ಜೀಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್ 1ರ ವಿನ್ನರ್ ಆಂದ್ರೆ ಅದು ಶಿವರಾಜ್ ಕೆಆರ್ ಪೇಟೆ, ಸೀಸನ್ 1ರಲ್ಲಿ ಟಿಆರ್ಪಿ ಮೆಟಿರಿಯಲ್ ಆಗಿ ಗುರುತಿಸಿಕೊಂಡ ಶಿವರಾಜ್, ಸೀಸನ್ 1 ವಿನ್ನರ್ ಆಗೋದರ ಒಳಗೆ ಸುಮಾರು ಸಿನಿಮಾಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದವು, ದರ್ಶನ್ ಜೊತೆ ಸೇರಿ ಅನೇಕ ಸ್ಟಾರ್ ನಟರ ಜೊತೆ ನಟಿಸಿದ ಶಿವರಾಜ್, ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ ಸಿನಿಮಾ ಅಂದ್ರೆ ಅದು ನಾನು ಮತ್ತು ಗುಂಡ, ನಾಯಿ ಮತ್ತು ಮನುಷ್ಯನ ಭಾಂದವ್ಯದ ಕಥೆ ಸಾರುವ ಈ ಸಿನಿಮಾ ವಿಮರ್ಶಕರಿಂದ ಒಂದೊಳ್ಳೇ ವಿಮರ್ಶೆಯನ್ನು ಪಡೆದುಕೊಂಡಿತ್ತು, ಇನ್ನು ಶಿವರಾಜ್ಗೆ ತನ್ನದೇ ಆದ ಅಭಿಮಾನಿ ಬಳಗವಿದ್ದು, ಕಾಮಿಡಿ ಕಿಲಾಡಿಯಿಂದ ಶುರುವಾದ ಅಭಿಮಾನಿ ಬಳಗ ಸಿನಿಮಾದ ಮೂಲಕನೂ ಮುಂದುವರೆದಿದೆ, ಇದಕ್ಕೆ ಸಾಕ್ಷಿ ಎಂಬಂತೆ ಶಿವರಾಜ್ ಕ್ರೇಜ್ಗೆ ಈಗ ನಾನು ಮತ್ತು ಗುಂಡ ಸಿನಿಮಾ ಸಾಕ್ಷಿಯಾಗಿದೆ.

ಹೌದು ಕಳೆದ ವಾರ ಜೀ ಕನ್ನಡದಲ್ಲಿ ನಾನು ಮತ್ತು ಗುಂಡ ಸಿನಿಮಾ ಪ್ರಸಾರವಾಗಿದ್ದು, ಆ ವಾರದ ರೇಟಿಂಗ್ನಲ್ಲಿ ನಾನು ಮತ್ತು ಗುಂಡ ನಂಬರ್ ರೇಟಿಂಗ್ ಪಡೆದುಕೊಳ್ಳುವ ಮೂಲಕ ದಾಖಲೆ ಬರೆದಿದೆ, ಈ ಮೂಲಕ ಕಾಮಿಡಿ ಕಿಲಾಡಿಯಲ್ಲಿ ಟಿಆರ್ಪಿ ಸೆಂಟರ್ ಆಗಿದ್ದ ಶಿವರಾಜ್ ಕೆ ಆರ್ ಪೇಟೆ, ಇದೀಗಾ ಸಿನಿಮಾ ಮೂಲಕಾನೂ ಟಿಆರ್ಪಿ ಸೆಂಟರ್ ಆಗಿದ್ದಾರೆ. ಇನ್ನು ಈಗಾಗಲೇ ಪ್ರಸಾರವಾದ ನಾನು ಮತ್ತು ಗುಂಡ ಸಿನಿಮಾ ಜೀ ಕನ್ನಡದ ನಂಬರ್ ಒನ್ ಪ್ರೋಗ್ರಾಂಗಳನ್ನು ಹಿಂದಿಕ್ಕಿ ರೇಟಿಂಗ್ನಲ್ಲಿ ನಂ1 ಪಟ್ಟ ಅಲಂಕರಿಸಿದೆ. ಕಳೆದ ವಾರ ಪ್ರಸಾರವಾದ ಈ ಚಿತ್ರ 7.2 ರೇಟಿಂಗ್ ಪಡೆಯೋ ಮೂಲಕ ದಾಖಲೆ ಬರೆದಿದೆ, ಇನ್ನು ಒಬ್ಬ ಸ್ಟಾರ್ ನಟನ ಸಿನಿಮಾ ಟಿವಿಯಲ್ಲಿ ಪ್ರಸಾರವಾದರೆ ಸಿಗೋ ರೇಟಿಂಗ್ ಶಿವರಾಜ್ ಕೆಆರ್ ಪೇಟೆ ಅಭಿನಯದ ನಾನು ಮತ್ತು ಗುಂಡ ಸಿನಿಮಾಗೆ ದೊರಕ್ಕಿದ್ದು, ಈ ಮೂಲಕ ದಾಖಲೆ ಬರೆದಿದ್ದಾರೆ.
