ದಾರಿತಪ್ಪಿದ ಮಗನಾಗಿ‌ ಡಾ.ರಾಜ್ ವಂಶದ ಕುಡಿ..!

ಕನ್ನಡ ಚಿತ್ರರಂಗದ ಧೃವತಾರೆ ಕನ್ನಡ ಕಣ್ಮಣಿ ಡಾ.ರಾಜ್ ಕುಮಾರ್ ಅವರ ಇನ್ನೊಂದು ಕುಡಿ ಸ್ಯಾಂಡಲ್‍ವುಡ್‍ಗೆ ದಾರಿತಪ್ಪಿದ ಮಗನಾಗಿ ಎಂಟ್ರಿಕೊಡ್ತಾ ಇದ್ದಾರೆ. ಹೌದು ಸ್ಯಾಂಡಲ್‍ವುಡ್‍ನ ಹ್ಯಾಂಡ್ಸಂ ಹೀರೋ ರಾಮ್ ಕುಮಾರ್ ಮಗ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಡ್ತಾ ಇರೋ ಮತ್ತೋಬ್ಬ ರಾಜ್ ಫ್ಯಾಮಿಲಿಯ ಹುಡುಗ. ಈ ಹಿಂದೆ ರಾಮ್ ಕುಮಾರ್ ಮಗ ಹೀರೋ ಆಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡಲಿದ್ದಾರೇ ಅನ್ನೋ ಸುದ್ದಿ ಹರಿದಾಡ್ತಾ ಇತ್ತು‌.ಆದ್ರೆ ಈಗ ಧೀರೇನ್ ರಾಮ್ ಕುಮಾರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಡೌಟ್ ಗೆ ಫುಲ್ ಸ್ಟಾಪ್ ಇಡಲಾಗಿದೆ. ಇನ್ನು ದಾರಿತಪ್ಪಿದ ಮಗ‌ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು ಪೋಸ್ಟರ್ ನಲ್ಲಿ ಧೀರೇನ್ ಸಖತ್ ಮಾಸ್ ಲುಕ್ ನಲ್ಲಿ ಕಾಣಿಸುತ್ತಿದ್ದಾರೆ. ಇನ್ನು ಈ ಚಿತ್ರ ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ಬರ್ತಾ ಇದ್ದು ಚಿತ್ರಕ್ಕೆ ಅನಿಲ್ ಕುಮಾರ್ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ.


ಇನ್ನು ಚಿತ್ರಕ್ಕೆ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸದ್ದ ದಾರಿತಪ್ಪಿದ ಮಗ ಚಿತ್ರದ ಟೈಟಲ್ ಅನ್ನೇ ಇಟ್ಟಿರೋದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಒಟ್ಟಿನಲ್ಲಿ ರಾಜ್ ಕುಮಾರ್ ಫ್ಯಾಮಿಲಿ‌ಯಿಂದ ಮತ್ತೊಬ್ಬ ನಟನನ್ನು ಪರಿಚಯಿಸ್ತಾ ಇರೋದು‌ ಚಿತ್ರರಸಿಕರಲ್ಲಿ ಸಂತೋಷ ಹೆಚ್ಚಿಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top