ಧೋನಿ ಕಣ್ಣೀರಿನ ಹಿಂದಿನ ಕಟು ಸತ್ಯ ಏನ್ ಗೊತ್ತಾ?

Dhoni a legend in kannada

ಧೋನಿ…ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕ..! ಇಡೀ ವಿಶ್ವ ಕ್ರಿಕೆಟ್ ಮೆಚ್ಚಿದ ಆಟಗಾರ, ನಾಯಕ..! ವಿಶ್ವದ ಬೆಸ್ಟ್ ಫಿನಿಶರ್. ಅದೆಂಥಾ ಕಷ್ಟದ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ ತಂಡವನ್ನು ಮುನ್ನಡೆಸಬಲ್ಲ ನಾವಿಕ..! ಅದೆಂಥಾ ಸಂದರ್ಭದಲ್ಲೂ ಅಳುಕದೆ ಬ್ಯಾಟ್​ಬೀಸಬಲ್ಲ ಬ್ಯಾಟ್ಸ್​​​ಮನ್. ಧೋನಿ ಒಬ್ರು ಸ್ಕ್ರೀಸ್​​ನಲ್ಲಿದ್ರೆ ಸಾಕು ಸೋಲುವ ಮ್ಯಾಚನ್ನೂ ಗೆಲ್ಲಿಸಬಲ್ಲರು ಅನ್ನೋ ಧೈರ್ಯ ಭಾರತೀಯ ಅಭಿಮಾನಿಗಳದ್ದು. ಎದುರಾಳಿಗಳಿಗೆ ಧೋನಿ ವಿಕೆಟ್ ಕಿತ್ರೆ ಸಾಕು ಪಂದ್ಯವನ್ನೇ ಗೆದ್ದ ಖುಷಿ..!

ಅದು 2007 ವೆಸ್ಟ್​ ಇಂಡೀಸ್​ನಲ್ಲಿ ಐಸಿಸಿ ವರ್ಲ್ಡ್​​ಕಪ್ ನಡೆದಿತ್ತು. ಕನ್ನಡಿಗ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ಕೆರಬಿಯನ್​ ನಾಡಿಗೆ ಹೋಗಿತ್ತು. ದ್ರಾವಿಡ್ ಪಡೆ ಭಾರತಕ್ಕೆ 2ನೇ ಬಾರಿ ವಿಶ್ವಕಪ್ ತರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇತ್ತು. ಆದರೆ ದ್ರಾವಿಡ್ ಟೀಮ್ ಲೀಗ್​ನಲ್ಲೇ ಟೂರ್ನಿಯಿಂದ ಹೊರಬಂದು ಕೊಟ್ಯಂತರ ಭಾರತೀಯರ ಕನಸನ್ನು ನುಚ್ಚು ನೂರು ಮಾಡಿತ್ತು.
ಬದಲಾದ ಕಾಲಘಟ್ಟದಲ್ಲಿ ರಾಹುಲ್ ದ್ರಾವಿಡ್ ನಾಯಕತ್ವ ತ್ಯಜಿಸಿದ್ರು. ಮಹೇಂದ್ರ ಸಿಂಗ್ ಧೋನಿ ಎಂಬ ಯುವಕ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ್ರು. ಆ ಯುವ ನಾಯಕನ ಮುಂದಾಳತ್ವದಲ್ಲಿ ಅದೇ ವರ್ಷ ಅಂದ್ರೆ 2007ರಲ್ಲೇ ಭಾರತ ಚೊಚ್ಚಲ ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾದತ್ತ ಪಯಣ ಬೆಳೆಸಿತು. ಆದರೆ, ಧೋನಿ ಸಾರಥ್ಯದ ತಂಡ ಚೊಚ್ಚಲ ವಿಶ್ವಕಪ್​ ಅನ್ನು ಭಾರತಕ್ಕೇ ಹೊತ್ತು ತರುತ್ತೆ ಅಂತ ಯಾರೂ ಕನಸು ಮನಸ್ಸಲ್ಲಿ ಎಣಿಸಿರಲಿಲ್ಲ. ಆದರೆ, ಧೋನಿ ಪಡೆ ಫೈನಲ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿಗೆ ಮುತ್ತಿಕ್ಕಿತು.. ಟಿ20ಯಲ್ಲಿ ಆದಿಪತ್ಯ ಸ್ಥಾಪಿಸಿತು. ಅಲ್ಲಿಂದ ಶುರುವಾದ ಧೋನಿ ನಾಯಕತ್ವದಲ್ಲಿ ಭಾರತದ ಗೆಲುವಿನ ಓಟ ನಿರಂತರವಾಗಿ ಸಾಗಿತು.
2011ರಲ್ಲಿ ಭಾರತ ಒಡಿಐ ವರ್ಲ್ಡ್​ಕಪ್​​ನ ಆತಿಥ್ಯ ವಹಿಸಿಕೊಂಡಿತು. ಇದೇ ಧೋನಿಯ ನೇತೃತ್ವದಲ್ಲಿ ಭಾರತ ವಿಶ್ವ ಸಮರದಲ್ಲಿ ಸೆಣೆಸಿತು. ಫೈನಲ್​ನಲ್ಲಿ ಶ್ರೀಲಂಕಾವನ್ನು ಮಣಿಸಿ ವಿಶ್ವ ಚಾಂಪಿಯನ್ ಆಯಿತು..! ಧೋನಿಯ ನಾಯಕತ್ವದಲ್ಲಿ ಭಾರತ ಎರಡು ವಿಶ್ವಕಪ್​ ಗೆದ್ದಿತು. 2003ರ ವಿಶ್ವಕಪ್​ನಲ್ಲಿ ಸೌರವ್​ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ ಫೈನಲ್​ನಲ್ಲಿ ಆಸೀಸ್​ ಎದುರು ಮುಗ್ಗರಿಸಿತ್ತು. 2007ರಲ್ಲಿ ದ್ರಾವಿಡ್​ ನೇತೃತ್ವದಲ್ಲಿ ಲೀಗ್​ನಲ್ಲೇ ಎಡವಿತ್ತು. 2011ರಲ್ಲಿ ಧೋನಿ ಆ ನೋವುಗಳನ್ನು ಮರೆಸಿಬಿಟ್ಟರು..! ಯುವರಾಜ್​ ಸಿಂಗ್ ಕ್ಯಾನ್ಸರ್​ ನಡುವೆಯೂ ಸರಣಿಯುದ್ಧಕ್ಕೂ ಆಲ್​ರೌಂಡ್ ಪ್ರದರ್ಶನ ನೀಡಿದ್ರು.
ಧೋನಿ ಅಂದ್ರೆ ಬರೀ 2 ವಿಶ್ವಕಪ್ ತಂದುಕೊಟ್ಟ ನಾಯಕನಲ್ಲ..! ಐಸಿಸಿಯ ಎಲ್ಲಾ ಪ್ರತಿಷ್ಠಿತ ಟ್ರೋಫಿಯನ್ನು ಗೆದ್ದ ಮಹಾ ನಾಯಕ..! 2010 ಮತ್ತು 2016ರಲ್ಲಿ ಏಷ್ಯಾಕಪ್, 2013ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯನ್ನು ಭಾರತ ಇದೇ ಮಾಹಿ ನೇತೃತ್ವದಲ್ಲಿ ಗೆದ್ದಿದೆ.

