ಕೊರೋನಾ ಆಯ್ತು ಈಗ ಚೀನಾದಿಂದ ಸೃಷ್ಟಿಯಾಗ್ತಿದೆ ಮತ್ತೊಂದು ವೈರಸ್..!

ಚೀನಾದ ಉಹಾನ್ ಪ್ರಾಂತ್ಯದಿಂದ ಸೃಷ್ಟಿಯಾದ ಕೊರೋನಾ ವೈರಸ್, ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಇಡೀ ಪ್ರಪಂಚವನ್ನೇ ಲಾಕ್‍ಡೌನ್ ಮಾಡಿಹಾಕಿದೆ, ಈಗ ಹಬ್ಬಿರೋ ಈ ಮಹಾಮಾರಿ ವೈರಸ್‍ಗೆ ಯಾವುದೇ ಲಸಿಕೆ ಸಿಗದೇ ಅದೆಷ್ಟೋ ಜನ ಪ್ರಾಣವನ್ನು ಬಿಟ್ಟಿದ್ದಾರೆ. ಇನ್ನು ಯಾವಾಗ ಎಲ್ಲಿ ನಮಗೂ ಕೊರೋನಾ ವೈರಸ್ ಆ್ಯಟಕ್ ಆಗಿ ಬಿಡುತ್ತದೆ ಅನ್ನೋ ಭಯದಲ್ಲೇ ಜನ ಸಾಮಾನ್ಯರು ಜೀವನ ನಡೆಸುತ್ತಿದ್ದಾರೆ. ಈಗಾಗಲೇ ಚೀನಾ ಮೂಲಕ ಹಬ್ಬಿರೋ ಕೊರೋನಾ ವೈರಸ್‍ಗೆ ಈಗಾಗಲೇ ಇಡೀ ವಿಶ್ವವೇ ತತ್ತರಿಸಿ ಹೋಗಿರುವಾಗ ಸಂಶೋದಕರಿಂದ ಇನ್ನೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಹೌದು ಕೊರೋನಾ ವೈರಸ್ ಮಧ್ಯೆ ಈಗ ಚೀನಾದಲ್ಲಿ ಇನ್ನೊಂದು ವೈರಸ್ ಸೃಷ್ಟಿಯಾಗಿದೆ ಅನ್ನೋ ಮಾಹಿತಿ ಈಗ ಹೊರಬಿದ್ದಿದೆ,
ಸಂಶೋಧಕರು ಹೇಳಿರುವ ಪ್ರಕಾರ ಹಂದಿಗಳಲ್ಲಿ ಜ್ವರದ ವೈರಸ್ ಇರುವುದು ಪತ್ತೆಯಾಗಿದ್ದು, ಈ ಜ್ವರದ ವೈರಸ್‍ಗಳು ಹಂದಿಗಳಿಂದ ಮನುಷ್ಯರಿಗೆ ಹರಡೋ ಸಾಧ್ಯತೆ ಇದ್ದು, ಮನುಷ್ಯರಿಂದ ಮನುಷ್ಯರಿಗೆ ಹರಡುವ ಎಲ್ಲಾ ಲಕ್ಷಣಗಳು ಇದೆ ಅಂತ ಸಂಶೋಧಕರು ಹೇಳಿದ್ದಾರೆ.


ಇನ್ನು ಈ ಹಂದಿಯಿಂದ ಹರಡಲಿರೋ ಈ ಜ್ವರಕ್ಕೆ ಜಿ4ಇಎ ಅನ್ನೋ ಹೆಸರನ್ನು ಇಡಲಾಗಿದ್ದು, ಈ ಜ್ವರವನ್ನು ನಿಯಂತ್ರಿಸದೇ ಇದ್ದಲ್ಲಿ, ಕೊರೋನಾ ವೈರಸ್ ರೀತಿಯಲ್ಲಿ ಇದು ಸಹ ಮಹಾಮಾರಿಯಾಗುವುದರಲ್ಲಿ ಅನುಮಾನವಿಲ್ಲ ಎಂದು `ಚೈನೀಸ್ ಅಕಾಡೆಮೆ ಆಫ್ ಸೈನ್ಸ್’ ಸಂಶೋಧಕರು ಎಚ್ಚರಿಕೆಯನ್ನು ನೀಡಿದ್ದಾರೆ.


