ಅಭಿಮಾನಿಗಳಲ್ಲಿ ದರ್ಶನ್ ಮನವಿ – ದಯವಿಟ್ಟು ಯಾರೂ ಆಸ್ಪತ್ರೆಯ ಹತ್ತಿರ ಬರಬೇಡಿ

ನಟ ದರ್ಶನ್ ಬಲಗೈ ಶಸ್ತ್ರಚಿಕಿತ್ಸೆ ಯಶಸ್ವಿ ಸತತ ಒಂದೂವರೆ ಗಂಟೆಗಳ ಕಾಲ ನಿರಂತರ ಶಸ್ತ್ರಚಿಕಿತ್ಸೆ, ಬಲಗೈ ಮೊಣಕೈಗೆ ಚುಚ್ಚಿರುವ ಬಳೆ, ಬಳೆ ಚುಚ್ಚಿದ್ದರಿಂದ ತೀವ್ರ ರಕ್ತ ಸ್ರಾವ, ಬಳೆ ಹೊರ ತೆಗೆದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು

ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಅಪಘಾತದಿಂದಾಗಿ ದರ್ಶನ್ ಬಲಗೈಗೆ ಹಾಕಿದ ಕಡಗ ಕಟ್‌ ಆಗಿ ಕೈ ಒಳ ಹೊಕ್ಕಿತ್ತು. ಸದ್ಯ ಕಡಗವನ್ನು ಕಟ್ ಮಾಡಿ ತೆಗೆದು ಸ್ಟಿಚಿಂಗ್ ಮಾಡಲಾಗಿದೆ.

ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ರವರಿಂದ ಅಭಿಮಾನಿಗಳಲ್ಲಿ ಕಳಕಳಿಯ ಮನವಿಯನ್ನು ಮಾಡಿಕೊಂಡಿದ್ದಾರೆ – ‘ನನ್ನ ಅನ್ನದಾತರಿಗೆ ಅರ್ಥಾತ್ ನನ್ನ ಅಭಿಮಾನಿಗಳಿಗೆ ತಿಳಿಸುವುದೇನೆಂದರೆ ನನಗೆ ಏನು ಆಗಿಲ್ಲ. ನಾಳೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ. ಆ ನಂತರ ನಿಮ್ಮೆಲ್ಲರನ್ನು ಕಾಣುತ್ತೇನೆ. ದಯವಿಟ್ಟು ಯಾರೂ ಆಸ್ಪತ್ರೆಯ ಹತ್ತಿರ ಬರಬೇಡಿ. ಆಸ್ಪತ್ರೆಯಲ್ಲಿರುವ ಬೇರೆ ರೋಗಿಗಳಿಗೆ ನನ್ನಿಂದ ತೊಂದರೆಯಾಗುವುದು ಸರಿಯಲ್ಲ. ದಯಮಾಡಿ ಶಾಂತಿಯಿಂದಿರಿ ಎಂದು ಆಡಿಯೋ ಸಂದೇಶವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭೀಮಾನಿಗಳಿಗೆ ಶೇರ್ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top