ಬಾಲಿವುಡ್‍ಗೆ ಎಂಟ್ರಿಕೊಟ್ಟ ಕೂಲ್ ಕ್ಯಾಪ್ಟನ್ ಧೋನಿ..!

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್, ಸದ್ಯ ಏಕದಿನ‌ ಮತ್ತು‌ಟಿ20 ಫಾರ್ಮೆಟ್ ನಲ್ಲಿ ಆಡುತ್ತಿರೋ ಧೋನಿ‌ ಸದ್ಯ ಕ್ರಿಕೆಟ್ ನಿಂದ ಸ್ವಲ್ಪ‌ ವಿಶ್ರಾಂತಿ ಪಡೆಯುತ್ತಿದ್ದಾರೆ, ಅಲ್ಲದೇ ತಮ್ಮ ಹಲವು ಬಿಸಿನೆಸ್ ಕಡೆ ಗಮನ ಹರಿಸಿರೋ ಧೋನಿ ಈಗ ಬಾಲಿವುಡ್ ಗೂ ಕಾಲಿಡಲು ಸಿದ್ಧತೆ ಮಾಡಿಕೊಳ್ತಾ ಇದ್ದಾರೆ, ಹೌದು ಧೋನಿ ಸದ್ಯದರಲ್ಲೇ ಬಾಲಿವುಡ್ ನಲ್ಲಿ ಸಿನಿಮಾ ಒಂದನ್ನು ನಿರ್ಮಾಣ ಮಾಡಲು ಕೈ ಹಾಕಲಿದ್ದಾರೆ ಅನ್ನೋ ಮಾಹಿತಿಗಳು ಹೊರ ಬಿದ್ದಿದೆ.

ಈ ಹಿಂದೆ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಒಂದಿಷ್ಟು ಸಂಪರ್ಕವನ್ನು ಗಳಿಸಿದ್ದ ಧೋನಿ ಈಗ ಬಾಲಿವುಡ್ ನಲ್ಲಿ ಬಂಡವಾಳ ಹೂಡಿಕೆ ಮಾಡಲು ಮನಸ್ಸು ಮಾಡಿದ್ದಾರಂತೆ, ಅಲ್ಲದೇ ಧೋನಿಗೆ ನಟನೆಯ ಟಚ್ ಇದ್ದು ಹಲವು ಜಾಹೀರಾತುಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಆದ್ದರಿಂದ ಧೋನಿ ಈಗ ಬಾಲಿವುಡ್ ನಲ್ಲಿ ಬಂಡವಾಳ ಹೂಡಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಧೋನಿ ಬಾಲಿವುಡ್ ನಲ್ಲಿ ತಮ್ಮದೇ ಆದ ಸಿನಿಮಾ ಬ್ಯಾನರ್ ಓಪನ್ ಮಾಡಲಿದ್ದು ಆ ಮೂಲಕ ಬಾಲಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ ಕ್ಯಾಪ್ಟನ್ ಕೂಲ್ ಧೋನಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top