ತೆರೆಮೇಲೆ ಮತ್ತೆ ರಾಧಿಕಾ ಕುಮಾರಸ್ವಾಮಿ ಪವರ್ ಫುಲ್ ಘರ್ಜನೆ.!

ರಾಧಿಕಾ ಕುಮಾರಸ್ವಾಮಿ ಮತ್ತೆ ಸ್ಯಾಂಡಲ್‍ವುಡ್‍ಗೆ ಪವರ್ ಫುಲ್ ಆಗಿ ಎಂಟ್ರಿಕೊಟ್ಟಿದ್ದಾರೆ, ಆದ್ರೆ ಈ ಬಾರಿ ಅವರು ಬರ್ತಾ ಇರೋದು ಮಾತ್ರ ಅಂತಿಂತ ರೋಲ್‍ನಲ್ಲಿ ಅಲ್ಲ ಈ ರೋಲ್‍ಗೆ ಈಗಾಗ್ಲೇ ಸಿನಿರಸಿಕರು ತಮ್ಮ ಎದೆಯನ್ನೇ ಗಟ್ಟಿಮಾಡಿಕೊಂಡಿದ್ದಾರೆ, ಹೌದು ರಾಧಿಕಾ ಕುಮಾರಸ್ವಾಮಿ ಈ ಬಾರಿ ಧಮಯಂತಿಯಾಗಿ ಒಂದು ಪವರ್ ಫುಲ್ ಮತ್ತು ಹಾರರ್ ಲುಕ್‍ನಲ್ಲಿ ಕಾಣಿಸಿಕೊಂಡು ಸಿನಿರಸಿಕರ ಎದೆ ಝಲ್ ಎನಿಸಿದ್ದಾರೆ.

ಇದುವರೆಗೂ ಹಾಟ್ ಆಂಡ್ ಕ್ಯೂಟ್ ಆಗಿ ಕಾಣಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ ಈ ಬಾರಿ ಹಾರಾರ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ, ಈಗಾಗ್ಲೇ `ದಮಯಂತಿ’ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಭಾರೀ ಸೌಂಡ್ ಮಾಡ್ತಾ ಇದೆ, ಪವರ್ ಫುಲ್ ಡೈಲಾಗ್ ಮೂಲಕ ದಮಯಂತಿಯಾಗಿ ಕಾಣಿಸಿಕೊಳ್ಳೊ ರಾಧಿಕಾ ಕುಮಾರಸ್ವಾಮಿಯನ್ನು ನೋಡೋದೆ ಒಂದು ರೀತಿಯ ಥ್ರಿಲ್ ಆಗಿ ಕಾಣಿಸ್ತಾ ಇದೆ, ಇನ್ನು ಸಣ್ಣ ಟೀಸರ್ ನಲ್ಲೇ ಒಂದೊಳ್ಳೆ ಮೇಕಿಂಗ್ ಝಲಕ್ ಕೊಟ್ಟಿದ್ದು, ವಿಶೇಷ ಅಂದ್ರೆ, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಿಂದಿ 5 ಭಾಷೆಯಲ್ಲಿ ಏಕಕಾಲದಲ್ಲಿ ತಯಾರಾಗಿರೋ ದಮಯಂತಿ ಏಕಕಾಲದಲ್ಲೇ ಪಂಚ ಭಾಷೆಯಲ್ಲಿ ಟೀಸರ್ ರಿಲೀಸ್ ಆಗಿದೆ. ಸಿನಿರಸಿಕರಿಗೆ ತುಂಬಾ ಇಷ್ಟವಾಗಿದೆ,

