ಹೆಣ್ಣು ಮಗು ಆದ ಖುಷಿಯಲ್ಲಿ ಫ್ರೀ ಕಟ್ಟಿಂಗ್ ಮಾಡಿದ ಅಪ್ಪ

ತನಗೆ ಹೆಣ್ಣುಮಗು ಆಯ್ತು ಅನ್ನೋ ಖುಷಿಗೆ ಅಪ್ಪ ತನ್ನ ಸಲೂನ್ ನಲ್ಲಿ ಫ್ರೀ ಕಟ್ಟಿಂಗ್ ಮಾಡೋದಾಗಿ ಹೇಳಿ.ಒಂದು ದಿನದ ಫ್ರೀ ಕಟ್ಟಿಂಗ್ ಮಾಡುವ ಮೂಲಕ 70-80 ಜನರಿಗೆ ಕಟ್ಟಿಂಗ್ ಮಾಡಿ ,ಹೆಣ್ಣು ಮಗು ಜನಿಸಿದ್ರೆ ಮೂಗು ಮುರಿಯುತ್ತಿದ್ದ ಜನರಿಗೆ ಮಾದರಿಯಾಗಿದ್ದಾರೆ. ಹೆಣ್ಣು ಮಕ್ಕಳು ಜನಿದ್ರೆ ಸಾಕು ಮೂಗು ಮುರಿಯೋರೆ ಹೆಚ್ಚು ಹೀಗಿರುವಾಗ ಮಧ್ಯಪ್ರದೇಸ ಗ್ವಾಲಿಯರ್ ನಲ್ಲಿ ಸಲ್ಮಾನ್ ಎಂಬ ವ್ಯಕ್ತಿ ತನಗೆ ಹೆಣ್ಣು ಮಗು ಜನಿಸಿದ ಖುಷಿಯಲ್ಲಿ ತನ್ನ ಸಲೂನ್ ನಲ್ಲಿ ಒಂದು ದಿನ ಫ್ರೀಯಾಗಿ ಕಟ್ಟಿಂಗ್ ಮಾಡಿದ್ದಾರೆ. ಡಿಸೆಂಬರ್ 26ರಂದು ಮಗು‌ಜನಿಸಿದ್ದು, ಜನವರಿ 4ರಂದು ಫ್ರೀಯಾಗಿ‌ ಕಟ್ಟಿಂಗ್ ಮಾಡುವುದಾಗಿ ಹೇಳಿ ಸಲೂನ್ ಶಾಪ್ ಮುಂದೆ ಬ್ಯಾನರ್ ಕೂಡ ಹಾಕಿದ್ರು ಅದರಂತೆ ಅಂದು 80ಜನರಿಗೆ ಫ್ರೀ ಕಟ್ಟಿಂಗ್ ಮಾಡಿದ್ದಾರೆ.

ಆ ಮೂಲಕ ಸಮಾಜಕ್ಕೆ ಒಂದೊಳ್ಳೇ ಸಂದೇಶ ನೀಡಿದ್ದು, ಆ ಮೂಲಕ‌ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top