dhoni story in kannada

2015ರ ವಿಶ್ವಕಪ್​ನಲ್ಲಿ ಧೋನಿ ಸಾರಥ್ಯದಲ್ಲಿ ಭಾರತ ಸೆಮಿಫೈನಲ್​ ಪ್ರವೇಶಿಸಿತ್ತು.
2015ರ ನಂತರ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ವಿರಾಟ್ ಕೊಹ್ಲಿ ಹಿಡಿದಿದ್ದು ಕೂಡ ಈಗ ಇತಿಹಾಸ. ವಿರಾಟ್​ ನಾಯಕತ್ವದ ಯಶಸ್ಸಿಗೆ ಪರೋಕ್ಷವಾಗಿ ಧೋನಿಯೂ ಕಾರಣ. ವಿರಾಟ್ ನಾಯಕನಾಗಿದ್ದರೂ ಧೋನಿಯ ಸಲಹೆ, ಮಾರ್ಗದರ್ಶನದಲ್ಲೇ ಕೊಹ್ಲಿ ಡಿಸಿಷನ್ ತೆಗೆದುಕೊಳ್ಳೋದು ಅಂತ ಎಲ್ಲರಿಗೂ ಗೊತ್ತು. ಧೋನಿ ನಿರ್ಧಾರ ಪಕ್ಕಾ ಆಗಿರುತ್ತೆ ಅನ್ನೋದನ್ನು ಬಲ್ಲ ವಿರಾಟ್ ಧೋನಿಯನ್ನು ಕೇಳಿಯೇ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳೋದು. ವಿರಾಟ್ ನೇತೃತ್ವದಲ್ಲಿ ಅದೆಷ್ಟೋ ಮ್ಯಾಚ್​ಗಳನ್ನು ಧೋನಿ ಮಾಡಿದ ಮ್ಯಾಜಿಕ್​ನಿಂದ ಭಾರತ ಗೆದ್ದಿದೆ.

