ದಮಯಂತಿಗೆ ಕೇರಳದಲ್ಲಿ ಸೂಪರ್ ಸ್ಟಾರ್ `ಮೋಹನ್ ಲಾಲ್ ಸಾಥ್..!

damayanthi malayalam

ರಾಧಿಕಾ ಕುಮಾರಸ್ವಾಮಿ ಡಿಫರೆಂಟ್ ಲುಕ್‍ನಲ್ಲಿ ಕಾಣಿಸಿಕೊಳ್ತಾ ಇರೋ ದಮಯಂತಿ ಸಿನಿಮಾ ಈಗಾಗಲೇ ಸಖತ್ ಸೌಂಡ್ ಮಾಡ್ತಾ ಇದೆ, ಟ್ರೈಲರ್ ರಿಲೀಸ್ ಆದಾಗಿನಿಂದ ರಾಧಿಕಾ ಅವರ ಫುಲ್ ಗೆಟಪ್ ನೋಡಲು ಸಿನಿರಸಿಕರು ಕಾತುರದಿಂದ ಕಾಯ್ತಾ ಇದ್ದಾರೆ, ಇನ್ನು ಡಿಫರೆಂಟ್ ಲುಕ್‍ನಲ್ಲಿ ದಮಯಂತಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ರಾಧಿಕಾ ಕುಮಾರಸ್ವಾಮಿಯವರನ್ನು ನೋಡಿ ಈ ಸಿನಿಮಾ ಹಿಟ್ ಆಗೋದ್ರಲ್ಲಿ ಎರಡು ಮಾತಿಲ್ಲ ಅಂತಿದೆ ಗಾಂಧಿನಗರ, ಇನ್ನು ಈ ಚಿತ್ರ ಐದು ಭಾಷೆಯಲ್ಲಿ ತೆರೆಗೆ ಬರೋದಕ್ಕೆ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ ಚಿತ್ರತಂಡ, ಇನ್ನು ದಮಯಂತಿಗೆ ಕೇರಳದಲ್ಲಿ ಮೋಹನ್ ಲಾಲ್ ಸಾಥ್ ನೀಡಿದ್ದು ಇನ್ನಷ್ಟು ಆನೆ ಬಲ ಬಂದಂತಾಗಿದೆ.

ದಮಯಂತಿ ಚಿತ್ರ ಪೋಸ್ಟರ್ ರಿಲೀಸ್ ಮಾಡಿದ ಮೋಹನ್ ಲಾಲ್ ಚಿತ್ರತಂಡಕ್ಕೆ ಶುಭಕೋರಿದ್ದಾರೆ, ಪಂಚಭಾಷೆಯಲ್ಲಿ ಬರೋದಕ್ಕೆ ರೆಡಿಯಾಗಿರೋ ದಮಯಂತಿ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಆಗೋದ್ರಲ್ಲಿ ಯಾವುದೇ ಅನುಮಾನವೇ ಇಲ್ಲ, ಈಗಾಗ್ಲೇ ಟ್ರೈಲರ್ ಮೂಲಕ ಸೌಂಡ್ ಮಾಡ್ತಾ ಇದ್ದು ಚಿತ್ರವನ್ನು ಸದ್ಯದರಲ್ಲೇ ಐದು ಭಾಷೆಯಲ್ಲಿ ತೆರೆಮೇಲೆ ತರೋ ಪ್ಲಾನ್ ಮಾಡ್ತಾ ಇದೆ.

ಇನ್ನು ಚಿತ್ರಕ್ಕೆ ನಿರ್ದೇಶನ ಮತ್ತು ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ ನವರಸನ್ ಮತ್ತು ಗಣೇಶ್ ನಾರಾಯಣ್ ಚಿತ್ರಕ್ಕೆ ಸಂಗೀತ ನೀಡಿದ್ದು ಈಗಾಗ್ಲೇ ಚಿತ್ರದ ಬ್ಯಾಕ್‍ಗ್ರೌಂಡ್ ಮ್ಯೂಸಿಕ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳೀ ಬರ್ತಾ ಇದೆ, ಮೋಹನ್ ಲಾಲ್ ಅವರ ಬಳಿ ಪೋಸ್ಟರ್ ರಿಲೀಸ್ ಮಾಡಿಸೋ ಮೂಲಕ ಮಾಲಿವುಡ್‍ನಲ್ಲಿ ಅಧಿಕೃತವಾಗಿ ಚಿತ್ರದ ಪ್ರಮೋಷನ್ ಶುರುಮಾಡಿದ್ದ ಸದ್ಯದರಲ್ಲೇ 5 ಭಾಷೆಯಲ್ಲೂ ತೆರೆಮೇಲೆ ತರೋ ಪ್ಲಾನ್ ಮಾಡಿಕೊಳ್ತಾ ಇದೆ ಚಿತ್ರ ತಂಡ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top