ದರ್ಶನ್, ಸುದೀಪ್‍ರನ್ನು ಒಂದು ಮಾಡಿಸುತ್ತಾ ದೋಸ್ತಾ ಹಾಡು..!

dostha-song

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ ರಾಬರ್ಟ್.. ತನ್ನ ಹಾಡುಗಳ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ, ಈಗಾಗ್ಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿ ಸೂಪರ್ ರೆಸ್ಪಾನ್ಸ್ ಪಡೆದಿದ್ದು, ಈಗ ಮೂರನೇ ಹಾಡಾಗಿ `ದೋಸ್ತಾ ಕಣೋ’ ಹಾಡು ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಲಕ್ಷ ಲಕ್ಷ ವಿವ್ಯೂ ಪಡೆದಿರೋ ದೋಸ್ತಾ ಕಣೋ ಹಾಡು ಸಿನಿ ರಸಿಕರಿಗೆ ಇಷ್ಟವಾಗಿದ್ದು, ರಾಬರ್ಟ್‍ನ ಮೊದಲೆರಡು ಹಾಡುಗಳ ದಾಖಲೆಯನ್ನು ಈ ಹಾಡು ಮುರಿಯಲಿದೆ ಅಂತ ಹೇಳಲಾಗ್ತಿದೆ, ಸ್ನೇಹದ ಮಹತ್ವ ಸಾರುವ ಈ ಹಾಡು ಯೂಟ್ಯೂಬ್‍ನಲ್ಲಿ ಭಾರಿ ಸದ್ದು ಮಾಡ್ತಾ ಇದ್ದು, ಈ ಹಾಡು ಕೇಳಿದ ಕೆವ್ರು ಈ ಹಾಡು ಈ ಇಬ್ಬರು ಸ್ಟಾರ್ ಗಳಿಗೂ ಸಖತ್ ಸೂಟ್ ಆಗುತ್ತೆ ಗುರು ಅಂತ ಹೇಳ್ತಿದ್ದಾರೆ.

ಹೌದು 4 ನಿಮಿಷದ ಈ ಹಾಡಿಗೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದ್ದು, ಅಂಬಿ ಮತ್ತು ವಿಷ್ಣು ದಾದಾ ಅವರ ಕುಚಿಕು ಕುಚಿಕು ಹಾಡಿನ ನಂತರ ಒಂದೊಳ್ಳೇ ಸ್ನೇಹದ ಹಾಡು ಸಿಕ್ಕಿದೆ ಎಂದು ಹೇಳಿರುವ ಸಿನಿರಸಿಕ, ಈ ಹಾಡು ದರ್ಶನ್ ಮತ್ತು ಸುದೀಪ್ ಅವರಿಗೆ ಸೂಪರ್ ಆಗಿ ಹೊಂದಿಕೆಯಾಗುತ್ತದೆ , ಅವರಿಬ್ಬರು ಬೇಗ ಒಂದಾಗಬೇಕು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದು, ಯೂಟ್ಯೂಬ್‍ನಲ್ಲಿ ಹಾಡು ನೋಡಿದ ಸಿನಿರಸಿಕ ಕಿಚ್ಚ ಮತ್ತು ದಚ್ಚು ಅವರನ್ನು ಆದಷ್ಟು ಬೇಗ ಒಂದು ಮಾಡಲು ಈ ಹಾಡು ಬಂದಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಗೆಳತನವನ್ನು ಸಾರೋ ರಾಬರ್ಟ್ ಚಿತ್ರ ದೋಸ್ತಾ ಕಣೋ ಸಾಂಗ್ ಎಲ್ಲರಿಗೂ ಇಷ್ಟವಾಗಿದ್ದು, ಕಿಚ್ಚ ಮತ್ತು ದಚ್ಚು ಆದಷ್ಟು ಬೇಗ ಒಂದಾಗಿ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿ ಅನ್ನೋದು ಸಿನಿರಸಿಕರ ಆಶಯ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top