ಜಿಯೋ ಸಿಮ್ ಖರೀದಿಸಿದರೆ, ಒಂದು ಕೆ.ಜಿ. ಈರುಳ್ಳಿ ಉಚಿತ!

ಅಯ್ಯೋ ದೇವರೇ ಇದೇನ್ ಈ ತರ ಇದೆ ಆಫರ್ ಅಂತ ಆಶ್ಚರ್ಯ ಪಡಬೇಡಿ. ಈ ತರಹದ ಆಫರ್ ಕೊಡ್ತಿರೋದಂತೂ ನಿಜ. ಅದು ಕರ್ನಾಟಕದಲ್ಲೆ, ಈರುಳ್ಳಿ ಬೆಲೆ ಗಗನಕ್ಕೇರಿರೋ ಈ ಸಮಯದಲ್ಲಿ ಈರುಳ್ಳಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಈರುಳ್ಳಿ ಬಗ್ಗೆ ಸಾಕಷ್ಟು ವೀಡಿಯೋಗಳು ವೈರಲ್ ಆಗಿವೆ ಜನರು ಸಿಕ್ಕಾಪಟ್ಟೆ ಎಂಜಾಯ್ ಕೂಡ ಮಾಡ್ತಿದ್ದಾರೆ,

ಸದ್ಯ ಈರುಳ್ಳಿ ಬೆಲೆ 100 ರಿಂದ 120 ರೂಪಾಯಿ ಇದೆ, ಇದೇ ವೇಳೆ ಮಹಿಳೆಯರು ಅಡುಗೆ ಮಾಡುವ ವೇಳೆ ಈರುಳ್ಳಿ ಬಗ್ಗೆ ಸಖತ್ ಕಂಜೂಸ್ ಆಗಿರೋದಂತು ನಿಜ, ಹೊಟೇಲ್ ಗಳಲ್ಲಿ ಆನಿಯನ್ ದೋಸೆ, ಉತ್ತಪ್ಪ, ಈರುಳ್ಳಿ ಬಜ್ಜಿ ಸಿಗುವುದು ಕಷ್ಟವಾಗಿದೆ. ಇದೇ ವೇಳೆ ಹಲವಾರು ರೈತರು ಲಕ್ಷಾಧೀಶ್ವರು ಆಗಿದ್ದು ನಿಜ, ಚಿತ್ರದುರ್ಗದ ರೈತ ಮಲ್ಲಿಕಾರ್ಜುನ ಎನ್ನುವವರು ಕೋಟ್ಯಾಧಿಪತಿ ಆಗಿದ್ದು ದೇಶದೆಲ್ಲೆಡೆ ಸುದ್ದಿ ಆಯ್ತು

ಹೀಗಿರುವಾಗ ಈ ಈರುಳ್ಳಿಯನ್ನೇ ಮಾರ್ಕೆಟಿಂಗ್ ಮಾಡೋಕೆ ಬಳಸಿಕೊಂಡು ತಮಿಳುನಾಡಿನ ಎಸ್.ಟಿ.ಆರ್ ಮೊಬೈಲ್ಸ್ ಮಾಲೀಕ ಮೊಬೈಲ್ ಕೊಂಡವರಿಗೆ, ತಮ್ಮ ಅಂಗಡಿಯಲ್ಲಿ ಸ್ಮಾರ್ಟ್ ಫೋನ್ ಖರೀದಿಸಿದ್ರೆ ಒಂದು ಕೆಜಿ ಈರುಳ್ಳಿಯನ್ನು ಉಚಿತವಾಗಿ ಕೊಟ್ಟು ಸುದ್ದಿಯಾಗಿದ್ದರು, ಇದೀಗ ನಮ್ಮ ಶಿವಮೊಗ್ಗದ ಜಿಯೋ ಈರುಳ್ಳಿ ಆಫರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದೆ

ಹೌದು ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಗ್ರಾಹಕರು 300 ರೂ. ಕೊಟ್ಟು ಜಿಯೋ ಸಿಮ್ ಖರೀದಿಸಿದರೆ, ಒಂದು ಕೆ.ಜಿ. ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಮೂಲಕ ಜಿಯೋ ಟೆಲಿಕಾಂ ಸಂಸ್ಥೆ ಗ್ರಾಹಕರ ಗಮನವನ್ನು ಸೆಳೆಯುತ್ತಿದೆ.

ಅಂದ ಹಾಗೆ ನಿಮ್ಮೂರಲ್ಲಿ ಈರುಳ್ಳಿ ಬೆಲೆ ಎ‍ಷ್ಟಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top