ಡಿ ಬಾಸ್ ಗೆ ಬಂತು ಹೊಸ ಬಿರುದು ಕೊಟ್ಟಿದ್ಯಾರು ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ಬಾಕ್ಸಾಫಿಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾನಾ ಬಿರುದುಗಳಿವೆ, ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, ಇನ್ನು ಡಿ ಬಾಸ್ ಮೂವಿ ಬರ್ತಾ ಇದೆ ಅಂದ್ರೆ ಅದು ಅಭಿಮಾನಿಗಳಿಗೆ ಹಬ್ಬವೇ ಸರಿ, ಸದ್ಯ ಡಿ ಬಾಸ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ 25ದಿನಗಳನ್ನು ಪೂರೈಸಿ ರಿಲೀಸ್ ಆದ ಎಲ್ಲಾ ಸೆಂಟರ್ ನಲ್ಲೂ ಅದ್ದೂರಿಯಾಗಿ ಮುನ್ನುಗುತ್ತಿದೆ, ಇದೇ ವೇಳೆ ಡಿ ಬಾಸ್ ಅಭಿಮಾನಿಗಳು ಕುರುಕ್ಷೇತ್ರ ಸಿನಿಮಾ ಹಿಟ್ ಆಗಿದಕ್ಕೆ ಡಿ ಬಾಸ್ ಬಳಿ ಕೇಕ್ ಕಟ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಇನ್ನು ಇದೇ ವೇಳೆ ಕುರುಕ್ಷೇತ್ರ ಕಲೆಕ್ಷನ್ ನಲ್ಲಿ‌ ನೂರು ಕೋಟಿ ಮಾಡಿದ್ದು ಬಾಕ್ಸಾಫಿಸ್ ನಲ್ಲಿ ಹೊಸ ದಾಖಲೆ ಬರೆದಿದೆ. ಈಗ ಇದೇ ಖುಷಿಯಲ್ಲಿ ಅಭಿಮಾನಿಗಳು ಇದ್ದು ತನ್ನ ನೆಚ್ಚಿ‌ನ ನಟನಿಗೆ ಅಭಿನಂದನೆಗಳನ್ನು‌ ಸಲ್ಲಿಸುತ್ತಿದ್ದಾರೆ. ಇದೇ ವೇಳೆ ಈಗ ಚಾಲೆಂಜಿಂಗ್ ಸ್ಟಾರ್, ಬಾಕ್ಸಾಫಿಸ್ ಸುಲ್ತಾನ್, ಡಿಬಾಸ್, ದಾಸ ಹೀಗೆ ನಾನಾ ಬಿರುದುಗಳನ್ನು‌ ಹೊಂದಿರೋ ದರ್ಶನ್ ಗೆ ಹೊಸದೊಂದು ಬಿರುದು ಸಿಕ್ಕಿದೆ ಅದು ‘ಶತಕೋಟಿ ಸರದಾರ’ ಅನ್ನೋ ಬಿರುದು‌ ಸಿಕ್ಕಿದೆ. ಇನ್ನು ಈ ಬಿರುದನ್ನು ನೀಡಿರೋದು ದರ್ಶನ್ ಲೇಡಿ ಫ್ಯಾನ್ಸ್, ಹೌದು ಹೇಳಿಕೇಳಿ ದರ್ಶನ್ ಗೆ ಲೇಡಿ ಫ್ಯಾನ್ಸ್ ಕೂಡ ಹೆಚ್ಚು ಇಂದು ದರ್ಶನ್ ಮನೆಗೆ ಬಂದು ಮಹಿಳಾ ಅಭಿಮಾನಿಗಳು ದರ್ಶನ್ ಅವರನ್ನು ಸನ್ಮಾನಿಸಿ ದರ್ಶನ್ ಗೆ ‘ಶತಕೋಟಿ ಸರದಾರ’ ಅನ್ನೋ ಬಿರುದು ನೀಡಿ ಗೌರವಿಸಿದ್ದಾರೆ. ಈ ಮೂಲಕ ದರ್ಶನ್ ಅಕೌಂಟ್ ಗೆ ಇನ್ನೊಂದು ಹೊಸ ಬಿರುದು ಕೂಡ ಸೇರ್ಪಡೆಯಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top