ಧ್ರುವ ಸರ್ಜಾ ದಂಪತಿಗೆ ಕೊರೋನಾ..! ರಸ್ತೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ ದರ್ಶನ್..!

ಕೋವಿಡ್ ಮಹಾಮಾರಿ ಈಗ ಜಗತ್ತನಲ್ಲಿ ತಲ್ಲಣ ಮೂಡಿಸಿದ್ರೆ, ಜನಸಾಮಾನ್ಯರು ತತ್ತರಿಸಿ ಹೋಗಿದ್ರೆ, ಈಗ ಸಿನಿಮಾ ಸೆಲೆಬ್ರಿಟಿಗಳಿಗೂ ಕೊರೋನಾ ಪಾಸಿಟಿವ್ ಬರುತ್ತಿದ್ದು, ಈಗಾಗಲೇ ಬಾಲಿವುಡ್‍ನಲ್ಲಿ ಬಚ್ಚನ್ ಫ್ಯಾಮಿಲಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಹಲವು ಸೆಲೆಬ್ರಿಟಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ,.

ಇನ್ನು ಸ್ಯಾಂಡಲ್‍ವುಡ್‍ನಲ್ಲೂ ಇದು ಕಮ್ಮಿಯಾಗಿಲ್ಲ, ಈಗಾಗಲೇ ಧಾರಾವಾಹಿಯ ಹಲವು ನಟ ನಟಿಯರಿಗೆ ಪಾಸಿಟಿವ್ ಬಂದಿದ್ದು, ಸ್ಯಾಂಡಲ್‍ವುಡ್‍ನಲ್ಲಿ ಸುಮಲತಾ,ರಾಕ್‍ಲೈನ್ ವೆಂಕಟೇಶ್ ಈಗಾಗಲೇ ಚಿಕಿತ್ಸೆ ಪಡೆಯುತ್ತಿದ್ದಾರೆ, ಇನ್ನು ಇತ್ತಿಚೆಗೆ ನೆನಪಿರಲಿ ಪ್ರೇಮ್ ಅವರ ತಾಯಿಗೂ ಸಹ ಪಾಸಿಟಿವ್ ಬಂದಿದ್ದು, ಈಗ ಸ್ಯಾಂಡಲ್‍ವುಡ್‍ನ ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾಗೂ ಕೂಡ ಪಾಸಿಟಿವ್ ಬಂದಿರೋ ಸುದ್ದಿ ಹೊರ ಬಿದ್ದಿದೆ. ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರೋ ಧ್ರುವಾ ಸರ್ಜಾ,

`ನನಗೂ ಮತ್ತು ನನ್ನ ಪತ್ನಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದೇವೆ, ನಮ್ಮ ಸಂಪರ್ಕದಲ್ಲಿ ಯಾರು ಯಾರು ಇದ್ದೀರಿ ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡುವ ಮೂಲಕ ತಮಗೆ ಪಾಟಿಸಿವ್ ಬಂದಿರೋ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ಇತ್ತಿಚೆಗೆ ಅಣ್ಣ ಚಿರಂಜೀವಿ ಸರ್ಜಾ ನಿಧನದಿಂದ ಡಿಪ್ರೆಶನ್‍ಗೆ ಹೋಗಿದ್ದ ಧ್ರುವ ಆಸ್ಪತ್ರೆಗೆ ದಾಖಲಾಗಿದ್ರು, ಈಗ ಸ್ವಲ್ಪ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದಾಗಿ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಸ್ತೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ ದರ್ಶನ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯಾ ಕಾರ್ ಪ್ರಿಯಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ ಅದಕ್ಕಾಗಿ ಮೈಸೂರಿನಲ್ಲಿ ತಮ್ಮ ಫಾರ್ಮ್ ಹೌಸ್‍ನಲ್ಲಿ ಮಿನಿ ಝೂ ಮಾಡಿಕೊಂಡಿದ್ದರೆ,ಇತ್ತ ತಮ್ಮ ಮನೆಯಲ್ಲಿ ತರಹೇ ವಾರಿ ಕಾರುಗಳ ಕಲೆಕ್ಷನ್ ಕೂಡ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸದ್ಯ ಸಿನಿಮಾ ಶೂಟಿಂಗ್ ಇಲ್ಲದೇ ಇರುವುದರಿಂದ ತಮ್ಮ ಫಾರ್ಮ್ ಹೌಸ್‍ನಲ್ಲಿ ಕಾಲ ಕಳೆಯುತ್ತಿದ್ದು, ನಿನ್ನೆಯಷ್ಟೇ ದರ್ಶನ್ ತಮ್ಮ ಫಾರ್ಮಹೌಸ್‍ಗೆ ಹೊಸ ಟ್ರ್ಯಾಕ್ಟರ್ ಒಂದನ್ನು ಖರಿಧಿಸಿದ್ದಾರೆ.

ಈ ವೇಳೆ ತಾವೇ ಸ್ವತಃ ತಮ್ಮ ಫಾರ್ಮ ಹೌಸ್ ಸಮೀಪ ರಸ್ತೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ್ದಾರೆ. ಇನ್ನು ಟ್ರ್ಯಾಕ್ಟರ್‍ಗೆ ಡಿಸೆಲ್ ಹಾಕಿಸಲು ಅಲ್ಲೇ ಸಮೀಪವಿರು ಪೆಟ್ರೋಲ್ ಬಂಕ್‍ಗೆ ಹೋಗಿ ಡಿಸೇಲ್ ಹಾಕಿಸಿದ್ದಾರೆ. ಇನ್ನು ಅಲ್ಲಿ ಕೆಲಸ ಮಾಡುವ ಹುಡುಗರ ಜೊತೆ ಒಂದಿಷ್ಟು ಕ್ಷಣ ಕಾಲಕಳೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top