dhoni kannada news live

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವರ್ಲ್ಡ್​ಕಪ್​ನಲ್ಲಿ ಭಾರತ ಉತ್ತಮ ಪ್ರದರ್ಶನವನ್ನೇ ನೀಡಿತ್ತು. ಆದರೆ, ಸೆಮಿಫೈನಲ್​ನಲ್ಲಿ ಅದೃಷ್ಟ ನಮ್ ಜೊತೆಗಿರಲಿಲ್ಲವಷ್ಟೇ..! ನ್ಯೂಜಿಲೆಂಡ್​ ನೀಡಿದ್ದ 240ರನ್​ಗಳ ಟಾರ್ಗೆಟನ್ನು ಚೇಸ್​ ಮಾಡುವಲ್ಲಿ ವಿರಾಟ್ ಪಡೆ ಮುಗ್ಗರಿಸಿತು. ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳಾದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ನಾಯಕ ವಿರಾಟ್​ ಕೊಹ್ಲಿ ಕೇವಲ ಒಂದೊಂದು ರನ್ ಮಾಡಿ ಪೆವಲಿಯನ್ ಸೇರಿದ್ರು. ದಿನೇಶ್ ಕಾರ್ತಿಕ್ ಮಾಡಿದ್ದು 6ರನ್ ಮಾತ್ರ. ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಇಬ್ರೂ 32ರನ್ ಮಾಡಿ ಔಟಾದ್ರು. ಇಂಥಾ ಪರಿಸ್ಥಿತಿಯಲ್ಲಿ ಆಲ್​ರೌಂಡರ್ ರವೀಂದ್ರ ಜಡೇಜಾ ಜೊತೆಗೂಡಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಕಟ್ಟಿದ್ದು ಇದೇ ಮಾಹಿ ಅಲಿಯಾಸ್ ಮಹೇಂದ್ರ ಸಿಂಗ್ ಧೋನಿ. ಜಡೇಜಾ ಹೊಡಿಬಡಿ ಆಟವಾಡಿ 77ರನ್ ಸಿಡಿಸಿದ್ರು. ಧೋನಿ ಸ್ವಲ್ಪ ನಿಧಾನವಾಗಿ ಆಡುತ್ತಾ ಜಡೇಜಾಗೆ ಸಾಥ್ ನೀಡಿದ್ರು. ಧೋನಿಯೂ ವೇಗವಾಗಿ ಆಡಬಹುದಿತ್ತು.. ಒಂದು ವೇಳೆ ಧೋನಿ ಆರಂಭದಲ್ಲೇ ಎಡವಿ ಬಿಟ್ಟಿದ್ರೆ ಭಾರತ ಹೋರಾಟವಿಲ್ಲದೇ ಸೋಲನುಭವಿಸುತ್ತಿತ್ತೇನೋ..ಆದರೆ, ಧೋನಿ ಕೊನೆಯವರೆಗೂ ಹೋರಾಟ ನಡೆಸುವ ಪ್ಲಾನ್ ಮಾಡಿಕೊಂಡಿದ್ರು. ಧೋನಿ ಸ್ಕ್ರೀಸ್​​ನಲ್ಲಿರುವಷ್ಟೂ ಹೊತ್ತು ಎದುರಾಳಿಗಳಲ್ಲಿ ನಡುಕ ಇದ್ದೇ ಇತ್ತು. ಆದರೆ, ಧೋನಿ 50 ರನ್ ಮಾಡಿ ಔಟಾದಾಗ ಭಾರತದ ಗೆಲುವು ಮರೀಚಿಕೆ ಆಯ್ತು.
ಭಾರತ 18ರನ್​ಗಳಿಂದ ಸೋಲುತ್ತಿದ್ದಂತೆ ಒಂದಿಷ್ಟು ಮಂದಿ ಬರೀ ಧೋನಿಯನ್ನೇ ಟೀಕಿಸಲಾರಂಭಿಸಿದ್ರು. ಧೋನಿ ವೇಗವಾಗಿ ಆಡ್ಬೇಕಿತ್ತು ಅಂತ..! ಧೋನಿಗೆ ಯಾವ ಸಂದರ್ಭದಲ್ಲಿ ಹೇಗೆ ಆಡ್ಬೇಕು ಅಂತ ಈ ಟೀಕಾಕಾರರು ಹೇಳಿಕೊಡ್ಬೇಕಾ? ಧೋನಿ ಉತ್ತಮವಾಗಿಯೇ ಆಡಿದ್ರು. ಆದರೆ ವಿಶ್ವಕಪ್ ಈ ಸಲ ನಮ್ಮ ಅದೃಷ್ಟಕ್ಕಿಲ್ಲವಷ್ಟೇ. ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳ ವೈಫಲ್ಯವನ್ನು ಧೂಷಿಸದೇ ಧೋನಿಯನ್ನೇ ಟಾರ್ಗೆಟ್​ ಮಾಡುವ ಮಂದಿಗೆ ಧೋನಿಯ ಕಣ್ಣೀರು ಕಾಣಲೇ ಇಲ್ಲ.. ಕಂಡರೂ ಅದನ್ನು ನೋಡಿ ಮನ ಕರಗಲೇ ಇಲ್ಲ..!

