
ಬಾಕ್ಸಾಫಿಸ್ ಸುಲ್ತಾನ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಒಡೆಯ ಈಗಾಗ್ಲೇ ದೊಡ್ಡ ಹೈಪ್ ಕ್ರಿಯೆಟ್ ಮಾಡಿದೆ, ಸದ್ಯ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವಕ್ಕೆ ಗಿಫ್ಟ್ ಕೊಡಲು ಸಿದ್ಧತೆ ನಡೆಸಿಕೊಳ್ತಾ ಇದೆ, ನವೆಂಬರ್ ಒಂದನೇ ತಾರೀಖು ಡಿ ಬಾಸ್ ಅಭಿನಯದ ಒಡೆಯ ಚಿತ್ರದ ಟೀಸರ್ ರಿಲೀಸ್ ಆಗಲಿದ್ದು,

ಈ ಮೂಲಕ ಡಿ ಬಾಸ್ ಅಭಿಮಾನಿಗಳಿಗೆ ರಾಜ್ಯೋತ್ಸವ ಗಿಫ್ಟ್ ಕೊಡಲು ರೆಡಿಯಾಗ್ತಾ ಇದೆ. ಇನ್ನು ಈ ಖುಷಿ ವಿಚಾರವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿಕೊಂಡಿರೋ ಡಿ ಬಾಸ್ ನಿಮ್ಮ ಪ್ರೋತ್ಸಾಹ ,ಆಶೀರ್ವಾದ ಇರಲಿ ಅಂತ ಪೋಸ್ಟ್ ಮಾಡೋ ಮೂಲಕ ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದಾರೆ. ಈ ಮೂಲಕ ನವೆಂಬರ್ 1ರಿಂದ ಒಡೆಯನ ದರ್ಬಾರ್ ಶುರುವಾಗಲಿದೆ..