CAA ಬಗ್ಗೆ ವಿರಾಟ್ ಕೊಹ್ಲಿ ಶಾಕಿಂಗ್ ಹೇಳಿಕೆ..!

ಸಿಎಎ..ಈ ಬಗ್ಗೆ ಈಗಾಗಲೇ ದೇಶದಲ್ಲಿ ಅನೇಕ ಪರ ವಿರೋಧಗಳು ವ್ಯಕ್ತವಾಗಿದ್ದು, ಇದರ ಬಗ್ಗೆ ಅನೇಕ ಪ್ರತಿಭಟನೆಗಳು ನಡೆದಿವೆ, ಜೊತೆಗೆ ಕೆಲವು ಕಡೆ ಅದು ಹಿಂಸೆಗೂ ತಿರುಗಿಕೊಂಡಿದೆ. ಇನ್ನು ಸಿಎಎ ಪರವಾಗಿ ಅನೇಕ ರ್ಯಾಲಿಗಳು ಸಹ ನಡೆದಿದೆ.. ಇದರ ಜೊತೆಯಲ್ಲಿಯೇ ದೇಶದ ಅನೇಕ ಗಣ್ಯ ತಮ್ಮ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಜೊತೆಗೆ ಅನೇಕ ಸೆಲೆಬ್ರಿಟಿಗಳು ಸಹ ಇದರ ಬಗ್ಗೆ ಪರ ವಿರೋಧವಾದ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಆದ್ರೆ ಈಗ ಈ ವಿಚಾರವಾಗಿ ಟೀಂ ಇಂಡಿಯಾದ ಕ್ಯಾಪ್ಟನ್ ರನ್ ಮಷಿನ್ ವಿರಾಟ್ ಕೊಹ್ಲಿ ಕೂಡ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ. ಏನೂ ಆ ಹೇಳಿಕೆ ಅನ್ನೋದನ್ನು ತಿಳಿದುಕೊಳ್ಳ ಬೇಕಾದ್ರೆ ನೀವಿನ್ನೂ ನಮ್ಮ ಚಾಲೆನೆಲ್‍ಗೆ ಸಬ್‍ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್‍ಸ್ಕ್ರೈಬ್ ಆಗಿ ಮತ್ತು ಪಕ್ಕದಲ್ಲಿರುವ ಬೆಲ್ ಐಕಾನ್ ಅನ್ನು ಪ್ರೆಸ್ ಮಾಡಿ, ಹೌದು ಸ್ನೇಹಿತರೇ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಿಎಎ ವಿಚಾರವಾಗಿ ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ವರದಿಗಾರರು ಕೇಳಿದ ಪ್ರಶ್ನೇಗೆ ವಿರಾಟ್ ಜಾಣ್ಮೆ ರೀತಿಯಲ್ಲಿ ಉತ್ತರವನ್ನು ನೀಡಿದ್ದಾರೆ. ` ಈ ವಿಷಯದ ಬಗ್ಗೆ ನಾನು ಬೇಜವಾಬ್ದಾರಿಯಿಂದ ನಡೆದುಕೊಳ್ಳಲಾರೆ, ಇಲ್ಲಿ ಎರಡೂ ಕಡೆಯವರಿಂದ ಪ್ರಬಲ ವಾದಗಳು ಕೇಳಿ ಬರುತ್ತಿವೆ. ಸಿಎಎ ಎಂದರೇನು..? ಇದರಿಂದ ಮುಂದೆ ಏನಾಗುತ್ತೆ..? ಎಂಬುದರ ಬಗ್ಗೆ ನಾನು ಸಂಪೂರ್ಣ ತಿಳಿದುಕೊಳ್ಳಬೇಕಿದೆ.ಹಾಗೆ ತಿಳಿದುಕೊಂಡ ನಂತರವೇ ನಾನು ಒಂದು ಜವಾಬ್ದಾರಿಯುತ ಅಭಿಪ್ರಾಯ ವ್ಯಕ್ತಪಡಿಸಬಲ್ಲೆ’ ಎಂದು ವಿರಾಟ್ ಉತ್ತರ ನೀಡಿದ್ದಾರೆ.


ಒಟ್ಟಿನಲ್ಲಿ ತಮಗೆ ತಿಳಿಯದೇ ಇರುವ ವಿಚಾರದ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವ ಬದಲು ಅದರ ಬಗ್ಗೆ ತಿಳಿದುಕೊಂಡು ಉತ್ತರ ನೀಡುವುದು ಉತ್ತಮ ಅನ್ನೋದನ್ನ ವಿರಾಟ್ ಕೊಹ್ಲಿ ಇಲ್ಲಿ ಜಾಣ್ಮೆಯಾಗಿ ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದರ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top