ವರದಕ್ಷಿಣೆಗಾಗಿ‌ ಗಂಡನಿಂದ‌ ಕಿರುಕುಳ.!! ತನಗಾದ ನೋವನ್ನು ವಿಡಿಯೋ ಮಾಡಿ ಹೇಳಿದ ಪತ್ನಿ Video

dowry case wife video on husband

ವರದಕ್ಷಿಣೆ ತರುವಂತೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

ತಾಲೂಕಿನ ಕತ್ರಿಗುಪ್ಪೆ ಗ್ರಾಮದ ನಿವಾಸಿ ಇಮ್ರಾನ್ ಪಾಷಾ ಎಂಬಾತ ತನ್ನ ಪತ್ನಿ ಶಾಬಿರಾಗೆ ವರದಕ್ಷಿಣೆ ತರುವಂತೆ ಪ್ರತಿನಿತ್ಯ ಹಿಂಸೆ ನೀಡಿದ್ದಾನೆ. ಪೋಷಕರ ಮನೆಯಿಂದ ಎಷ್ಟೇ ಹಣ ತಂದುಕೊಟ್ಟರೂ ಮತ್ತೆ ಮತ್ತೆ ವರದಕ್ಷಿಣೆಗಾಗಿ ಪಾಪಿ ಪತಿ ಹಿಂಸೆ ನೀಡುತ್ತಿದ್ದ. ಇನ್ನು ಗಂಡನಿಂದ ಹಲ್ಲೆಗೊಳಗಾದ ಪತ್ನಿ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಏನೂ ಕೆಲಸ ಮಾಡದೇ ಮನೆಯಲ್ಲೇ ಬಿದ್ದಿರೋ ಗಂಡನ ದುರ್ವರ್ತನೆಗೆ ಬೇಸತ್ತ ಪತ್ನಿ ಶಾಬಿರಾ ಆಸ್ಪತ್ರೆಯಲ್ಲಿ ತನಗಾಗುವ ನೋವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top