ರಿಯಲ್ ಸ್ಟಾರ್ ಸಿನಿಮಾಗೆ ಕ್ರೇಜ಼ಿಸ್ಟಾರ್ ಮ್ಯೂಸಿಕ್.!

ರಿಯಲ್ ಸ್ಟಾರ್ ಉಪ್ಪಿ , ಕ್ರೇಜ಼ಿ ಸ್ಟಾರ್ ರವಿಮಾಮ ಈಗಾಗ್ಲೇ ‘ರವಿಚಂದ್ರ’ ಅನ್ನೋ ಸಿನಿಮಾದಲ್ಲಿ ಒಟ್ಟಿಗೆ ನಟಿಸ್ತಾ ಇರೋದು ಎಲ್ಲಾರಿಗೂ ಗೊತ್ತಿರೋ ವಿಷಯ, ಆದ್ರೆ ಈಗ ರವಿಮಾಮ ಉಪ್ಪಿ ಸಿನಿಮಾ ಒಂದಕ್ಕೆ ಮ್ಯೂಸಿಕ್ ಮಾಡ್ತಾ ಇದ್ದಾರೆ. ಹೌದು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಐ ಲವ್ ಯು ‘ ಚಿತ್ರದ ಒಂದು ಹಾಡಿಗೆ ರವಿಚಂದ್ರನ್ ಮ್ಯೂಸಿಕ್ ಮಾಡಲಿದ್ದಾರೆ. ಈಗಾಗ್ಲೇ ಆರ್. ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರಕ್ಕೆ ಡಾ.ಕಿರಣ್ ಮ್ಯೂಸಿಕ್ ನೀಡಿದ್ದಾರೆ. ಆದ್ರೆ ರವಿಚಂದ್ರನ್ ಗೆ ಈ ಸಿನಿಮಾ ಒಂದು ಹಾಡು ತುಂಬಾ‌ ಇಷ್ಟವಾಗಿದೆ ಆ ಹಾಡಿಗೆ ನಾನೇ ಮ್ಯೂಸಿಕ್ ಮಾಡುವುದಾಗಿ ಹೇಳಿದ್ದಾರೆ ಈ ಮೂಲಕ ರಿಯಲ್ ಸ್ಟಾರ್ ಸಿನಿಮಾದಲ್ಲಿ ಕ್ರೇಜ಼ಿಸ್ಟಾರ್ ಮ್ಯೂಸಿಕ್ ಸೌಂಡ್ ಮಾಡಲಿದೆ. ಈಗಾಗ್ಲೇ ದಾವಣಗೆರೆಯಲ್ಲಿ‌ 3 ಹಾಡುಗಳನ್ನ ರಿಲೀಸ್ ಮಾಡಿರೋ‌ ಆರ್.ಚಂದ್ರು‌ ಮತ್ತು ತಂಡ, ಉಳಿದ 3 ಹಾಡುಗಳನ್ನ ಫೆಬ್ರವರಿ 18ರಂದು ಮಂಡ್ಯದಲ್ಲಿ ರಿಲೀಸ್ ಮಾಡಲಿದ್ದಾರೆ ಆರ್. ಚಂದ್ರು ಮತ್ತು ತಂಡ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top