ಮದುವೆಗೂ ಮುಂಚೆ ಇಲ್ಲಿ ಹುಡುಗಿಯರು ಆ ಕೆಲಸ ಮಾಡಲೇ ಬೇಕು..!

ಮದುವೆ.. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಂದು ಪ್ರಮುಖ ಘಟ್ಟ, ಮದುವೆಗೂ ಮುಂಚೆ ಗಂಡು ಹೆಣ್ಣು ತಮ್ಮ ಜೀವನದಲ್ಲಿ ತನ್ನ ಬಾಳಸಂಗಾತಿಯಾಗಿ ಬರುವವರು ಹಾಗಿರಬೇಕು, ಹೀರಿಗಬೇಕು ಅಂತೆಲ್ಲಾ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಹೆಣ್ಣಿನ ವಿಚಾರದಲ್ಲಿ ಆಕೆ ವರ್ಜಿನ್‌ ಆಗಿರಬೇಕು ಅಂತ ಎಲ್ಲಾರೂ ಸಹ ಬಯಸುತ್ತಾರೆ. ಇನ್ನು ಮದುವೆ ವಿಚಾರದಲ್ಲಿ ನಾನಾ ರೀತಿಯ ಸಂಪ್ರದಾಯಗಳು ಸಹ ಪ್ರಪಂಚದಲ್ಲಿ ರೂಢಿಯಲ್ಲಿದೆ. ಆದ್ರೆ ಇಲ್ಲೊಂದು ಪ್ರದೇಶದಲ್ಲಿ ಇರುವ ಒಂದು ಸಂಪ್ರದಾಯವನ್ನು ಕೇಳಿದ್ರೆ ನೀವೂ ಬೆಚ್ಚಿ ಬೀಳ್ತೀರಾ. ಈ ಪ್ರದೇಶಲದಲಿ ಮದುವೆಗೆ ಮೊದಲೇ ಹಾಸಿಗೆ ಹಂಚಿಕೊಳ್ಳಬೇಕು ಅಂದ್ರೆ ನಿಮಗೂ ಶಾಕ್‌ ಆಗುತ್ತೆ ಅಲ್ವಾ.

ಹೌದು ಈ ರೀತಿಯ ವಿಚಿತ್ರ ಪದ್ಧತಿ ಇರೋದು ಕಾಂಬೋಡಿಯದ ರತನಗಿರಿ ಅನ್ನೋ ಪ್ರಾಂತ್ಯದಲ್ಲಿ. ಅಲ್ಲಿ ಈ ಸಂಪ್ರದಾಯವನ್ನು ಪ್ರತಿಯೊಬ್ಬ ಹುಡುಗಿಯು ಪಾಲಿಸಲೇ ಬೇಕು. ಹುಡುಗಿ ವಯಸ್ಸಿಗೆ ಬಂದ ಮೇಲೆ ಆಕೆಯನ್ನು ಏಕಾಂತವಾಗಿ ಬಿಟ್ಟು ಬಿಡುತ್ತಾರೆ. ಅಷ್ಟೇ ಅಲ್ಲದೇ ಯಾರೊಂದಿಗಾದರು ಲೈಂಗಿಕ ಕ್ರಿಯೆ ನಡೆಸುವ ಅವಕಾಶವನ್ನು ಸಹ ಕೊಡುತ್ತಾರೆ. ಕಾಂಬೋಡಿಯಾದ ರತನಗಿರಿ ಪ್ರಾಂತ್ಯದಲ್ಲಿ ಜೀವನ ನಡೆಸುತ್ತಿರೋ ಕ್ರೆಯೋ ಅನ್ನೋ ಜನಾಂಗದವರು ವಿಂಥೆ ಅನ್ನೋ ಸಂಪ್ರದಾಯ ಬೆಳೆಸಿಕೊಂಡು ಬಂದಿದ್ದು 13 ವರ್ಷ ದಾಟಿದ ಹುಡುಗಿಯರಿಗೆ ಸ್ವ ಇಚ್ಛೆ ಅಧಿಕಾರವನ್ನು ನೀಡುತ್ತಾರೆ.

ಅದರ ಪ್ರಕಾರ ಅವಳು ತನಗೆ ಇಷ್ಟವಾದ ಹುಡುಗನನ್ನು ಪ್ರೀತಿಸ ಬಹುದು, ಆನಂತರ ಆತನ ಜೊತೆ ಲೈಂಗಿಕ ಕ್ರಿಯೆ ನಡೆಸಬಹುದು. ಒಂದು ವೇಳೆ ಆತ ಇಷ್ಟವಾಗಲಿಲ್ಲ ಅಂತೆ ಮತ್ತೊಬ್ಬನನ್ನು ಇಷ್ಟಪಟ್ಟು ಆವನ ಜೊತೆಯು ಮುಂದುವರೆಯ ಬಹುದು, ಈ ರೀತಿ ತನಗೆ ಇಷ್ಟವಾಗುವ ವರೆಗೆ ಈ ರೀತಿ ಮಾಡಬಹುದಾಗಿದ್ದು ಕೊನೆ ಇಷ್ಟವಾದ ವ್ಯಕ್ತಿಯನ್ನು ಮದುವೆಯಾಗಬಹುದಾಗಿದೆ. ಇನ್ನು ಆ ಪ್ರದೇಶದಲ್ಲಿ ನಿರ್ಮಿಸುವ ಗುಡಿಸಲನ್ನು ಹುಡುಗಿ 13 ವರ್ಷಕ್ಕೆ ಬಂದಾಗ ಆಕೆಯ ಅಪ್ಪನೇ ನಿರ್ಮಿಸಿಕೊಡುತ್ತಾರೆ. ಆಕೆಗೆ ಇಷ್ಟವಾಗುವ ಹುಡುಗ ಸಿಗುವ ವರೆಗೂ ಆಕೆ ಆ ಗುಡಿಸಲಿನಲ್ಲಿಯೇ ಜೀವನ ನಡೆಸಬೇಕು. ಇನ್ನು ಈ ರೀತಿ ಮಾಡಲು ಕಾರಣ ಆಕೆ ಸಾಮಾಜಿಕವಾಗಿ ಮತ್ತು ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಈ ಪದ್ಧತಿ ಮಾಡಲಾಗಿದೆ ಎಂದು ಹೇಳುತ್ತಾರೆ.

ಇನ್ನು ಕೆಲವು ನಿಯಮಗಳು ಸಹ ಇದ್ದು, ಅವಕಾಶ ಸಿಕ್ಕಿತು ಎಂದು ಇಷ್ಟ ಬಂದ ಹಾಗೇ ಸೆಕ್ಸ್‌ನಲ್ಲಿ ತೊಡಗಿಕೊಳ್ಳುವ ಹಾಗಿಲ್ಲ, ಅದಕ್ಕಾಗಿ ಒಂದಿಷ್ಟು ನಿಯಮಗಳನ್ನು ಸಹ ಇರುತ್ತವೆ. ಹೀಗೆ ಮಾಡುವುದರಿಂದ ಕೆಟ್ಟ ಸಹವಾಸಗಳಿಗೆ ದಾರಿ ಮಾಡಿಕೊಳ್ಳದೆ, ಉತ್ತಮ ಸಂಬಂಧಕ್ಕೆ ಅವಕಾಶ ಕಲ್ಪಿಸುತ್ತದೆ ಎಂದು ಅಲ್ಲಿನ ಜನ ನಂಬಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top