ಎಲ್ಲೆಲ್ಲೂ ಈಗ ದರ್ಶನ್ ರಾಬರ್ಟ್ ಚಿತ್ರದ್ದೇ ಹವಾ!

`ರಾಬರ್ಟ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ, ಈಗಾಗ್ಲೇ ಚಿತ್ರದ ಪೋಸ್ಟರ್ ಮೂಲಕನೇ ಸಖತ್ ಹೀಟ್ ಕ್ರಿಯೆಟ್ ಮಾಡಿರೋ ತರುಣ್ ಸುದೀರ್ ನಿರ್ದೇಶನದ `ರಾಬರ್ಟ್’ ಚಿತ್ರ ಇನ್ನು ಶೂಟಿಂಗ್ ಹಂತದಲ್ಲಿ ಇರುವಾಗಲೇ ದೊಡ್ಡ ಹವಾ ಸೃಷ್ಟಿಸಿದೆ. ಇನ್ನು ಮೈಸೂರಿನಲ್ಲಿ ರಾಬರ್ಟ್ ಚಿತ್ರದ ಶೂಟಿಂಗ್ ನಡೀತಾ ಇದ್ದು, ಶೂಟಿಂಗ್ ಸೆಟ್‍ನಲ್ಲಿ ಪುಟ್ಟ ಅಭಿಮಾನಿಯ ಹುಟ್ಟುಹಬ್ಬ ಆಚರಿಸುವ ಮೂಲಕ `ಡಿಬಾಸ್’ ಅಭಿಮಾನಿಗಳಿಗೆ ಫುಲ್ ಖುಷ್ ಪಡಿಸಿದ್ರು, ಸದ್ಯ ರಾಬರ್ಟ್ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದು ಇನ್ನು ಶೂಟಿಂಗ್ ಹಂತದಲ್ಲಿ ಇರುವಾಗಲೇ ಭರ್ಜರಿ ಟ್ರೆಂಡ್ ಸೃಷ್ಟಿಸ್ತಾ ಇದೆ, ದರ್ಶನ್ ಹೊಸ ಸಿನಿಮಾ ಬರ್ತಾ ಇದೆ ಅಂದ್ರೆ ಅವರ ಹೇರ್ ಸ್ಟೈಲ್‍ನಿಂದ ಹಿಡಿದು ಡೈಲಾಗ್ ಎಲ್ಲವನ್ನು ಅನುಕರಿಸುತ್ತಾರೆ ಅಭಿಮಾನಿಗಳು, ಸದ್ಯ ರಾಬರ್ಟ್ ಚಿತ್ರದ ಪೋಸ್ಟರ್ ಗಳನ್ನು ಕಾರು,ಬೈಕು ಮತ್ತು ತಮ್ಮ ದೇಹದ ಮೇಲೆ ಅಚ್ಚೆ ಹಾಕಿಸಿಕೊಳ್ಳೋ ಮೂಲಕ ಕ್ರೇಜ್ ಕ್ರಿಯೆಟ್ ಮಾಡ್ತಾ ಇದ್ದಾರೆ, ಇನ್ನು ವಿಶೇಷವೇನೆಂದ್ರೆ ರಾಬರ್ಟ್ ಗಣೇಶ ಕೂಡ ಮಾರುಕಟ್ಟೆಗೆ ಬಂದು ಹೊಸ ಕ್ರೇಜ್ ಕ್ರಿಯೆಟ್ ಮಾಡಿದೆ, ಒಟ್ಟಿನಲ್ಲಿ ಹೊಸ ಸಿನಿಮಾಗಳು ದಾಖಲೆ ಮೇಲೆ ದಾಖಲೆ ನಿರ್ಮಿಸಿದ್ರೆ, ಈಗ ದರ್ಶನ್ ಸಿನಿಮಾ ಇನ್ನು ಶೂಟಿಂಗ್ ಹಂತದಲ್ಲಿ ಇರುವಾಗಲೇ ಈ ಮಟ್ಟಿಗೆ ಕ್ರೇಜ್ ಕ್ರಿಯೆಟ್ ಮಾಡ್ತಾ ಇರೋದು ಹೊಸ ಇತಿಹಾಸವೇ ಸರಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top