ಭಾರತದ ವಿರುದ್ಧ ಕ್ರಿಕೆಟ್‌ ಆಡಲ್ಲ ಎಂದ ಕ್ರಿಕೆಟ್‌ ದೈತ್ಯ ಕ್ರಿಸ್‌ ಗೇಲ್‌..!

ಕ್ರಿಕೆಟ್‌ ದೈತ್ಯ ಕ್ರಿಸ್‌ ಗೇಲ್‌ ಅವರ ಈ ಒಂದು ಹೇಳಿಕೆ ಈಗ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಹೌದು ಡಿಸೆಂಬರ್‌ 6 ರಿಂದ ಆರಂಭವಾಗಲಿರೋ ಭಾರತ ಹಾಗೂ ವೆಸ್ಟ್‌ಇಂಡೀಸ್‌ ಟಿ20ಯಲ್ಲಿ ಕೆರಿಬಿಯನ್‌ ಟೀಂನಲ್ಲಿ ಗೇಲ್‌ ಅಬ್ಬರಿಸಲಿದ್ದಾರೆ ಅಂತ ಹೇಳುತಿದ್ರು, ಆದ್ರೆ ಗೇಲ್‌ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವೆಸ್ಟ್‌ಇಂಡೀಸ್‌ ಟೀಂ ಸೆಲೆಕ್ಟರ್‌ ನನ್ನನ್ನು ಟೀ ಇಂಡಿಯಾ ವಿರುದ್ಧ ಪಂದ್ಯಕ್ಕೆ ಹೋಗಲು ಹೇಳಿದ್ದಾರೆ. ಆದ್ರೆ ನಾನು ಭಾರತದ ವಿರುದ್ಧ ಆಡುತ್ತಿಲ್ಲ, ಸದ್ಯ ಕ್ರಿಕೆಟ್‌ನಿಂದ ಕೊಂಚ ಬ್ರೇಕ್‌ ತೆಗೆದುಕೊಂಡು ಇನ್ನಷ್ಟು ಫಿಟ್‌ ಆಗಿ 2020ರಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಪಂದ್ಯಗಳತ್ತ ನನ್ನ ಟೈಂ ಕೊಡಬೇಕು ಹಾಗಾಗಿ ನಾನು ಟೀಂ ಇಂಡಿಯಾದ ವಿರುದ್ಧ ಪಂದ್ಯದಲ್ಲಿ ಆಡುವುದಿಲ್ಲ ಅಂತ ಹೇಳಿದ್ದಾರೆ.

ಇನ್ನೂ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌ಬ್ಯಾಷ್‌ ಲೀಗ್‌ನಲ್ಲೂ ಸಹ ಗೇಲ್‌ ಆಡೋದಿಲ್ವಂತೆ. ಅಲ್ಲದೇ ಮುಂದೆ ಇನ್ನು ಯಾವ ರೀತಿಯ ಕ್ರಿಕೆಟ್‌ ಬರುತ್ತೊ ಗೊತ್ತಿಲ್ಲ, ಬಾಂಗ್ಲಾದೇಶ್‌ ಲೀಗ್‌ನಲ್ಲಿ ಭಾಗವಹಿಸುತ್ತಿದ್ದೇನೆ ಅಂತ ನನ್ನ ಹೆಸರು ಕೇಳಿ ಬರ್ತಾ ಇದೆ. ಅದು ಹೇಗೆ ಅಂತ ನನಗೂ ಗೊತ್ತಿಲ್ಲ ಅಂತ ಕ್ರಿಕೆಟ್‌ ದೈತ್ಯ ಕ್ರಿಸ್‌ಗೇಲ್‌ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top