್ಟ ಡಾ.ಸಿದ್ದರಾಮಯ್ಯ ಬಿಜೆಪಿಯಿಂದ ಸ್ಪರ್ಧಿಸಲು ಸುಮಲತಾ ಅವ್ರಿಗೆ ಹುಚ್ಚಿದ್ಯಾ. ಎಂದು ಟಾಂಗ್ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ಲೋಕಸಭೆಯ ಬಿಜೆಪಿ ಅಭ್ಯರ್ಥಿ ನಾನೇ ಎಂದಿದ್ದಾರೆ. ಅಂಬರೀಶ್ ಹಾಗೂ ಸುಮಲತಾ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ. ಸಮ್ಮಿಶ್ರ ಸರ್ಕಾರದ ವತಿಯಿಂದ ಸ್ಪರ್ಧೆ ಮಾಡೋದು ಬಿಟ್ಟು, ವಿರೋಧ ಪಕ್ಷದಿಂದ ಕಣಕ್ಕಿಳಿಯಲು ಸುಮಲತಾ ಅವ್ರಿಗೆ ಹುಚ್ಚಿದ್ಯಾ..? ಎಂದು ಪರೋಕ್ಷವಾಗಿ ಆರ್. ಅಶೋಕ್ ವಿರುದ್ಧ ಕಿಡಿಕಾರಿದ್ದಾರೆ, ನನಗೆ ವರಿಷ್ಠರು ಹೇಳಿದ್ದಾರೆ,ನಾನು ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಚುನಾವಣೆ ಮುಗಿದ ಬಳಿಕ‌ ನಿಮ್ಮ ಸೇವೆ ಮಾಡ್ತೇನೆ ಎಂದು ನಮ್ಮ‌ ಕಾರ್ಯಕರ್ತರಿಗೆ ಮಾತು ನೀಡಿದ್ದೆ. ಕೊಟ್ಟ ಮಾತಿನಂತೆ ನಾನು ಕಾರ್ಯಕರ್ತರ‌ ಜೊತೆಯಲ್ಲೇ ಇದ್ದೇನೆ.ವರಿಷ್ಠರು ನನಗೆ ಟಿಕೆಟ್ ನೀಡ್ತಾರೆ ಹಾಗಾಗಿ ನನ್ನ ಕೆಲಸ ನಾನು ಮಾಡ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top