ಕೊರೋನಾ ಆರ್ಥಿಕ ಸಂಕಷ್ಟ ಬಲಿಯಾಯ್ತು ಸ್ಯಾಂಡಲ್‌ವುಡ್‌ ಪ್ರತಿಭೆ

ಕೊರೋನಾದಿಂದಾಗಿ ಜನಸಾಮಾನ್ಯರ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಅನ್ನೋದು ಪ್ರತಿಯೊಬ್ಬರು ಅನುಭವಿಸುವದರಿಂದ ಅದರ ಬಗ್ಗೆ ಹೆಚ್ಚೇನೂ ಹೇಳೋದು ಬೇಡವೆನಿಸುತ್ತದೆ, ಕೊರನಾ ಎಲ್ಲಾ ಕ್ಷೇತ್ರದಲ್ಲೂ ಎಫೆಕ್ಟ್ ‌ಮಾಡಿದ್ದು, ಸಿನಿಮಾರಂಗದಲ್ಲೂ ಹೆಚ್ಚಾಗಿ ಎಫೆಕ್ಟ್‌ ಮಾಡಿದೆ, ಈಗಾಗಲೇ ಚಿತ್ರರಂಗದ ಚಿತ್ರೀಕರಣ ಎಲ್ಲಾ ಸ್ಥಗಿತಗೊಂಡು ಎರಡು ತಿಂಗಳಾಗಿದ್ದು, ಸದ್ಯ ಚಿತ್ರೀಕರಣಕ್ಕೆ ಅನುಮತಿ ನೀಡಿದ್ರು, ಅಷ್ಟಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ನಿರ್ಮಾಪಕರು ಮನಸ್ಸು ಮಾಡುತ್ತಿಲ್ಲ, ಇನ್ನು ಚಿತ್ರೀಕರಣವಿಲ್ಲ ಅದೆಷ್ಟೋ ಕಲಾವಿದರು ಸಂಕಷ್ಟವನ್ನು ಎದುರಿಸುತ್ತಿದ್ದು, ಅನೇಕರು ಜೀವನೋಪಾಯಕ್ಕಾಗಿ ಬೇರೆ ಬೇರೆ ದಾರಿಯನ್ನು ಹುಡುಕಿಕೊಳ್ಳುತ್ತಿದ್ದರೆ, ಇನ್ನು ಕೆಲವ್ರು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಬಾಲಿವುಡ್ ‌ಮತ್ತು ಬೇರೆ ಬೇರೆ ಭಾಷೆಗಳಲ್ಲಿ ಸಂಕಷ್ಟಕ್ಕೆ ಸಿಲುಗಿದ ಕೆಲ ಚಿತ್ರರಂಗದ ಕೆಲಸಗಾರರು ಜೀವ ಕಳೆದುಕೊಂಡಿದ್ದನ್ನು ನೋಡಿದ್ದೇವೆ, ಆದ್ರೆ ಸ್ಯಾಂಡಲ್‌ವುಡ್‌ನ ಉದಯೋನ್ಮೂಕ ಪ್ರತಿಭೆ, ಕಲಾ ನಿರ್ದೇಶಕರೊಬ್ಬರು ಕೊರೋನಾ ಎಫ್ಟೆಕ್ಟ್‌ನಿಂದಾಗಿ ಸಂಕಷ್ಟಕ್ಕೆ ಸಿಲುಗಿ ಜೀವವನ್ನು ಕಳೆದುಕೊಂಡಿದ್ದಾರೆ.

ಹೌದು ಸ್ಯಾಂಡಲ್‌ವುಡ್‌ನಲ್ಲಿ ಬೆಲ್‌ಬಾಟಂ ಮತ್ತು ಅವನೇ ಶ್ರೀಮನ್ನಾರಾಯಣ ಸಿನಿಮಾಗಳಿಗೆ ಕಲಾ ನಿರ್ದೇಶಕನಾಗಿ ಕೆಲಸ ಮಾಡಿದ್ದ ಲೋಕೇಶ್‌ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಇದ್ದ ಲೋಕೇಶ್‌ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು, ನಾಗಮಂಗಲದವರಾಗಿದ್ದ ಲೋಕೇಶ್‌ ಕೆಲಸಕ್ಕಾಗಿ ಬೆಂಗಳೂರಿಗೆ ಬಂದವರು ಚಿತ್ರರಂಗದಲ್ಲಿ ಕೆಲಸಗಿಟ್ಟಿಸಿಕೊಂಡು ತಮ್ಮ ಪ್ರತಿಭೆಯನ್ನು ಸಾಭೀತುಪಡಿಸಿದ್ರು, ಇತ್ತಿಚೇಗೆ ತಮ್ಮ ಪೋಷಕರನ್ನು ಕಳೆದುಕೊಂಡಿದ್ದ ಲೋಕೇಶ್‌ ತಮ್ಮ ಅಣ್ಣ ಮನೆಯಲ್ಲಿ ವಾಸವಾಗಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೋಡಿ ಲೋಕೇಶ್‌ ನೇಣಿಗೆ ಶರಣಾಗಿದ್ದಾರೆ.