ನನಗೆ ಈ ಪಾತ್ರಮಾಡಿ ಖುಷಿಯಾಯ್ತು ಅಂದ ರಾಧಿಕಾ..!
ನಾನು ನನ್ನ ಜೀವನದಲ್ಲಿ ಒಂದು ವಿಭಿನ್ನ ರೀತಿಯ ಪಾತ್ರ ಮಾಡಬೇಕು ಅನ್ನೋದು ಬಹುದಿನದ ಆಸೆಯಾಗಿತ್ತು, ಆದ್ರೆ ಟೀಸರ್ ನೋಡಿದ ಮೇಲೆ ನನಗೆ ಸಿನಿಮಾ ಮಾಡಿದ್ದು ಸಾರ್ಥಕ ಎನಿಸಿತು, ಶೂಟಿಂಗ್ ಟೈಂನಲ್ಲಿ 4 ಗಂಟೆಗಳ ಕಾಲ ಮೇಕಪ್‍ನಲ್ಲಿ ತೊಡಗಬೇಕಾಗಿತ್ತು ಆ ಎಲ್ಲಾ ಕ್ಷಣಗಳನ್ನು ಎಂಜಾಯ್ ಮಾಡುತ್ತಿದ್ದೆ ಅದರ ಫಲವೇ ಈ ಸ್ಕ್ರೀನ್ ಮೇಲೆ ಬಂದಿದೆ ಎಂದ ರಾಧಿಕಾ ಕುಮಾರಸ್ವಾಮಿ,
ಇನ್ನು ಈ ಸಿನಿಮಾ ರಿಲೀಸ್ ಆದ ಮೇಲೆ ನನ್ನ ಮಗಳಾಗಲಿ, ನನ್ನ ಅಣ್ಣನ ಮಕ್ಕಳಾಗಲಿ ನನ್ನ ಬಳಿ ಬರೋದಕ್ಕೆ ಭಯ ಪಡಬಹುದು ಆ ರೀತಿ ಭಯಾನಂಕವಾಗಿ ಮೂಡಿ ಬಂದಿದೆ ಈ ಸಿನಿಮಾ ಅಂತ ಹೇಳಿದ್ರು, ಒಟ್ಟಿನಲ್ಲಿ ಬಹುದಿನಗಳ ನಂತರ ಮತ್ತೆ ತೆರೆಮೇಲೆ ಮಿಂಚೋಕೆ ರೆಡಿಯಾಗಿರೋ ರಾಧಿಕಾ ಈ ಬಾರಿ ದಮಯಂತಿಯಾಗಿ ಪಕ್ಕಾ ಸಿನಿರಸಿಕರನ್ನು ರಂಜಿಸಲಿದ್ದಾರೆ ಅಂತಿದ್ದಾರೆ ಗಾಂಧಿನಗರದ ಮಂದಿ.

ನವರಸನ್ ಸಾರಥ್ಯದಲ್ಲಿ ನಳನಳಿಸಿದ್ದಾಳೆ ದಮಯಂತಿ
ಸ್ಯಾಂಡಲ್‍ವುಡ್ ನ ಬಹುಮುಖ ಪ್ರತಿಭೆ, ನಟ, ನಿರ್ದೇಶಕ, ನಿರ್ಮಾಪಕ, ವಿತರಕ ನವರಸನ್ ನಿರ್ದೇಶನದೊಂದಿಗೆ ನಿರ್ಮಾಣ ಮಾಡಿರೋ ಸಿನಿಮಾ ದಮಯಂತಿ. ಶ್ರೀ ಲಕ್ಷ್ಮೀ ವೃಶಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗಿರೋ ಈ ಸಿನಿಮಾದಲ್ಲಿ ತಬಲ ನಾಣಿ, ಮಿತ್ರ ಕೂಡ ಪ್ರಮುಖ‌ಪಾತ್ರಗಳಲ್ಲಿ‌ ಕಾಣಿಸಿಕೊಂಡಿದ್ದಾರೆ. ಆರ್.ಎಸ್ ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸಿದ್ದಾರೆ. ಮಹೇಶ್ ರೆಡ್ಡಿ ಸಂಕಲನವಿರೋ ಈ ಸಿನಿಮಾಗೆ ಪಿಕೆಎಚ್ ದಾಸ್ ಕ್ಯಾಮೆರಾ ಕಣ್ಣಾಗಿದ್ದಾರೆ.

ಟೆಕ್ನಿಕಲಿ ತುಂಬಾ ಸ್ಟ್ರಾಂಗ್ ಆಗಿ ಕ್ವಾಲಿಟಿಯಾಗಿ ಕಾಣ್ತಿರೋ ದಮಯಂತಿ ಚಿತ್ರದ ಟೀಸರ್ ಸದ್ಯ ನಾಲ್ಕು ಭಾಷೆಯಲ್ಲೂ ದೊಡ್ಡ ನಿರೀಕ್ಷೆ ಹುಟ್ಟಿಸಿದೆ.. ಸದ್ಯ ಟೀಸರ್ ರಿಲೀಸ್ ಮಾಡಿ ಪಬ್ಲಿಸಿಟಿ ಶುರುಮಾಡಿರೋ ಚಿತ್ರತಂಡ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಅಂದ್ಹಾಗೆ ಎಲ್ಲಾ ಅಂದುಕೊಂಡಂತೆ ಆದ್ರೆ ಈ ವರ್ಷಾಂತ್ಯಕ್ಕೆ ಪ್ರೇಕ್ಷಕರೆದುರಿಗೆ ಬರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top