ಕೇಬಲ್ ಬಿಲ್‍ನಲ್ಲಿ ಭಾರೀ ಇಳಿಕೆ, ಕಮ್ಮಿಯಾಗುತ್ತೆ ಬಿಲ್ ಹೊರೆ..!

ಕೇಬಲ್ ಮತ್ತು ಡಿಟಿಎಚ್‍ನಲ್ಲಿ ಬಿಲ್ ಜಾಸ್ತಿ ಆಯ್ತು ಅನ್ನೋ ಕೂಗು ಇತ್ತಿಚೆಗೆ ಟಿವಿ ನೋಡೋ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯವಾಗಿತ್ತು, ಟ್ರಾಯ್ ಮಾಡಿದ ಅದೊಂದು ನೀತಿಯಿಂದಾಗಿ ಗ್ರಾಹಕರಿಗೆ ದುಬಾರಿ ಎನಿಸಿತ್ತು, ಅಲ್ಲದೇ ಈ ವಿಚಾರವಾಗಿ ಅನೇಕ ದೂರುಗಳು ಸಹ ಟ್ರಾಯ್ ಗೆ ಬರುತ್ತಿವೆ, ಹೀಗಾಗಿ ಪ್ರಸಾರ ಮತ್ತು ಕೇಬಲ್ ಉದ್ಯಮದ ತೆರಿಗೆಯನ್ನು ಮರುಪರಿಶೀಲಿಸಲು ಟ್ರಾಯ್ ನಿರ್ಧಾರ ತೆಗೆದುಕೊಂಡಿದೆ..
ಈ ಹಿಂದೆ ಡಿಸೆಂಬರ್ ನಲ್ಲಿ ಕೇಬಲ್ ಸೇವೆಯಲ್ಲಿ ಭಾರೀ ಬದಲಾವಣೆಯಾಗಿದ್ದವು, ಹೊಸ ನಿಯಮದ ಪ್ರಕಾರ ನಿಮಗೆ ಬೇಕಾದ ಜಾನೆಲ್‍ಗಳನ್ನು ಆಯ್ಕೆ ಮಾಡಿ ಅದಕ್ಕೆ ಮಾತ್ರ ಹಣ ಪಾವತಿ ಮಾಡೋ ನಿಯಮವನ್ನು ಟ್ರಾಯ್ ತಂದಿತ್ತು, ಆದ್ರೆ ಅದು ಗ್ರಾಹಕರ ಮೇಲೆ ಹೊರೆ ಬಿದ್ದಂತಾಗಿತ್ತು, ಮೊದಲು ನೀಡುತ್ತಿದ್ದ ಬಿಲ್‍ಗಿಂತ ದುಬಾರಿ ಬಿಲ್ ನೀಡಬೇಕಾಗಿತ್ತು, ಇದರಿಂದ ಅನೇಕರು ಹೊಸ ನಿಯಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ರು, ಈಗ ಗ್ರಾಹಕರ ದೂರಿಗೆ ಪರಿಹಾರ ಕಂಡುಕೊಳ್ಳಲು ಟ್ರಾಯ್ ನಿರ್ಧರಿಸಿದ್ದು, ಕೇಬಲ್ ಬಿಲ್ ದರವನ್ನು ಕಡಿಮೆ ಮಾಡೋ ಬಗ್ಗೆ ಮುಂದಾಗಿದೆ, ಮುಂದಿನ ದಿನಗಳಲ್ಲಿ ಚಾನೆಲ್‍ಗಳ ದರದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ.

ಈ ಹಿಂದೆ ಟ್ರಾಯ್ ತಂದಿದ್ದ ಹೊಸ ನಿಯಮ ಗ್ರಾಹಕರಿಗೆ ಸರಿಯಾಗಿ ತಲುಪದಿರುವುದೇ ಈ ಸಮಸ್ಯೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಬಳಕೆದಾರರು ತಮಗೆ ಬೇಕಾದ ಚಾನೆಲ್ ಮಾತ್ರ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಟ್ರಾಯ್ ಮಾಡಿರೋ ಹೊಸ ನಿಯಮಕ್ಕೆ ಕೇಬಲ್ ಆಪರೇಟರ್ ಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ದೂರುಗಳು ಸಹ ಬಂದಿದ್ದು, ಚಾನೆಲ್ ಆಯ್ಕೆ ಬಗ್ಗೆ ಬಳಕೆದಾರರಲ್ಲಿ ಗೊಂದಲಗಳಿವೆ ಎಂದು ಕೇಬಲ್ ಆಪರೇಟರ್ ಗಳು ದೂರುತ್ತಿದ್ದಾರೆ. ತಮಿಗಿಷ್ಟವಾದ ಚಾನೆಲ್ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ಇಲ್ಲದಿರುವುದು ದುಬಾರಿ ಬೆಲೆಗೆ ಕಾಣವಾಗಿದೆ ಎಂದು ಟ್ರಾಯ್ ಹೇಳಿದೆ.

ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಟ್ರಾಯ್ ಈಗ ಮರುಪರಿಶೀಲಿಸಲು ನಿರ್ಧರಿಸಲಿದ್ದು ಮುಂದಿನ ದಿನಗಳಲ್ಲಿ ಚಾನೆಲ್‍ಗಳ ದರಗಳಲ್ಲಿ ಮತ್ತೆ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top