
ಐಪಿಎಲ್ 2020ಯಲ್ಲಿ ಎಲ್ಲರೂ ಕಾಯುತ್ತಿದ್ದ ಪಂದ್ಯ ಇಂದು ಬಂದಿದೆ. ಇಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಕಾಳಗ ನಡೀತಾ ಇದ್ದು, ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯ್ತ ಇದ್ರು.. ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಮತ್ತು ಕ್ಯಾಪ್ಟನ್ ಕೊಹ್ಲಿ ನಡುವಿನ ಈ ಪಂದ್ಯ ಕುತೂಹಲಕಾರಿಯಾಗಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಫೆವರೆಟ್ ತಂಡ ಯಾವುದು ಅನ್ನೋ ಲೆಕ್ಕಾಚಾರದಲ್ಲಿ ಕ್ರಿಕೆಟ್ ಅಭಿಮಾನಿಗಳು ಇದ್ದಾರೆ. ಇನ್ನು ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರೋ ಆರ್ಸಿಬಿ ಗೆಲುವಿನ ಹುಮ್ಮಸ್ಸಿನಲ್ಲಿದ್ರೆ, ಸೋಲಿನ ಸುಳಿಯಲ್ಲಿರೋ ಚೆನ್ನೈ ತಂಡ ಇಂದಿನ ಪಂದ್ಯದಲ್ಲಿ ಗೆದ್ದು ಬೀಗುವ ತವಕದಲ್ಲಿದೆ.
ದುಬೈನಲ್ಲಿ ನಡೀತಾ ಇರೋ ಇಂದಿನ ಪಂದ್ಯದಲ್ಲಿ ಎರಡು ತಂಡಗಳು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ. ಸಿಎಸ್ಕೆ ಮತ್ತು ಆರ್ಸಿಬಿ ಇದುವರೆಗೂ ಒಟ್ಟು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಅದರಲ್ಲಿ ಆರ್ಸಿಬಿ 8 ಪಂದ್ಯಗಳನ್ನು ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ಪಂದ್ಯಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಪ್ರಸ್ತುತ ಚೆನ್ನೈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರದೆ ಇರುವುದರಿಂದ ಇಂದಿನ ಪಂದ್ಯದಲ್ಲಿ ಆರ್ಸಿಬಿ ಗೆಲ್ಲುವ ಫೇವರಿಟ್ ತಂಡವಾಗಿದೆ.
ಈಗಾಗಲೇ ಈ ಪಂದ್ಯಕ್ಕಾಗಿ ಅಭಿಮಾನಿಗಳು ಸಹ ಕಾತುರದಿಂದ ಕಾಯ್ತಾ ಇದ್ದು, ಆರ್ಸಿಬಿ ಅಭಿಮಾನಿಗಳು ಮ್ಯಾಚ್ ನಮ್ದೆ ಅಂತ ಹೇಳ್ತಾ ಇದ್ರೆ.
ಈ ಬಾರಿಯ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದು ಇಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆಲ್ಲುವ ವಿಶ್ವಾಸವನ್ನು ಚೆನ್ನೈ ಅಭಿಮಾನಿಗಳು ಹೊಂದಿದ್ದಾರೆ.
ಒಟ್ಟಿನಲ್ಲಿ ಇಂದಿನ ಹೈವೋಲ್ಟಾಜ್ ಮ್ಯಾಚ್ಗೆ ದುಬೈ ಸ್ಟೇಡಿಯಂ ಸಜ್ಜಾಗಿದ್ದು, ಇವತ್ತಿನ ಪಂದ್ಯದಲ್ಲಿ ಯಾರು ಗೆಲ್ತಾ ಕಾದು ನೋಡಬೇಕು. ನಿಮ್ಮ ಪ್ರಕಾರ ಇವತ್ತಿನ ಮ್ಯಾಚ್ ಯಾರು ವಿನ್ ಆಗ್ತಾರೆ..ಕಾಮೆಂಟ್ ಮಾಡಿ ತಿಳಿಸಿ.