ದರ್ಶನ್ ಇನ್ಮುಂದೆ ರಾಬರ್ಟ್‌..!

ಚಾಲೆಂಜಿಂಗ್ ಸ್ಟಾರ್‌ ದರ್ಶನ್ ಕಾರ್ ಅಪಘಾತದಲ್ಲಿ ಕೈಗೆ‌ ಪೆಟ್ಟು ಮಾಡಿಕೊಂಡು ಚಿತ್ರೀಕರಣದಿಂದ‌ ಸ್ಪಲ್ಪ ದೂರ‌ಸರಿದಿದ್ರು ಆದ್ರೆ ಅಪಘಾತದಿಂದ ಚೇತರಿಕೆ ಕಂಡು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ಜೊತೆಯಲ್ಲೇ ದರ್ಶನ್‌ ಅವರ ಕಡೆಯಿಂದ‌ ಈಗ ಇ‌ನ್ನೊಂದು ಹೊಸ‌ ವಿಚಾರ ಹೊರ ಬಂದಿದೆ . ಈಗಾಗ್ಲೇ ಯಜಮಾನ‌‌ ಚಿತ್ರದ ಶೂಟಿಂಗ್ ಮುಗಿಸಿ ಒಡೆಯ ಚಿತ್ರದ ಶೂಟಿಂಗ್ ನಲ್ಲಿ ತೊಡಗಿರೋ‌ ದರ್ಶನ್ ರ‌ ಮುಂದಿನ‌ ಸಿನಿಮಾ ಯಾವ್ದು ಅನ್ನೋದು ಎಲ್ಲರಿಗೂ ಗೊತ್ತಿತ್ತು. ಚೌಕ ಚಿತ್ರದ ಮೂಲಕ ನಿರ್ದೇಶಕರಾದ ತರುಣ್ ಸುದೀರ್ ನಿರ್ದೇಶನದಲ್ಲಿ ಹೆಬ್ಬಲಿ ನಿರ್ಮಾಪಕ ಉಮಾಪತಿ‌ ಅವರ ನಿರ್ಮಾಣದಲ್ಲಿ‌ ಸಿನಿಮಾ ಬರಲಿದೇ ಅನ್ನೋ ಮಾಹಿತಿ ಇತ್ತು ಆದ್ರೆ ಚಿತ್ರದ ಟೈಟಲ್ ಏನೂ ಅನ್ನೋದು ಮಾತ್ರ ತಿಳಿದಿರಲಿಲ್ಲ, ಆದ್ರೆ ಈಗ ಚಿತ್ರದ ಟೈಟಲ್ ಫೈನಲ್ ಆಗಿದೆ . ತರುಣ್ ಸುದೀರ್ ಮತ್ತು ದರ್ಶನ್ ಕಾಂಬಿನೇಷನ್ ನಲ್ಲಿ ಬರ್ತಾ ಇರೋ ಈ ಚಿತ್ರಕ್ಕೆ ‘ರಾಬರ್ಟ್’ ಅನ್ನೋ ಹೆಸರು ಇಡಲಾಗಿದೆ. ಈ ಹಿಂದೆ ಚಿತ್ರಕ್ಕೆ 4-5 ಟೈಟಲ್ ಗಳನ್ನು ಸೆಲೆಕ್ಟ್ ಮಾಡಲಾಗಿತ್ತಂತೆ ಕೊನೆಗೆ ಚಿತ್ರತಂಡ ಕೂತು ರಾಬರ್ಟ್‌ ಅನ್ನೋ ಹೆಸರನ್ನು ಫೈನಲ್ ಮಾಡಿ‌ ಚಿತ್ರಕ್ಕೆ ಟೈಟಲ್ ಇಡಲಾಗಿದೆ.


ಚೌಕದಲ್ಲಿ ರಾಬರ್ಟ್ ಆಗಿದ್ದ ದಚ್ಚು..!
ಇನ್ನು ಇದೇ ತರುಣ್ ಸುದೀರ್ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್ ರಾಬರ್ಟ್ ಅನ್ನೋ ಅಥಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಈಗ ದರ್ಶನ್ ರ ಒಂದು ಸಿನಿಮಾದ ಪಾತ್ರವನ್ನೇ ಟೈಟಲ್ ಆಗಿ‌ ಇಟ್ಟಿರೋದು ಚಿತ್ರದ ಇನ್ನೊಂದು ಲೈಟ್ ಆಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top