ಮೈಸೂರು ದಸರಾದಲ್ಲಿ ಬಿಗ್‍ಬಾಸ್ ಶಾಲಿನಿ ಡಪಾಂಗುಚ್ಚಿ ಸ್ಟೆಪ್ಸ್- ವಿಡಿಯೋ ವೈರಲ್..!

bigg boss shalini dance

ಪಾಪ ಪಾಂಡು ಖ್ಯಾತಿಯ, ಬಿಗ್‍ಬಾಸ್ ಸ್ಪರ್ಧಿ ಶಾಲಿನಿ, ಸದ್ಯ ಸ್ಮಾಲ್ ಸ್ಕ್ರೀನ್‍ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರೋ ನಟಿ, ಒಂದಿಲ್ಲೊಂದು ರಿಯಾಲಿಟಿ ಶೋಗಳ ಆ್ಯಂಕರಿಂಗ್ ಮಾಡುತ್ತಾ ಪ್ರತಿಯೊಬ್ಬರ ಮನೆಮನೆಯಲ್ಲಿ ಮಾತಾಗಿರೋ ಶಾಲಿನಿ ಈಗ ಮತ್ತೆ ಸಖತ್ ಸುದ್ದಿಯಾಗಿದ್ದಾರೆ, ರೋಡ್ ಸೈಡ್‍ನಲ್ಲಿ ತಮಟೆ ಸದ್ದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕೋ ಮೂಲಕ ಈಗ ಸಖತ್ ಸುದ್ದಿಯಾಗಿದ್ದಾರೆ. ಶಾಲಿನಿ ಸ್ಟೆಪ್ಸ್ ಹಾಕ್ತಾ ಇರೋ ವಿಡಿಯೋ ಈಗ ಎಲ್ಲಾ ಕಡೆ ವೈರಲ್ ಆಗಿದ್ದು, ಏನ್ ಸ್ಟೆಪ್ಸ್ ಗುರು ಅಂತ ಹೇಳ್ತಿದ್ದಾರೆ, ಡ್ಯಾನ್ಸ್ ಪ್ರಿಯರು,ಇನ್ನು ಶಾಲಿನಿ ಈ ರೀತಿ ಭರ್ಜರಿಯಾಗಿ ಕುಣಿದಿರೋದು ಬೇರೆ ಎಲ್ಲೂ ಅಲ್ಲ ನಮ್ಮ ಮೈಸೂರು ದಸರಾದಲ್ಲಿ ದಸರಾ ಉತ್ಸವ ಈಗಾಗಲೇ ಶುರುವಾಗಿದ್ದು ಶಾಲಿನಿ ಜೀವನದಲ್ಲಿ ಮೊದಲ ಬಾರಿಗೆ ಮೈಸೂರು ದಸರಾ ನೋಡುತ್ತಿದ್ದಾರಂತೆ.

ತಮ್ಮ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಬರೆದಿಕೊಂಡಿರೋ ಶಾಲಿನಿ ರಸ್ತೆಯಲ್ಲಿ ಮೈಸೂರು ದಸರಾ ವೀಕ್ಷಣೆ ಮಾಡುತ್ತಾ ಹೋಗುವಾಗ ತಮಟೆ ಸದ್ದು ಕೇಳಿದ ಕೂಡಲೇ ಡ್ಯಾನ್ಸ್ ಮಾಡಲು ಶುರುಮಾಡಿಕೊಂಡಿದ್ದಾರೆ, ಈ ಸಂತಸದ ಕ್ಷಣಗಳನ್ನು ತಮ್ಮ ಪೇಜ್‍ನಲ್ಲಿ ಶೇರ್ ಮಾಡಿದ್ದು ಈ ವಿಡಿಯೋ ಈಗ ಸಖತ್ ವೈರಲ್ ಕೂಡ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top