ಇನ್ನು ಲೋಕೇಶ್‌ ಕೈಯಲ್ಲಿ ಸಾಲು ಸಾಲು ಕೆಲಸಗಳಿದ್ದರು, ಲಾಕ್‌ಡೌನ್‌ ಆಗಿದ್ದರಿಂದಾಗಿ ಆ ಕೆಲಸಗಳು ನಿಂತುಹೋಗಿದ್ದವು, ಬೆಲ್‌ಬಾಟಂ 2 ಹಾಗೂ ಬನಾರಸ್‌ ಸಿನಿಮಾಗಳಲಿ ಕೆಸಲ ಮಾಡಬೇಕಿತ್ತು, ಆದ್ರೆ ಲಾಕ್‌ಡೌನ್‌ನಿಂದಾಗಿ ಕೆಲಸ ಶುರುವಾಗಿರಲಿಲ್ಲ, ಇದರಿಂದ ಖಿನ್ನತೆಗೆ ಒಳಾಗಿದ್ದ ,ಲೋಕೇಶ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ಲೋಕೇಶ್‌ ಕಷ್ಟದಲ್ಲಿದ್ದವರಿಗೆ ಸಹಾಯವನ್ನು ಮಾಡುತ್ತಿದ್ದ, ಯಾರೇ ಏನೇ ಕೇಳಿದ್ರು ಇಲ್ಲ ಅನ್ನುತ್ತಿರಲಿಲ್ಲ, ಕೊರೋನಾ ಎಫೆಕ್ಟ್‌ನಿಂದಾಗಿ ಆರ್ಥಿಕವಾಗಿ ಸಂಕಷ್ಟ ಎದುರಿಸಿದ್ದಾನೆ. ಕೊರೋನಾ ಆತನನ್ನು ಬಲಿಪಡೆದುಕೊಂಡಿತು ಎಂದು ನಿರ್ಮಾಪಕ ಸಂತೋಷ್‌ ಸಂತಾಪ ಸೂಚಿಸಿದ್ದಾರೆ.

ಇನ್ನು ನಾಳೆ ನಾಗಮಂಗಲದಲ್ಲಿ ಲೋಕೇಶ್‌ ಅಂತ್ಯ ಕ್ರಿಯೆ ನಡೆಯಲಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಲೋಕೇಶ್‌ ಮರಣೋತ್ತರ ಪರೀಕ್ಷೆ ನಡೆದಿದೆ, ಇನ್ನು ರಾಮಯ್ಯ ಆಸ್ಪತ್ರೆಗೆ ನಿರ್ದೇಶಕ ಜಯತೀರ್ಥ ಸೇರಿದಂತೆ ಲೋಕೇಶ್‌ ಆಪ್ತರು ಅಂತಮ ದರ್ಶನ ಪಡೆದ್ರು.

ಒಟ್ಟಿನಲ್ಲಿ ಕೊರೊನಾ ಹಾವಳಿಯಿಂದಾಗಿ ಎಲ್ಲಾ ಕಡೆ ಸಮಸ್ಯೆ ಎದುರಿಸುತ್ತಿದ್ದು, ಇದರಿಂದಾಗಿ ಜನರು ಸಮಸ್ಯೆ ಮೇಲೆ ಸಮಸ್ಯೆಯನ್ನು ಎದುರಿಸುವಂತಾಗಿದೆ, ಒಂದು ಕಡೆ ಜೀವ ಉಳಿಸಿಕೊಳ್ಳುವುದೋ ಅನ್ನೋ ಸಮಸ್ಯೆಯಾದ್ರೆ ಇನ್ನೊಂದು ಕಡೆ ಜೀವನ ನಡೆಸೋದು ಹೇಗೆ ಅನ್ನೋ ಸಮಸ್ಯೆ ಇದ್ದು, ಎರಡನ್ನು ಮೆಟ್ಟಿ ನಿಂತು ಸಾಗಬೇಕಾಗಿದೆ, ಇನ್ನು ಅನೇಕರು ಖಿನ್ನತೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿರು ವೇಳೆ ಅಂತಹವರಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಬೇಕಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top