ಕೊರೋನಾ ಹಾವಳಿಯಿಂದಾಗಿ ಎಲ್ಲಾ ಕಡೆ ಅವಾಂತರಗಳು ಸೃಷ್ಟಿಯಾಗಿದ್ದು, ವ್ಯಾಪಾರ,ವ್ಯಹಾರಗಳಲ್ಲಿ ಅದೆಷ್ಟೋ ಜನ ನಷ್ಟವನ್ನು ಅನುಭವಿಸಿದ್ದಾರೆ. ಇನ್ನು ಅದೆಷ್ಟೋ ಸಭೆ ಸಮಾರಂಭಗಳು ಮುಂದೂಡಿಕೆಯಾಗಿವೆ. ಅದರಲ್ಲೂ ಹೊಸ ಬಾಳಿಗೆ ಪ್ರವೇಶ ಪಡೆಯ ಬೇಕಾಗಿದ್ದ ಜೋಡಿಗಳು ಮದುವೆಯನ್ನು ಮುಂದಕ್ಕೆ ಹಾಕಿಕೊಂಡಿದ್ರೆ, ಇನ್ನು ಕೆಲವ್ರು ಆದ್ಧೂರಿಯಾಗಿ ಆಚರಿಸ ಬೇಕಾಗಿದ್ದ ಮದುವೆಯನ್ನು ಕೆಲವೇ ಜನರ ಸಮ್ಮುಖದಲ್ಲಿ ಆಗಿ ಮುಗಿಸಿಕೊಂಡಿದ್ದಾರೆ.
ಹೀಗಿರುವಾಗ ತಮ್ಮ ಮದುವೆ ಕೊರೋನಾದಿಂದಾಗಿ ಮುಂದೂಡಿಕೆಯಾಗಿದೆ ಎಂದು ಒಂದಿಷ್ಟು ವಧುಗಳು ಕೊರೋನಾ ವಿರುದ್ಧ ಪ್ರತಿಭಟನೆ ಮಾಡಿರುವ ಘಟನೆ ಈಗ ಬೆಳಕಿಗೆ ಬಂದಿದೆ. ಕೊರೋನಾ ವಿರುದ್ಧ ಬೋರ್ಡ್ಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿರುವ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.
ಹೌದು ಈ ರೀತಿಯ ವಿಚಿತ್ರ ಘಟನೆ ನಡೆದಿರೋದು ಇಟಲಿಯ ರೋಮ್ ನಗರದಲ್ಲಿ, ಇಲ್ಲಿ ಕೆಲವ ಹುಡುಗಿಯರು ಮಧುವಣಗಿತ್ತಿಯರಂತೆ ರೆಡಿಯಾಗಿ ಕೊರೋನಾ ವಿರುದ್ಧ ಕೆಲವು ಘೋಷಣೆಗಳಿರುವ ಬೋರ್ಡ್ಗಳನ್ನು ಹಿಡಿದು ಕೊರೋನಾದಿಂದಾಗಿ ನಮ್ಮ ಮದುವೆ ದಿನಾಂಕ ಮುಂದೂಡಿಕೆಯಾಗಿದೆ,ನಾವೂ ಕೊರೋನಾ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಕೊರೋನಾ ಹಾವಳಿಯಿಂದಾಗಿ ಈ ವರ್ಷ ನಿಗದಿಯಾಗಿದ್ದ ನನ್ನ ಮದುವೆ ದಿನಾಂಕ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದ್ದು, ಇದರಿಂದಾಗಿ ಈ ವರ್ಷ ನಾನು ಅನುಭವಿಸಬೇಕಾಗಿದ್ದ ಮಧುರ ಕ್ಷಣಗಳನ್ನು ನಾನು ಮಿಸ್ ಮಾಡಿಕೊಂಡಿದ್ದೇನೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾಳೆ.
ಇನ್ನು ಕೊರೋನಾ ಹಾವಳಿಯಿಂದ ಎಲ್ಲಾ ಕಡೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳು ಮುಂದೂಡಿಕೆಯಾಗುತ್ತಿದ್ದು, ಸದ್ಯ ರೋಮ್ನಲ್ಲಿ ನಡೆದ ಈ ಪ್ರತಿಭಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಒಂದಷ್ಟು ತರಹೇವಾರಿ ಕಾಮೆಂಟ್ಗಳನ್ನು ಮಾಡುವ ಮೂಲಕ ತಮಾಷೆ ಮಾಡುತ್ತಿದ್ದಾರೆ.