ಸ್ಯಾಂಡಲ್‍ವುಡ್‍ನಲ್ಲಿ ಡಿ.ಕೆ ಶಿವಕುಮಾರ್ ಸ್ಟೋರಿ..!

ಕಾಂಗ್ರೆಸ್‍ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸದ್ಯ ಇ.ಡಿ ಕಸ್ಟಡಿಯಲ್ಲಿದ್ದು. ಕೆಲವು ದಿನಗಳಿಂದ ಇಡಿ ವಿಚಾರಣೆ ನಡೆಸುತ್ತಿದ್ದಿದೆ, ಇದೇ ವೇಳೆ ಈ ಸ್ಯಾಂಡಲ್‍ವುಡ್‍ನಲ್ಲೂ ಡಿ.ಕೆ ಶಿವಕುಮಾರ್ ಅವರ ಹವಾ ಜೋರಾದಂತೆ ಕಾಣ್ತಾ ಇದೆ.

ಹೌದು ಡಿ.ಕೆ ಶಿವಕುಮಾರ್ ಅವರ ಸ್ಟೋರಿ ಈಗ ಬೆಳ್ಳಿ ಪರದೆ ಮೇಲೆ ಬರೋ ಲಕ್ಷಣಗಳು ಕಾಣ್ತಾ ಇದೆ, ಫಿಲ್ಮ್ ಛೇಂಬರ್ ನಲ್ಲಿ ಕನಕಪುರ ಬಂಡೆ ಅನ್ನೋ ಟೈಟಲ್‍ಗೆ ಭಾರಿ ಬೇಡಿಕೆ ಉಂಟಾಗಿದ್ದು. ಕನಕಪುರ ಬಂಡೆ ಟೈಟಲ್‍ಗೆ ನಿರ್ದೇಶಕ ನಾಗೇಶ್,ಫಿಲ್ಮ್ ಛೇಂಬರ್ ಗೆ ಮನವಿಮಾಡಿಕೊಂಡಿದ್ದಾರೆ.

ಇನ್ನು ನಿರ್ದೇಶಕ ನಾಗೇಶ್ ಅವರು ಕನಕಪುರ ಬಂಡೆ, ಕನಕಪುರ ಟೂ ಬೆಳಗಾಂ ಎಕ್ಸ್ ಪ್ರೆಸ್ ಮತ್ತು ಕನಕಪುರ ಕೆಂಪೇಗೌಡ ಅನ್ನೋ ಟೈಟಲ್‍ಗಳಿಗೆ ಬೇಡಿಕೆ ಇಟ್ಟಿದ್ದು ಈ ಟೈಟಲ್‍ಗಳು ಸಿಗದೇ ಹೋದ್ರೆ ಕೋರ್ಟ್ ಮೊರೆ ಹೋಗೋದಾಗಿಯೂ ಹೇಳಿದ್ದಾರೆ. ಈಗಾಗ್ಲೇ ಟೈಟಲ್‍ಗೆ ಭಾರೀ ಬೇಡಿಕೆ ಇದ್ದು ಡಿ.ಕೆ ಶಿವಕುಮಾರ್ ಲೈಫ್ ಸ್ಟೋರಿಯಲ್ಲಿ ಯಾವೆಲ್ಲ ಅಂಶಗಳು ಇರ್ತಾವೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top