ಡಿ ಬಾಸ್ ಮುಂದಿನ ಸಿನಿಮಾಗೆ ಇವರೇ ಡೈರೆಕ್ಟರ್..! ಡಿ 54.!

darshan d boss , next movie

ಸ್ಯಾಂಡಲ್‍ವುಡ್‍ನ ಬಾಕ್ಸಾಫಿಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಒಡೆಯ ಚಿತ್ರದ ಸಾಂಗ್ ಶೂಟ್‍ನಲ್ಲೂ ಬ್ಯುಸಿಯಾಗಿರೋ ಡಿ ಬಾಸ್ ಅವರ ಮುಂದಿನ ಸಿನಿಮಾ ಮಾಡಲು ಟಾಲಿವುಡ್‍ನ ಸ್ಟಾರ್ ಡೈರೆಕ್ಟರ್ ಒಬ್ಬರು ರೆಡಿಯಾಗಿದ್ದಾರೆ. ಹೌದು ಡಿ ಬಾಸ್ ಅವರ ರಾಬರ್ಟ್ ಮತ್ತು ಒಡೆಯ ಸಿನಿಮಾದ ನಂತರ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಡಿ ಬಾಸ್ ಅಭಿಮಾನಿಗಳಲ್ಲಿ ಇದ್ದೆ ಇರುತ್ತದೆ. ಆದ್ರೆ ಆ ಎಲ್ಲಾ ಕುತೂಹಲಕ್ಕೆ ಈಗ ಡಿ ಬಾಸ್ ಕಡೆಯಿಂದ ಸಖತ್ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

darshan kannada actor

ಟಾಲಿವುಡ್‍ನ ಖ್ಯಾತ ನಿರ್ದೇಶಕರೊಬ್ಬರು ದರ್ಶನ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ಈಗ ಗಾಂಧಿನಗರದಲ್ಲಿ ಹರಿದಾಡ್ತಾ ಇದೆ. ಹೌದು ಟಾಲಿವುಡ್‍ನ ಖ್ಯಾತ ನಿರ್ದೇಶಕ ವಕ್ಕತಮ್ ವಂಶಿ ದರ್ಶನ್ ಅವರ ಮುಂದಿನ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ. ತೆಲುಗಿನಲ್ಲಿ ಅಶೋಕ್, ಕಿಕ್,ಎವುಡು,ರೇಸುಗುರಂ,ಟೆಂಪರ್ ಚಿತ್ರಗಳಿಗೆ ಕಥೆ ಬರೆದಿರುವ ವಂಶಿ ನಂತರ ಅಲ್ಲು ಅರ್ಜುನ್ ಅಭಿನಯದ `ನಾ ಪೇರು ಸೂರ್ಯ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರು.

ಇನ್ನು ಈ ಚಿತ್ರ ತಕ್ಕ ಮಟ್ಟಿಗೆ ವಂಶಿಗೆ ಹೆಸರು ಕೂಡ ತಂದು ಕೊಟ್ಟಿತ್ತು, ನಂತರದಲ್ಲಿ ಎರಡು ವರ್ಷಗಳ ಗ್ಯಾಪ್‍ನಂತರ ಒಂದೊಳ್ಳೆ ಕಥೆ ಮಾಡಿಕೊಂಡಿರೋ ವಂಶಿ ಈಗ ಸ್ಯಾಂಡಲ್‍ವುಡ್‍ನ ಬಾಕ್ಸಾಫಿಸ್ ಸುಲ್ತಾನ್ ಡಿ ಬಾಸ್ ಅವರಿಗೆ ಡೈರೆಕ್ಷನ್ ಹೇಳಲು ರೆಡಿಯಾಗಿದ್ದಾರಂತೆ. ಆದ್ರೆ ದರ್ಶನ್ ಅವರು ಕಥೆ ಕೇಳಿ ಓಕೆ ಎಂದರಷ್ಟೇ ಈ ಚಿತ್ರ ಸೆಟ್ಟೇರಲಿದೆ, ಸದ್ಯ ದರ್ಶನ್ ರಾಬರ್ಟ್ ಮತ್ತು ಒಡೆಯ ಚಿತ್ರದಲ್ಲಿ ಬ್ಯುಸಿ ಇದ್ದು ಆನಂತರ `ಗಂಡುಗಲಿ ಮದಕರಿ ನಾಯಕ’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ನಂತರದಲ್ಲಿ ಮಿಲನ ಪ್ರಕಾಶ್ ಅವರ ಸಿನಿಮಾ ಮಾಡಲಿರೋ ಡಿ ಬಾಸ್ ಆ ನಂತರವಷ್ಟೇ ವಂಶಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top