ಈಗಾಗಲೇ ಸುಮಾರು 10 ವರ್ಷದಿಂದ ಅಂದರೆ 2011 ರಿಂದ 2018ರ ವರೆಗೆ ಸುಮಾರು 10 ಪ್ರಾಂತ್ಯಗಳಲ್ಲಿ 179 ವೈರಸ್‍ಗಳನ್ನು ಸಂಶೋಧಕರಾದ ಜಾರ್ಜ್ ಗಾವೋ ಮತ್ತು ಜಿನ್ಹುವಾ ಲಿಯು ಅನ್ನೋ ಸಂಶೋಧಕರು ವೈರಸ್‍ಗಳನ್ನು ಪತ್ತೆ ಹಚ್ಚಿದ್ದು, ಕೆಲವ ವರ್ಷಗಳ ಹಿಂದೆ ಜಿ4ಇಎ ವೈರಸ್ 46 ವರ್ಷದ ವ್ಯಕ್ತಿಗೆ ಮತ್ತು 9 ವರ್ಷದ ಬಾಲಕನಿಗೆ ಈ ವೈರಸ್ ಕಂಡು ಬಂದಿದ್ದು, ಇವರು ಹಂದಿ ಸಾಕಾಣಿಕೆ ಮಾಡುವ ಜಾಗಗಳಲ್ಲಿ ವಾಸವಾಗಿದ್ದರಿಂದ ಹಂದಿಯಿಂದ ಜ್ವರದ ವೈರಸ್ ಇವರಿಗೂ ಹಬ್ಬಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ರೀತಿಯಾಗಿ ಸೃಷ್ಟಿಯಾಗಿ ಹರಡುವ ವೈರಸ್‍ಗೆ ಸದ್ಯದ ಮಟ್ಟದಲ್ಲಿ ಯಾವುದೇ ಔಷಧಿಗಳು ಇಲ್ಲ ಎಂದು ಸಹ ಸಂಶೋಧಕರು ಹೇಳಿದ್ದಾರೆ.


ಈ ವೈರಸ್‍ನಿಂದ ಎಲ್ಲರಿಗೂ ಬರುವ ಹಾಗೇ ಜ್ವರ,ಕೆಮ್ಮು,ಶೀತ,ಕಫ ರೀತಿಯ ಸಾಮಾನ್ಯ ತೊಂದರೆಗಳು ಕಾಣಿಸಿಕೊಳ್ಳುತ್ತದೆ, ಇನ್ನು 2016ರಲ್ಲಿ 15ಕ್ಕೂ ಹೆಚ್ಚು ಹಂದಿ ಸಾಕಾಣಿಕೆ ಕೇಂದ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಹಂದಿ ಮೂಗಿನಿಂದ ದ್ರವ ಸಂಗ್ರಹಿಸಿ ಈ ಸಂಶೋದನೆಯನ್ನು ಮಾಡಲಾಗಿದ್ದು. ಈ ವೈರಸ್‍ನಿಂದ ಕೇವಲ ಶೇ 10ರಷ್ಟು ಜನ ಮಾತ್ರ ಹೋರಾಡಲು ಸಾಧ್ಯವಿದೆಯಂತೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಈ ವೈರಸ್‍ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಸಂಶೋಧಕರು ಅಧ್ಯಯನದ ಮೂಲಕ ತಿಳಿಸಿದ್ದಾರೆ.

ಇನ್ನು ಚೀನಾ ಹಂದಿ ಸಾಕಾಣಿಕೆಯಲ್ಲಿ ವಿಶ್ವದ ಅರ್ಧಕ್ಕೂ ಹೆಚ್ಚು ಸಾಕಾಣಿಕೆ ಕೇಂದ್ರಗಳನ್ನು ಹೊಂದಿದ್ದು, ಹಂದಿಗಳಿಗೆ ನೀಡುವ ಆಹಾರದಲ್ಲಿ ಬದಲಾವಣೆ ಮತ್ತು ಸ್ಟಿರಾಯ್ಡ್‍ಗಳನ್ನು ನೀಡುವ ಸಲುವಾಗಿ ದೇಹದಲ್ಲಿ ಬದಲಾವಣೆಯಾಗಿ ಈ ರೀತಿಯ ವೈರಸ್‍ಗಳು ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಈ ವೈರಸ್‍ನ ಬಗ್ಗೆ ಹೆಚ್ಚು ನಿಗಾ ಇಡದೇ , ಹಂದಿ ಸಾಕಾಣಿಕಾ ಪ್ರದೇಶದಲ್ಲಿ ಸ್ವಚ್ಚತೆಯನ್ನು ಕಾಪಾಡದೆ, ಅಲ್ಲಿ ವಾಸಿಸುವ ಜನರ ಬಗ್ಗೆ ಹೆಚ್ಚಿನ ನಿಗಾ ವಹಿಸಿದ ಇದ್ದರೆ ಖಂಡಿತ ಇನ್ನೊಂದು ವೈರಸ್‍ಗೆ ನಾವೆಲ್ಲ ಸಾಕ್ಷಿಯಾಗಲಿದ್ದೇವೆ ಎಂದು ಹೇಳಿದ್ದು, ಈ ವಿಷಯದ ಬಗ್ಗೆ `ಅಮೆರಿಕಾದ ನ್ಯಾಷನಲ್ ಅಕಾಡೆಮಿ ಆಪ್ ಸೈನ್ಸ್ ಜರ್ನಲ್‍ನಲ್ಲಿ’ ಉಲ್ಲೇಖಮಾಡಿದ್ದು,ಈ ಬಗ್ಗೆ ಜರ್ನಲ್‍ನಲ್ಲಿ ಚೀನೀ ಸಂಶೋದಕರು ಉಲ್ಲೇಖ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top