ಯಶ್ ವಿರುದ್ಧ ಗರಂ ಆದ ಮಗಳು ಐರಾ..!

ನಟ ಯಶ್ ಇಂದು ಬೆಳಗ್ಗೆ ತಮ್ಮ ಮಡದಿ ಸಮೇತರಾಗಿ ನಂಜನಗೂಡು ನಂಜುಡೇಶ್ವರನಿಗೆ ತಮ್ಮ ಮಗಳು ಐರಾಗೆ ಮುಡಿ ತೆಗೆಸಿದ್ದು, ಇದಕ್ಕೆ ಮಗಳು ಐರಾ ತಂದೆ ವಿರುದ್ಧಗರಂ ಆಗಿದ್ದಾಳೆ. ಆದ್ರೆ ಇದು ಜಸ್ಟ್ ಫಾರ್ ತಮಾಷೆಗೆ ಹೌದು ಇಂದು ಬೆಳಗ್ಗೆ ಯಶ್ ಮತ್ತು ರಾಧಿಕಾ ನಂಜನಗೂಡಿನಲ್ಲಿ ತಮ್ಮ ಮಗಳಿಗೆ ಮುಡಿ ಕೊಟ್ಟಿದ್ದು, ಈ ಫೋಟೋವನ್ನು ಹಂಚಿಕೊಂಡಿದ್ದಾರೆ

ಇನ್ನು ಯಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಯಶ್ ತಮ್ಮ ಮಗಳು ಐರಾ ಕೋಪದಿಂದ ನೋಡುತ್ತಿರೋ ಫೋಟೋ ಹಾಕಿ `ಅಪ್ಪ ಈಗ ಸಮ್ಮರ್ ಎಂದು ನನಗೆ ಗೊತ್ತು. ಆದ್ರೆ ಇದು ಸಮ್ಮರ್ ಕಟ್ ಅಲ್ಲ ಎಂದು ನನಗೆ ಪಕ್ಕಾ ತಿಳಿದಿದೆ. ಅಪ್ಪ ಸರಿ’ ಎಂದು ಫನ್ನಿ ಕ್ಯಾಪ್ಷನ್ ನೀಡಿದ್ದಾರೆ. ಇನ್ನು ಯಶ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದು ಐರಾ ಸೂಪರ್ ಎಂದು ಕಮೆಂಟ್ ಮಾಡಿದ್ರೆ, ಇನ್ನು ಕೆಲವ್ರು ಬಾಸ್ ಐರಾ ಸಿಟ್ಟಾಗಿದ್ದಾಳೆ ಹುಷಾರು ಬಾಸ್ ಅಂತ ಕಾಮೆಂಟ್ ಮಾಡಿದ್ದಾರೆ.

ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಅಭಿಮಾನಿಗಳು ಫೋಟೋ ನೋಡಿ ಖುಷ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top