ಇನ್ನು ಈ ವಿಚಾರ ಹೊರ ಬರುತ್ತಿದ್ದಂತೆ ಈಗಾಗಲೇ ಶಿವರಾಜ್ ಕೆಆರ್ ಪೇಟೆಗೆ ಒಪ್ಪುವಂತಹ ಕಥೆಯನ್ನು ರೆಡಿಮಾಡಲು ನಿರ್ದೇಶಕರು ತಯಾರಾಗುತ್ತಿದ್ದು, ಇತ್ತ ಶಿವರಾಜ್ ಕೆಆರ್ ಪೇಟೆ ಮೇಲೆ ಬಂಡವಾಳ ಹಾಕಿ ಒಂದಿಷ್ಟು ಲಾಭವನ್ನು ಪಡೆಯೋ ಪ್ಲಾನ್ನಲ್ಲಿ ಇದ್ದಾರೆ ನಿರ್ಮಾಪಕರು. ಒಟ್ಟಿನಲ್ಲಿ ಕಾಮಿಡಿ ಕಿಲಾಡಿ ಮೂಲಕ ಮನೆಮಾತಾಗಿದ್ದ ಶಿವರಾಜ್ ಕೆಆರ್ ಪೇಟೆ ಸದ್ಯ ಟಿವಿ ರೇಟಿಂಗ್ನಲ್ಲೂ ನಾನು ಕಿಲಾಡಿ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಸಿಂಪಲ್ ಆಗಿ ಬರ್ತ್ಡೇ ಸೆಲೆಬ್ರೆಟ್ ಮಾಡಿದ ಗಣೇಶ್..!
ಸ್ಯಾಂಡಲ್ವುಡ್ನ ಗೋಲ್ಡನ್ ಸ್ಟಾರ್ ಗಣೇಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಈಗಾಗಲೇ ಕೊರೋನಾ ಎಫೆಕ್ಟ್ನಿಂದಾಗಿ, ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದ್ದ ಗಣೇಶ್, ತಮ್ಮ ಅಭಿಮಾನಿಗಳ ಬಳಿ ಯಾರು ಸಹ ಮನೆಯ ಬಳಿ ಅಥವಾ ಅನಾವಶ್ಯಕವಾಗಿ ಖರ್ಚುಮಾಡಿ ನನ್ನ ಹುಟ್ಟುಹಬ್ಬ ಆಚರಿಸಬೇಡಿ ಎಂದು ಹೇಳಿದ್ರು, ಹೀಗಾಗಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಗೋಲ್ಡನ್ ಸ್ಟಾರ್ಗೆ ನಿರ್ದೇಶಕ ಪ್ರಶಾಂತ್ ರಾಜ್ ಡಿಫರೆಂಟ್ ಆಗಿ ಗಣೇಶ್ ಬರ್ತ್ಡೇಯನ್ನ ಆಚರಿಸಿದ್ದಾರೆ.

ಹೌದು ಸಮಾಜಿಕ ಅಂತ ಕಾಯ್ದುಕೊಂಡು ಗಣೇಶ್ ಬರ್ತ್ಡೇ ಆಚರಿಸಿರೋ ಪ್ರಶಾಂತ್ ರಾಜ್, ಗಣೇಶ್ಗಾಗಿ ಡಿಫರೆಂಟ್ ಕೇಕ್ ರೆಡಿಮಾಡಿದ್ದು ಆ ಮೂಲಕ ಸಪ್ರ್ರೈಸ್ ನೀಡಿದ್ದಾರೆ. ಬರ್ತ್ ಡೇ ಕೇಕ್ ಡಿಫರೆಂಟ್ ಆಗಿ ಇದ್ದು, ಕೇಕ್ನಲ್ಲಿ ಗಣೇಶ್ ಅವ್ರು ಕನ್ನಡ ಹಾಕಿ ಸ್ಟೈಲ್ ಆಗಿ ನಿಂತಿರೋ ಪ್ರತಿಮೆಯನ್ನು ಮಾಡಲಾಗಿದೆ, ಇನ್ನು ಅದರಲ್ಲಿ ನಿಮ್ಮ ಸಿನಿಮಾ ಅನ್ನೋ ಟ್ರೈಟಲ್ ಇದ್ದು, ಇದು ಸಿನಿಮಾದ ಟೈಟಲ್ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಶುರುವಾಗಿದೆ, ಇಂದು ಪ್ರಶಾಂತ್ ರಾಜ್ ಮತ್ತು ಗಣೇಶ್ ಕಾಂಬೀನೇಷನ್ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದ್ದು, ಅದಕ್ಕಾಗಿ ಈ ಡಿಫರೆಂಟ್ ಕೇಕ್ ಮಾಡಿಸಲಾಗಿದೆ.
ಇನ್ನು ಕೇಕ್ನಲ್ಲಿ ಗಣೇಶ್ ಜೊತೆಯಲ್ಲಿ ಡೈರೆಕ್ಟರ್ ಚೇರ್, ಕ್ಯಾಮರಾ,ಲೈಟ್ಸ್,ಕ್ಲಾಪ್ ಬೋರ್ಡ್ ಮತ್ತು ಸಿನಿಮಾ ಸಂಬಂಧಿಸಿದ ಎಲ್ಲವೂ ಈ ಕೇಕ್ನಲ್ಲಿದ್ದು ಒಂದು ಡಿಫರೆಂಟ್ ಆಗಿ ಬರ್ತ್ಡೇ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.