ಎಂದೂ ಧೋನಿ ಕಣ್ಣೀರು ಹಾಕಿದ್ದನ್ನು ನಾವು-ನೀವು ನೋಡಿಯೇ ಇರಲಿಲ್ಲ. ಛೇ..ನನ್ನಿಂದ ಇದೊಂದು ಮ್ಯಾಚ್​ ಅನ್ನು ಗೆಲ್ಲಿಸಿಕೊಡಲು ಆಗಿಲ್ವಲ್ಲಾ..? ಇದೊಂದು ಮ್ಯಾಚ್ ಗೆದ್ದಿದ್ರೆ, ಇನ್ನು ಫೈನಲ್​ನಲ್ಲಿ ಎದುರಾಳಿಯನ್ನು ಮಣಿಸಿದ್ರೆ ಭಾರತಕ್ಕೆ ಮತ್ತೊಂದು ವಿಶ್ವಕಪ್ ಸಿಗ್ತಿತ್ತಲ್ಲಾ ಅಂತ ಧೋನಿ ಕಣ್ಣೀರು ಸುರಿಸುತ್ತಾ, ಭಾವುಕರಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ದು ಧೋನಿ ದೇಶಕ್ಕಾಗಿ, ದೇಶವನ್ನು ಚಾಂಪಿಯನ್ ಮಾಡಲು ಅದೆಷ್ಟರ ಮಟ್ಟಿಗೆ ಪಣ ತೊಟ್ಟಿದ್ದರು ಅನ್ನೋದು ಎಲ್ಲರಿಗೂ ಅರ್ಥವಾಗ್ಬೇಕು.
ನಿನ್ನೆ ಭಾರತ ಗೆದ್ದಿದ್ದರೆ ಜಡೇಜಾ ಹೀರೋ ಆಗಿರ್ತಿದ್ರು.. ಭಾರತ ವಿಶ್ವಕಪ್ ಎತ್ತಿ ಹಿಡಿದಿದ್ದರೆ ಅದರ ವಿಶ್ವ ಗೆದ್ದ ನಾಯಕ ಅನ್ನೋ ಪಟ್ಟ ವಿರಾಟ್​ ಗೆ ಒಲಿಯುತ್ತಿತ್ತು. ರೋಹಿತ್ ಶರ್ಮಾ ವಿಶ್ವಕಪ್ ಹೀರೋ ಆಗಿ ಮಿಂಚುತ್ತಿದ್ರು. ಧೋನಿಯ ಹೆಸರು ಬರೀ ತಂಡ ಸದಸ್ಯರ ಸಾಲಿನಲ್ಲಿ ಇರ್ತಿದ್ರಷ್ಟೇ..! ಆದ್ರೆ, ಗೆಲುವಿನ ಶ್ರೇಯ ಯಾರಿಗೇ ಸಿಗಲಿ.. ಪಂದ್ಯ ಗೆಲ್ಲಿಸುವ ಹೊಣೆ ನನ್ನ ಮೇಲಿತ್ತು..ಅದು ಸಾಧ್ಯವಾಗ್ಲಿಲ್ಲ ಅಂತ ಧೋನಿ ಅತ್ತಿದ್ದು ಮಾತ್ರ ನಾಟಕ ಅಲ್ಲ..ಧೋನಿ ನಿಜಕ್ಕೂ ಎಲ್ಲರಿಗಿಂತ ಹೆಚ್ಚು ನೊಂದಿದ್ದಾರೆ… ಧೋನಿಗೆ ಧೋನಿಯೇ ಸಾಟಿ.. ಟಿವಿ ಮುಂದೆ ಕೂತು ಧೋನಿ ಆಡಿಲ್ಲ ಅಂತ ಹೇಳೋರು ಮೊದಲು ಧೋನಿಯ ಸಾಧನೆಯ ಬಗ್ಗೆ ತಿಳಿದುಕೊಳ್ಳಬೇಕಷ್ಟೇ..!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top