ಚಂಬಲ್ ಸಿನಿಮಾದ ವಿರುದ್ಧ ಡಿಕೆ ರವಿ ತಾಯಿ ದೂರು..!

chambal dk ravi movie

ಚಂಬಲ್' ನೀನಾಸಂ ಸತೀಶ್ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ, ಜೇಕಬ್ ವರ್ಗಿಸ್ ನಿರ್ದೇಶನದ ಈ ಸಿನಿಮಾ ಶುರುವಾದಾಗಿನಿಂದ್ಲೇ ಸ್ಯಾಂಡಲ್‍ವುಡ್‍ನಲ್ಲಿ ಸೌಂಡ್‍ಮಾಡಿತ್ತು. ಇನ್ನು ಆಯೋಗ್ಯ ಚಿತ್ರದ ಸಕ್ಸಸ್ ನಂತರ ನೀನಾಸಂ ಸತೀಶ್ ಕೆರಿಯರ್ ನ ಮತ್ತೊಂದು ಮೈಲುಗಲ್ಲು ಸಿನಿಮಾ ಇದು ಅಂತಾನೇ ಹೇಳಲಾಗ್ತಾ ಇತ್ತು. ಇನ್ನು ಚಂಬಲ್ ಚಿತ್ರದ ಟ್ರೈಲರ್ ರಿಲೀಸ್ ಆದ ಮೇಲೆ ಆ ಸಿನಿಮಾದ ಮೇಲೆ ಇದ್ದ ಕುತೂಹಲ ಇನ್ನಷ್ಟು ಹೆಚ್ಚಾಯಿತು, ಚಿತ್ರದ ಟ್ರೈಲರ್ ನೋಡಿದ ಪ್ರೇಕ್ಷಕ ಇದು ಡಿಕೆ ರವಿಯವರ ಜೀವನದ ಚಿತ್ರ ಅಂತ ಮಾತನಾಡೋಕೆ ಶುರುಮಾಡಿಕೊಂಡ್ರು. ಆದ್ರೆ ಈಗಚಂಬಲ್’ ಚಿತ್ರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಚಂಬಲ್' ಚಿತ್ರದ ವಿರುದ್ಧ ಡಿಕೆ ರವಿಯವರ ತಾಯಿ ಈಗ ಫಿಲಂ ಛೇಂಬರ್ ಮೆಟ್ಟಿಲೇರಿದ್ದಾರೆ. ಹೌದುಚಂಬಲ್’ ಸಿನಿಮಾದಲ್ಲಿ ನನ್ನ ಮಗನ ಜೀವನದ ಕಥೆಯನ್ನು ಬಳಸಿಕೊಂಡಿದ್ದಾರೆ, ಈ ವಿಚಾರವಾಗಿ ನಮ್ಮ ಕುಟುಂಬದ ಯಾವ ಸದಸ್ಯರ ಬಳಿಯು ಅವರು ಅನುಮತಿಯನ್ನು ಪಡೆದುಕೊಂಡಿಲ್ಲ. ಬಿಡುಗಡೆಗೂ ಮೊದಲು ನನಗೆ `ಚಂಬಲ್’ ಸಿನಿಮಾವನ್ನು ನನಗೆ ತೋರಿಸಬೇಕು, ಅದರಲ್ಲಿ ತನ್ನ ಮಗನ ಜೀವನದ ವಿಷಯಗಳನ್ನು ತಿರುಚಿದ್ದರೆ ನಾನು ದೂರುಕೊಡಲು ಸಿದ್ಧನಿದ್ದೇನೆ ಅಂತ ಡಿ.ಕೆ.ರವಿ ತಾಯಿ ಗೌರಮ್ಮ ಫಿಲಂ ಛೇಂಬರ್ ಗೆ ದೂರು ನೀಡಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top