ಪೈಲ್ವಾನ್ ಪೈರಸಿ ಮಾಡಿದವನ ಅರೆಸ್ಟ್.! ಕಿಚ್ಚನನ್ನು ಭೇಟಿಯಾದ ಪೊಲೀಸ್ ಕಮಿಷನರ್.!

kiccha with commisioner

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಪೈರಸಿ ವಿಚಾರವಾಗಿ ಇಂದು ರಾಕೇಶ್ ಅಲಿಯಾಸ್ ವಿರಾಟ್‍ನನ್ನು ನೆಲಮಂಗಲದ ಬಳಿ ಬಂಧಿಸಲಾಗಿದ್ದು, ಬಂಧನವಾದ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ.

Read : BIG NEWS : ಪೈಲ್ವಾನ್ ಸಿನಿಮಾ ಪೈರಸಿ ಮಾಡಿದ್ದ ವ್ಯಕ್ತಿಯ ಬಂಧನ.!

ಭಾಸ್ಕರ್ ರಾವ್ ಮತ್ತು ಸುದೀಪ್ ತುಂಬಾ ಆಪ್ತರಾಗಿದ್ದು, ಪೈಲ್ವಾನ್ ಸಿನಿಮಾದ ಪೈರಸಿ ವಿಷಯದ ಕುರಿತು ಮಾತುಕತೆ ನಡೆಸಿದ್ದಾರೆ, ಇನ್ನು ಕಿಚ್ಚ ಸುದೀಪ್ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರನ್ನು ಭೇಟಿಯಾದ ಖುಷಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಿಮ್ಮ ಜೊತೆಗಿನ ಭೇಟಿ ತುಂಬಾನೇ ಖುಷಿ ಕೊಟ್ಟಿದೆ ಅಂತಾ ಸಂತೋಷ ವ್ಯಕ್ತಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top