ಈ ಕೋಳಿ ಮೊಟ್ಟೆ ಇಡೋದು ಯಾವ ಜಾಗದಿಂದ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ರೀರಾ..!

chicken-egg-frontside

ಪ್ರಪಂಚದಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೀತಾಲೆ ಇರುತ್ತವೆ, ಮನುಷ್ಯನಿಗೆ ಹಿಂದಿನ ಜನ್ಮದ ರಹಸ್ಯ ನೆನಪಿಗೆ ಬರೋದು, ನಾಯಿ ಬೆಕ್ಕಿನ ಮರಿ ಹಾಲು ಕುಡಿಸುವುದು, ಇನ್ನು ಚಿತ್ರ ವಿಚಿತ್ರ ಘಟನೆಗಳು ನಮ್ಮ ನಡುವೆಯೇ ನಡೆಯುತ್ತಲೆ ಇರುತ್ತವೆ, ಈಗ ಅಂತದ್ದೆ ಒಂದು ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ, ಕೋಳಿಯೊಂದು ಮೊಟ್ಟೆಯನ್ನು ತನ್ನ ಕುತ್ತಿಗೆ ಭಾಗದಿಂದ ಇಡುವ ಮೂಲಕ ಅಚ್ಚರಿ ಮೂಡಿಸಿದೆ.

ನಾಗಮಂಗಲದ ಹೇಮಾವತಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಕಾಳಜ್ಞಾನಿ ಪುಸ್ತಕ ಬರೆಯುವ ಬರಹಗಾರ ಶಿವರಾಮೇಗೌಡರ ಮನೆಯಲ್ಲಿ ಈ ವಿಶೇಷ ಸನ್ನಿವೇಶ ನಡೆದಿದೆ, ಎರಡು ವರ್ಷಗಳಿಂದ ಶಿವರಾಮೇಗೌಡ ಅವರ ಮನೆಯಲ್ಲಿ ಕೋಳಿ ಸಾಕಿಕೊಂಡಿದ್ದು ಹಲವು ಬಾರಿ ಕೋಳಿ ಮೊಟ್ಟೆ ಇಟ್ಟು ಮರಿಗಳನ್ನು ಮಾಡಿತ್ತು, ಆದರೆ ಇತ್ತಿಚೆಗೆ ಕುತ್ತಿಗೆ ಭಾಗದಿಂದ ಮೊಟ್ಟೆ ಇಡುವುದನ್ನು ನೋಡಿದ ಮನೆಯವರಿಗೆ ಆಶ್ಚರ್ಯ ಕಾದಿತ್ತು, ನಂತರ ಕುತ್ತಿಗೆ ಭಾಗದಿಂದ ಮೊಟ್ಟೆ ಇಡುವುದನ್ನು ವಿಡಿಯೋ ಮಾಡಿದ್ದಾರೆ. ಸುಮಾರು ವರ್ಷಗಳಿಂದ ಜಗತ್ತಿಗೆ ಹಲವು ಸಂದೇಶಗಳನ್ನು ನೀಡುವ 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಶಿವರಾಮೇಗೌಡರ ಮನೆಯಲ್ಲಿ ವಿಸ್ಮಯಕಾರಿ ಘಟನೆ ನಡೆದಿರೋದು ಗ್ರಾಮಸ್ಥರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top